•  
  •  
  •  
  •  
Index   ವಚನ - 170    Search  
 
ಭಕ್ತನ ಜ್ಞಾನಿಸ್ಥಲ - ಪೂಜೆ
ಹೊಯ್ದರೆ ಹೊಯ್ಗಳು ಕೈಯ ಮೇಲೆ; ಬಯ್ದರೆ ಬೈಗುಳು ಕೈಯ ಮೇಲೆ! ಹಿಂದಣ ಜನನವೇನಾದೊಡಾಗಲಿ- ಇಂದಿನ ಭೋಗವು ಕೈಯ ಮೇಲೆ! ಕೂಡಲಸಂಗಮದೇವಯ್ಯಾ. ನಿಮ್ಮ ಪೂಜಿಸಿದ ಫಲ ಕೈಯ ಮೇಲೆ!
Transliteration Hoydare hoygaḷu kaiya mēle; baidaḍe baiguḷu kaiya mēle! Hindaṇa jananavēnādaḍāgali- indina bhōgavu kaiya mēle! Kūḍalasaṅgamadēvayyā. Nim'ma pūjisida phala kaiya mēle!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Whenever you strike, the stroke,s in hand; Whenever you curse, the curse's in hand... Let be whatever past life was: Today's enjoyment is in hand! O Kūḍala Saṅgama Lord, The fruit of your worship is in hand! Translated by: L M A Menezes, S M Angadi
Hindi Translation मारने से मार हाथ लगेगी गाली देने से गाली हाथ लगेगी गत जन्म कुछ भी होगा आज का भोग हाथ में होगा । कूडलसंगमदेव तव पूजा फल हाथ में होगा ॥ Translated by: Banakara K Gowdappa
Telugu Translation కొట్టిన కొట్టులు వెన్వెంటనె తిట్టిన తిట్టులు వెన్వెంటనె ఇప్పటి భోగం బిప్పుడిప్పుడే! ముందటికిక జన్మంబెటులో గాని కూడల సంగమదేవయ్యా; నిను పూజించిన ఫలమిప్పటిదయ్యా! Translated by: Dr. Badala Ramaiah
Tamil Translation அடித்தால் அடிகள் கை மேலே,, திட்டினால் திட்டுகள் கைமேலே இனி எழும் பிறப்பு எத்தன்மைத் தாயினென்ன? இன்று துய்த்தல் கை மேலே கூடல சங்கம தேவய்யனே உம்மை வணங்கிய பயன் கைமேலே. Translated by: Smt. Kalyani Venkataraman, Chennai
Marathi Translation मारले तर मार मिळेल. शिव्या दिल्या तर शिव्या मिळतील पूर्वजन्मात काहीही होवो. आजचे कर्म आजच भोगावे. कूडलसंगमदेवा, तुमच्या पूजेचे फळ हातात मिळेल. Translated by Shalini Sreeshaila Doddamani
Urdu Translation تم جو پیٹوکسی کوہاتھوں سے اُن ہی ہاتھوں سے اجرپاؤگے گالیوں کا صلہ بھی گالی ہے تم کوپچھلےجنم کی فکرہےکیوں اپنی قسمت کوخود بنانا ہے آج کا سُکھ توآج ملتا ہے کوڈلا سنگما کی پوجا کا پھل بھی ملتا ہےاس جنم میں ہی Translated by: Hameed Almas
ಶಬ್ದಾರ್ಥಗಳು ಭೋಗ = ಆಸೆ; ಹೊಯ್ಗಳು = ;
ಕನ್ನಡ ವ್ಯಾಖ್ಯಾನ ಶಿವನ ಕೃಪೆಗೆ-ಪಾತ್ರನಾದರೆ ಸತ್ಫಲ ಸಿಗುವುದು ತಡವೇನಿಲ್ಲ. ನೆಲವನ್ನು ತಟ್ಟಿದ ಕೈಗೆ ಪೆಟ್ಟು ತಟ್ಟನೆ ಹಿಂದಿರುಗಿ ತಗಲುವಂತೆ, ಕೂಗುಬಂಡೆಯ ಮುಂದೆ ಬೈದರೆ ಆ ಬೈಗಳು ಒಡನೆಯೇ ಹಿಂದಿರುಗಿ ಬೈಯುವಂತೆ-ಇಂದು ಮಾಡಿದ ಶಿವಪೂಜೆಯ ಫಲ ಈಗಲೇ ಲಭಿಸುವುದು-ನೀನು ಹಿಂದಣ ಜನ್ಮದಲ್ಲಿ ಮಾಡಿದ ದುಷ್ಕೃತ್ಯವದಕ್ಕೇನೂ ಅಡ್ಡಿಯಾಗುವುದಿಲ್ಲ. ನಾನು ಪಾಪಿ, ನನ್ನ ಗತಿಯಿನ್ನೇನೆಂದು ಎದೆಗುಂದಬೇಡ-ಶಿವನಿಗೆ ಶರಣಾಗತನಾಗು-ಅವನ ಪೂಜೆ ಮಾಡು-ಅದರ ಫಲ ನಿನಗೀಗಲೇ ಕೈಗೂಡುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು