•  
  •  
  •  
  •  
Index   ವಚನ - 171    Search  
 
ಭಕ್ತನ ಜ್ಞಾನಿಸ್ಥಲ - ಶರಣರು
ಆದ್ಯರ ವಚನ ಪರುಷ ಕಂಡಣ್ಣಾ: ಸದಾಶಿವನೆಂಬ ಲಿಂಗವ ನೆರೆನಂಬುವುದು; ನಂಬಲೊಡನೆ ನೀ ವಿಜಯಿ, ಕಂಡಣ್ಣಾ. ಅಧರಕ್ಕೆ ಕಹಿ, ಉದರಕ್ಕೆ ಸಿಹಿ: ಕೂಡಲಸಂಗನ ಶರಣರ ವಚನ ಬೇವ ಸವಿದಂತೆ.
Transliteration Ādyara vacana paruṣa kaṇḍaṇṇā; sadāśivanemba liṅga(vu): Nambuvudu, nambaloḍane nī vijayi kaṇḍaṇṇā. Adharakke kahi, udarakke sihi kūḍalasaṅgana śaraṇara vacana bēva savidante!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The words of the Pioneers, lo! Is the philosopher's stone! You must have faith in Liṅga , Sadāśiva by name. As soon as you believe, behold, There's victory! To the lips bitter, to the belly sweet- Kūḍala Saṅga's words Are like eating neem. Translated by: L M A Menezes, S M Angadi
Hindi Translation पूर्वजों का वचन पारस है सदाशिवलिंग पर विश्वास करो विश्वास करने पर तुम्हारी विजय होगी कूडलसंग के शरणों के वचन नीम चखने की भाँति अधर को कडुआ, उदर को मीठा है ॥ Translated by: Banakara K Gowdappa
Telugu Translation ఆద్యుల వచనము పరశువు కదయా సదాశివుడను లింగమును నెఱు నమ్ముమా: నమ్మితివా జయంబు నీ కగునయ్యా సంగని శరణుల వచనము వేము నమిలినటు పెదవికి చేదుదరమునకు తీపి!! Translated by: Dr. Badala Ramaiah
Tamil Translation ஆன்றோர் மொழி பரிசவேதி காணாய் சதாசிவனெனும் இலிங்கத்தை நயப்பாய், நயப்பின், நீ வென்றவன் காணாய் வாய்க்கைப்பு வயிற்றுக்கு நன்றாம் கூடல சங்கனின் அடியார் மொழி வேம்பினினிப்பனையதாம். Translated by: Smt. Kalyani Venkataraman, Chennai
Marathi Translation आद्यांचे वचन परिसाप्रमाणे पहा. तो परिस मला कसा मिळेल? लिंगदेवावर विश्वास ठेवावे. विश्वास ठेवल्याने तुला विजय मिळेल. अधराला कडू, उदराला गोड कूडलसंगमदेवाच्या शरणांचे वचन कडूनिंबाच्या सेवनेसम. Translated by Shalini Sreeshaila Doddamani
Urdu Translation کیا تمھیں اس کی خبربھی ہےکہ اسلاف کےقول نسل درنسل کی خاطرہیں کسوٹی کی طَرح یا سدا شیوکےلنگا پہ بھروسہ کرنا کامیابی کی ضمانت ہےہماری خاطر اوریہ کوڈلا سنگا کےشرن کے وچنا یوں تو ہیں تلخ بہت تلخ زباں کولیکن یہ شکم کے لیےشیریں ہیں بہت شیریں ہیں جس طرح نیم کے پتے ہیں کسِیلے شیریں Translated by: Hameed Almas
ಶಬ್ದಾರ್ಥಗಳು ಅಧರ = ತುಟಿ; ಉದರ = ಹೊಟ್ಟೆ; ಪರುಷ = ಸ್ಪರ್ಶ ಮಣಿ;
ಕನ್ನಡ ವ್ಯಾಖ್ಯಾನ ಹೊಟ್ಟೆಯ ರೋಗಗಳಿಗೆ ಚಿಕಿತ್ಸೆ ಮಾಡುವಾಗ-ಬೇವಿನ ಎಲೆಯ ರಸ, ಬೇವಿನ ಹೂವಿನ ಗುಲ್ಕನ್, ಬೇವಿನ ತೊಗಟೆಯ ಕಷಾಯ, ಬೇವಿನ ಎಣ್ಣೆಯನ್ನು ಉಪಯೋಗಿಸಲು ಹೇಳಿದೆ ಜಾನಪದ ಆಯುರ್ವೇದದಲ್ಲಿ.ಬೇವು ಇಡಿಯಾಗಿ ಮೈಗೆ ಒಳ್ಳೆಯದು. ಆದರೆ ತಿನ್ನಲು ಬಹಳ ವಿಷ-ತುಟಿಗೆ ಸೋಕಿದರೂ ಕಟುವಿಷ. ಶಿವಶರಣರ ಮಾತೂ ಹಾಗೆ-ಅದು ಕಿವಿಗೆ ಕಠಿಣವಾದರೂ ಆತ್ಮಕ್ಕೆ ಹಿತಕಾರಿ. ದೇವರನ್ನು ನಂಬು, ನಂಬಿದರೆ ನೀನು ಮಾಯಾಜಂಜಡದಿಂದ ಬಿಡುಗಡೆ ಪಡೆಯುವೆ-ಎಂದು ಮುಂತಾದ ಮಹಾತ್ಮರ ಉಪದೇಶ ವಾಕ್ಯಗಳು ಕಿವಿಗೆ ರುಚಿಸವಾದರೂ-ಅವನ್ನು ಆಲಿಸಿ ಪಾಲಿಸಿದರೆ ಈ ಭವರೋಗ ಪರಿಹಾರವಾಗುವುದು ನಿಶ್ಚಯ. ಈ ವಚನದಲ್ಲಿ ಬಸವಣ್ಣನವರು ತಮಗಿಂತಲೂ ಪೂರ್ವದವರಾದ ಮಾದಾರಚೆನ್ನಯ್ಯ ದೇವರದಾಸಿಮಯ್ಯ ಮುಂತಾದ ಶರಣರ ಕಟುವಾದರೂ ಪಥ್ಯವಾದ ವಿಚಾರಧಾರೆಯನ್ನು ಪ್ರಶಂಸಿಸಿರುವರು. (ಪರುಷ ಎಂದರೆ ಕಠಿನ)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು