ಹೊತ್ತಾರೆ ಎದ್ದು, ಅಗ್ಘವಣಿ ಪತ್ರೆಯ ತಂದು,
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು?
ಹೊತ್ತು ಹೋಗದ ಮುನ್ನ, ಮೃತ್ಯುವೊಯ್ಯದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಮದೇವನ.
Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Singer : Ravindra Sorgavi Music : Ravindra Sorgavi Label : Jhankar Music
English Translation 2Get up at dawn and bring
Water and bilwa leaves,
And worship Liṅga before
It is too late.
Who cares for you when once
The time is past?
Before time passes,
Before death carries you,
Do humble service to
Lord Kūḍala Saṅgama!
Translated by: L M A Menezes, S M Angadi
Hindi Translationउषःकाल उठकर जलपत्र लाओ-,
समय बीतने के पूर्व, लिंग पूजा करो
समय बीतने पर तुम्हें कौन जानेगा?
समय बीतने के पूर्व, मृत्यु ले जाने के पूर्व
कूडलसंगमदेव की सेवा करो ॥
Translated by: Banakara K Gowdappa
Telugu Translationప్రొద్దుననె లేచి ఆర్ఘ్యపత్రముల దెచ్చి
ప్రొద్దుముగ్గక ముందే పూజింపుమా!
ప్రొద్దుమునిగినంత నిను జూచు వారులేరు
ప్రొద్దుముగ్గక ముందె మిత్తి ముట్టకముందె;
తొత్తుపని సేయుమా సంగయ్యకు
తొత్తుపని సేయు మాసంగయ్యకు
Translated by: Dr. Badala Ramaiah
Tamil Translationவிடியலிலே எழுந்து, தூயநீர் வில்வம் தந்து,
பொழுதுபோகுமுன் இலிங்கத்தைத் தூவித் தொழாய்,
பொழுதுசாயின் உனையாரறிவர்?
காலமாகுமுன், இறுதிவருமுன்
கூடல சங்கம தேவனுக்குத் தொண்டு புரிவாய்.
Translated by: Smt. Kalyani Venkataraman, Chennai
Marathi Translationपहाटे उठून, पाणी बेल-पत्री आणून
वेळ जाण्यापूर्वी लिंगदेवाची पूजा कर.
वेळ निघून गेल्यावर तुला कोण विचारणार?
वेळ जाण्यापूर्वी, मृत्यू येण्याआधी कर्ता कूडलसंगाची पूजा कर.
Translated by Shalini Sreeshaila Doddamani
ಶಬ್ದಾರ್ಥಗಳುಅಗ್ಘವಣಿ = ಪೂಜೆಯ ಅಭಿಷೇಕಕ್ಕಾಗಿ ಬಳಸುವ ನೀರು; ತೊತ್ತು = ಸೇವೆ; ಮೃತ್ಯು = ಸಾವು; ಹೊತ್ತು = ಸಯಮ;
ಕನ್ನಡ ವ್ಯಾಖ್ಯಾನಹೊತ್ತೆಂದರೆ ಸೂರ್ಯ-ಹೊತ್ತಾಯಿತೆಂದರೆ ಸೂರ್ಯ ಮುಳುಗಿ ಕತ್ತಲಾವರಿಸಿತು. ಕಂಗೊಳಿಸುತ್ತಿದ್ದ ವಸ್ತುಗಳೆಲ್ಲ ಕಣ್ಮರೆಯಾದವು, ಕಳ್ಳಕಾಕರ ಭೀತಿ ಆವರಿಸಿತು, ಭೂತಪ್ರೇತಗಳ ಕಾಟ ಶುರುವಾಯಿತೆಂದೇ ಅರ್ಥ.
ಹೊತ್ತೆಂದರೆ ಜೀವಿತಾವಧಿ-ಹೊತ್ತಾಯಿತೆಂದರೆ ಮುಪ್ಪಾವರಿಸಿ ಬದುಕಿನ ಮೆರುಗೆಲ್ಲಾ ಕಣ್ಮರೆಯಾಯಿತು, ರೋಗರುಜಿನದ ಸಾವಿನ ಸರದಿ ಆರಂಭವಾಯಿತೆಂದೇ ಅರ್ಥ.
ಆದ್ದರಿಂದ ಹೊತ್ತು ಹುಟ್ಟಿ ಹೊತ್ತಿಳಿಯುವ ಈ ಮಧ್ಯಂತರದೊಳಗೇ ಬದುಕನ್ನು ಹಸನುಮಾಡಿಕೊಂಡಿರಬೇಕು. ಹಾಗಲ್ಲದೆ ಕೊನೆಕೊನೆಗೆ ಪಡುವ ಧಾವಂತದಿಂದ ದುಗುಡವೇ ಹೊರತು ಪ್ರಯೋಜನವೇನೂ ಆಗದು.
ಕೇಳು ಹೊತ್ತು ಹುಟ್ಟಿದ ಘಳಿಗೆಯಿಂದಲೇ-ದಿವ್ಯಜೀವನವೊಂದನ್ನು ಜೀವಿಸಲು ಪ್ರಾರಂಭಿಸಬೇಕು-ಎಂದು ಬಸವಣ್ಣನವರು ನಮ್ಮನ್ನು ಸಾಂಕೇತಿಕವಾಗಿ ಎಚ್ಚರಿಸುತ್ತಿರುವರು : ಬೆಳಗಾಯಿತೇಳು, ಹೃದಯದಲ್ಲಿ ಶಾಂತಿರಸವನ್ನು ತುಂಬಿಕೊಂಡು ಕೈಯಲ್ಲಿ ವೈರಾಗ್ಯದ ಬಿಲ್ವಪತ್ರವನ್ನು ಹಿಡಿದುಕೊಂಡು-ಲಿಂಗಪೂಜೆಯನ್ನು ಮಾಡೇಳು. ಹೊತ್ತು ಹೋದಮೇಲೆ ನಾವು ಏನನ್ನೂ ಮಾಡಲಾಗುವುದಿಲ್ಲ. ನಮ್ಮನ್ನು ಯಾರೂ ಕೇಳುವುದಿಲ್ಲ. ಶಿವನಿಗೆ ಸೇವೆ ಮಾಡೇಳು
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
C-554 
  Sat 04 Jan 2025  
ಪಂಡಿತ ರವೀಂದ್ರ ಸೋರೆಗಾಂವಿಯವರು ಬಹಳ ಸೊಗಸಾಗಿ ವಚನ ಗಾಯನ ಮಾಡಿದ್ದಾರೆ...ಧನ್ಯವಾದಗಳು🙏🙏   ಶರಣು.ರಂಗಪ್ಪ.ಪೂಜಾರ
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.