ಅಚ್ಚಿಗವೇಕಯ್ಯಾ ಸಂಸಾರದೊಳಗೆ?
ನಿಚ್ಚ ನಿಚ್ಚ ಶಿವರಾತ್ರಿಯ ಮಾಡುವುದು;
ಬೇಗ ಬೇಗ ಅರ್ಚನೆ-ಪೂಜೆನೆಯ ಮಾಡುವುದು,
ಕೂಡಲಸಂಗನ ಕೂಡುವುದು.
Transliteration Accigavēkayyā sansāradoḍane?
Nicca nicca śivarātriya māḍuvudu;
bēga bēga arcane-pūjeneya māḍuvudu,
kūḍalasaṅgana kūḍuvudu.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Why all this bustle in the world?
The Night of Śiva: let that be
A daily festival!
Soon, soon, adore
And be at one
With Kūḍala Saṅga !
Translated by: L M A Menezes, S M Angadi
Hindi Translation संसार से मोह क्यों?
नित्य नित्य शिवरात्रि मनाओ
शीघ्रातिशीघ्र अर्चना-पूजा करो
कूडलसंगमदेव से मिल जाओ ॥
Translated by: Banakara K Gowdappa
Telugu Translation కలవర మేలయ్యా కాపురమున
దినదినము శివరాత్రి సేయవచ్చు;
వేవేగ పూజార్చన సేయవచ్చు;
కూడల సంగని కూడుకొనవచ్చు:
Translated by: Dr. Badala Ramaiah
Tamil Translation வாழ்வினிலே மிகுபற்று எதற்கையனே?
நாடோறும் இலிங்கத்துட னிணைவாய்
விரைந்து விரைந்து தூவித் தொழாய்
கூடல சங்கையனைக் கூடுவாய்.
Translated by: Smt. Kalyani Venkataraman, Chennai
Marathi Translation
संसारात दुःख व्यथा का करतात ?
रोज शिवरात्रीचे आचरण कर,
लवकर लवकर पूजा अर्चना कर.
लवकर कूडलसंगात समरस होशील.
Translated by Shalini Sreeshaila Doddamani
ಶಬ್ದಾರ್ಥಗಳು ಅಚ್ಚಿಗ = ವಿಹ್ವ, ಕಳವಳ; ಅರ್ಚನೆ = ಪೂಜೆ;
ಕನ್ನಡ ವ್ಯಾಖ್ಯಾನ ಸಂಸಾರವೆಂಬುದು ತಾಪತ್ರಯದ ಇನ್ನೊಂದು ಹೆಸರು. ಈ ಜನ್ಮ ಧರಿಸಿ ಬಂದಮೇಲೆ ನಮಗೆ ಆಧಿದೈವಿಕ-ಆಧಿಭೌತಿಕ-ಆಧ್ಯಾತ್ಮಿಕ ಎಂದು ತಾಪಗಳು ಮೂರೇ ಅಲ್ಲ. ಹೆಸರಿಸಲಾಗದ ನೂರು ತಾಪಗಳು ನಮ್ಮನ್ನು ಸುಡುತ್ತಿರುವವು. ಅವನ್ನೇ ಕುರಿತು ಚಿಂತಿಸುತ್ತ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಬೇಡ. ಆ ರಾತ್ರಿಗಳನ್ನು ಶಿವಧ್ಯಾನದಿಂದ ಶಿವರಾತ್ರಿಗಳನ್ನಾಗಿ ಪರಿವರ್ತಿಸಿಕೋ-ಬೇಗ ಬೇಗ ಶಿವನ ರಕ್ಷಣೆಯನ್ನು ಸಂಪಾದಿಸಿಕೋ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು