ಭಕ್ತನ ಜ್ಞಾನಿಸ್ಥಲ - ಶುಭದಿನ
ಅಂದು ಇಂದು ಮತ್ತೊಂದೆನಬೇಡ.
ದಿನವಿಂದೇ `ಶಿವ ಶರಣೆಂ'ಬವಂಗೆ;
ದಿನವಿಂದೇ 'ಹರ ಶರಣೆಂ'ಬವಂಗೆ;
ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ.
Transliteration Andu indu mattondenabēḍa.
dinavindē `śiva śaraṇeṁ'bavaṅge;
dinavindē'hara śaraṇeṁ'bavaṅge;
dinavindē nam'ma kūḍalasaṅgana māṇade nenevaṅge.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Do not say that day, this day, another day!
To one who bows to Śiva, today
Must ever the day!
To one who bows to Hara
Today is ever the day!
To one remembering ceaselessly
Our Kūḍala Saṅga, today!
Must ever be the day!
Translated by: L M A Menezes, S M Angadi
Hindi Translation आज, कल, फिर कभी मत कहो
आज ही है शिवशरण के लिए
आज ही है हर-शरण के लिए
आज ही है कूडल संगमेश का
सदा स्मरण करनेवाले के लिए ॥
Translated by: Banakara K Gowdappa
Telugu Translation రేపుమాపు మతొక్కనా డనబోకుర!
దినమిదియే శివశరణను వానికి
దినమిదియే హరశరణను వానికి
దినిమదియే కూడల సంగని నమ్మి కొలుచువానికి,
Translated by: Dr. Badala Ramaiah
Tamil Translation அன்று, இன்று, மற்றொரு நாளெனக் கூறாய்.
நாளின்றே “சிவனே தஞ்சம்” என்பதற்கு,
நாளின்றே “அரனே தஞ்சம்” என்பதற்கு,
நாளின்றே நம் கூடல சங்கனை
இடையறாது எண்ணுதற்கு.
Translated by: Smt. Kalyani Venkataraman, Chennai
Marathi Translation
आज-उद्या म्हणून चालढकल करु नको.
आजचा दिवस ही पवित्र शिवाला शरण म्हणण्यास,
आजचा दिवस ही पवित्र लिंगदेवाला शरण म्हणण्यास,
आजचा दिवस ही पवित्र कूडलसंगमदेवाच्या नित्यस्मरणासाठी,
Translated by Shalini Sreeshaila Doddamani
Urdu Translation یہ کیوں کہیے پرستش کےلیے موزوں ہےکل کا دن
یہ کیوں کہیےکہ کوئی اوربھی دن اس سےبہتر ہے
حقیقت میں عبادت کےلیے دونوں برابرہیں
یہ سارےدن اُسی کےد ن ہیںسب کے سب برابر ہیں
تو پھر ہم کیوں نہ ہرد م شیوکی "ہر" کی کریں پوجا
توپھرہوں کوڈلا سنگا کی باتیں کیوں نہ روزانہ
Translated by: Hameed Almas
ಶಬ್ದಾರ್ಥಗಳು ಬವಂಗೆ = ; ಮಾಣದೆ = ಮಾಡದೆ; ಹರ = ಶಿವ;
ಕನ್ನಡ ವ್ಯಾಖ್ಯಾನ ಶಿವ ಶರಣೆಂದರೆ-ಶಿವನೇ ನನಗೆ ಶುಭವನ್ನುಂಟುಮಾಡು, ಹರ ಶರಣೆಂದರೆ-ಹರನೇ ನನಗೆ ಅಶುಭಗಳನ್ನು ಪರಿಹಾರಮಾಡೆಂದರ್ಥ. ಹೀಗೆ ಶಿವಶರಣೆಂದು ಹರಶರಣೆಂದು ಪ್ರಾರ್ಥನೆ ಮಾಡಲು ಬೆಳಿಗ್ಗೆ ಮಧ್ಯಾಹ್ನ ಸಂಜೆಯೆಂದು ನಾಳೆಯೆಂದು ನಾಡಿದ್ದೆಂದು ಕಾಲಹರಣಮಾಡುವುದು ಸರಿಯಲ್ಲ. ನಾವು ನಿತ್ಯಕರ್ತವ್ಯಗಳನ್ನೇನೇ ಮಾಡುತ್ತಿರಲಿ, ಇಲ್ಲ-ಮಲಗಿರಲಿ, ಬಿಡದೆ ಸದಾ ಮಾಡುತ್ತಿರಬೇಕಾದ ಉಸಿರಾಟದಂತೆ ನಿಲ್ಲದೆ ನಡೆಯುತ್ತಿರಬೇಕಾದ ಪ್ರಾಣಕಾರ್ಯವಿದು ಮಾನಸಧ್ಯಾನ. ಆ ದಿನ ಈ ದಿನ ಇನ್ನೊಂದು ದಿನವೆಂದು ಪ್ರಾರ್ಥನೆಯನ್ನು ಮುಂದೆ ಹಾಕುತ್ತ ಹೋಗುವುದು ಭಕ್ತಿಯ ಲಕ್ಷಣವಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು