ಅಷ್ಟವಿಧಾರ್ಚನೆ-ಷೋಡಶೋಪಚಾರವ ಮಾಡುವುದು;
ಮಾಡಿದ ಪೂಜೆಯ ನೋಡುವುದಯ್ಯಾ.
ಶಿವತತ್ವಗೀತವ ಪಾಡುವುದು;
ಶಿವನ ಮುಂದೆ ನಲಿದಾಡುವುದಯ್ಯಾ.
ಭಕ್ತಿಸಂಭಾಷಣೆಯ ಮಾಡುವುದು;
ನಮ್ಮ ಕೂಡಲಸಂಗನಯ್ಯನ ಕೂಡುವುದು.
Transcription of Tamil Mss in the Paris National Libray (1780 AD)Discovered and Transcribed by Dr Shivamurthy Shivacharya Mahaswamiji, Sirigere, in the year 1985
MusicCourtesy:Album Name - Vachana Dhare Vol -2 Singer : B.S.Mallikarjuna, B.R.Chaya, Raj Srinath, Raagini Music : M.S. Maruthi Label : Ashwini audio
English Translation 2Offer the eightfold worship,
Perform the sixteenfold rites;
Observe with happy heart
The worship you have made;
Intone the anthems of
The Śiva's Principle;
In Śiva's presence
Leap and dance!
Make pious converse, and
Be one with our Lord
Kūḍala Saṅga!
Translated by: L M A Menezes, S M Angadi
Hindi Translationअष्टविविर्चन और षोडशोपचार करो
स्वयं कृत पूजा देखो
शिवतत्व गीत गाओ-
शिव समक्ष नृत्य करो
भक्तिपूर्ण बातें करो ।
मम कूडलसंगमदेव में ऐक्य हो जाओ ॥
Translated by: Banakara K Gowdappa
Telugu Translationచేయవలె అష్ట విధార్చన షోడశోపచారము;
చూడవలె కనులార చేసిన పూజ;
పాడవలె శివగీతి మైమఱచి
ముదమందదగు శివుని ముందు;
మాటాడదగు భక్తి సంభాషణము:
కూడవలె మా కూడల సంగయ్యను.
Translated by: Dr. Badala Ramaiah
Tamil Translationஎண்வித தூவித்தொழல் பதினாறுவித வழிபாடாற்றாய்,
செய்த பூசையைக் காண்பாய் ஐயனே
சிவதத்துவப் பாக்களைப் பாடுவாய்
சிவன் முன் களித்தாடுவா யையனே
பக்தி உரையாற்றுவாய்
நம் கூடல சங்கையனைக் கூடுவாய்.
Translated by: Smt. Kalyani Venkataraman, Chennai
Marathi Translationषोडशोपचार, अष्टविधार्चने
एकाग्र ते होणे, पूजनात
पूजेचे वैभव, डोळे भरुनी पहावे
शिवस्तोत्र गावे, मुक्त कंठ
आनंद विभोर, बेभान डोला
शिवासी बोला, सलगीने
कूडलसंगमदेवा ! देह विसरावे
एकरूप व्हावे, हीच रीत
अर्थ - अष्टविध पूजा व षोडशोपचार विधीयुक्त पूर्ण करावा. आणि केलेल्या पूजेचे वैभव स्वतःच डोळे भरून पहावे व तृप्त व्हावे. त्याचबरोबर शिवतत्वाचे स्तोत्रगीत शिवापुढे गात असतांना आनंदाने नाचत, बागडत देहभान विसरुन जावे. हे कूडलसंगमदेवा ! ( परमेश्वरा ) भक्तिरसात ऐक्य साधण्याची व समरसतेची हीच रीत होय.
Translated by Rajendra Jirobe, Published by V B Patil, Hirabaug, Chembur, Mumbai, 1983अष्ट विधार्चना, षोडशोपचार कर,
या पूजेचे वैभव पहा, शिवतत्त्वाचे गीत गा.
शिवासमोर आनंदाने नाचून घे. भक्तीसंभाषण कर.
आमच्या कूडलसंगमदेवात समरस होशील.
Translated by Shalini Sreeshaila Doddamani
ಕನ್ನಡ ವ್ಯಾಖ್ಯಾನಶಿವನಿಗೆ ಅಷ್ಟವಿಧಾರ್ಚನೆ ಮಾಡಿರಿ, ಷೋಡಶೋಪಚಾರ ಮಾಡಿರಿ, ಆ ಮಾಡಿದ ಪೂಜೆಯನ್ನು ಕಣ್ಣಾರೆ ನೋಡಿರಿ, ಶಿವಶರಣರು ಕಟ್ಟಿದ ತತ್ತ್ವಪದಗಳನ್ನು ಪಾಡಿರಿ, ನರ್ತನ ಮಾಡಿರಿ, ಭಕ್ತಿಯ ವಿಚಾರವಾಗಿ ಪರಸ್ಪರ ಸಂಭಾಷಣೆ ನಡೆಸಿರಿ, ಇವನ್ನೆಲ್ಲ ಅಖಂಡವಾಗಿ ನಡೆಸಿದವರು ಶಿವನಲ್ಲಿ ಏಕವಾಗುತ್ತಾರೆ.
ವಿ:ಅಷ್ಟವಿಧಾರ್ಚನೆ:ಜಲಾಭಿಷೇಕ-ಗಂಧಧಾರಣ-ಅಕ್ಷತಾರ್ಪಣ-ಧೂಪಸಮರ್ಪಣ-ದೀಪಸಮರ್ಪಣ-ನೈವೇದ್ಯಸಮರ್ಪಣತಾಂಬೂಲಸಮರ್ಪಣ. ಷೋಡಶೋಪಚಾರ :ಪಾದ್ಯ-ಅರ್ಘ್ಯ-ಆಚಮನ-ಪತ್ರಪುಷ್ಪ-ಗಂಧ-ಅಕ್ಷತೆ-ರುದ್ರಾಕ್ಷಮಾಲಿಕೆ-ಛತ್ರ-ಚಾಮರ-ವ್ಯಜನ-ಗೀತ-ವಾದ್ಯ-ನರ್ತನ-ಪ್ರದಕ್ಷಿಣ-ನಮಸ್ಕಾರ-ಸ್ತೋತ್ರ.
- ವ್ಯಾಖ್ಯಾನಕಾರರು ಡಾ.ಎಲ್. ಬಸವರಾಜು
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಧಾರ್ಮಿಕ ಕ್ರಾಂತಿ ಪುರುಷ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.