•  
  •  
  •  
  •  
Index   ವಚನ - 176    Search  
 
ಭಕ್ತನ ಜ್ಞಾನಿಸ್ಥಲ - ಕೀಳರಿಮೆ
ಆಳಿಗೊಂಡಹರೆಂದು ಅಂಜಲದೇಕೆ? ನಾಸ್ತಿಕವಾಡಿಹರೆಂದು ನಾಚಲದೇಕೆ? ಆರಾದೊಡಾಗಲಿ ಶ್ರೀಮಹಾದೇವಂಗೆ ಶರಣೆನ್ನಿ. ಏನೂ ಅರಿಯೆನೆಂದು ಮೌನಗೊಂಡಿರಬೇಡ: ಕೂಡಲಸಂಗಮದೇವರ ಮುಂದೆ 'ದಂದಣ, ದತ್ತಣ' ಎನ್ನಿ.
Transliteration Āḷigoṇḍaharendu an̄jaladēke? Nāstikavāḍ'̔iharendu nācaladēke? Ārādaḍāgali śrīmahādēvaṅge śaraṇenni. Ēnū ariyenendu maunagoṇḍirabēḍa: Kūḍalasaṅgamadēvara munde'dandaṇa, dattaṇa' enni.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Why should you fear That you despised? Why should you blush That you denied? Whoever you be, you do salute Mahādēva... Because you nothing know! Do not keep dumb Before Lord Kūḍala Saṅgama Say: 'Ding Dong!' Translated by: L M A Menezes, S M Angadi
Hindi Translation उपहास करेंगे यह इसका भय क्यों? नास्तिक कहेंगे, यह लाज क्यों? कोई भी हो, महादेव की शरण में जाओ अनजान समझ मौन मत रहो कूडलसंगमदेव समक्ष तुतलाते रहो ॥ Translated by: Banakara K Gowdappa
Telugu Translation కాండండి ఆడిపోదురంచు నదరెద వేటికో, నా స్తికుడని తిట్ట సిగ్గిల నేటికో ! ఎవ్వరేమన్న నేమి? శ్రీ మహాదేవునకు శరణనుమా; నా కేదీ తెలియదని మూగవై బోకుమ సంగని ముందర కుయ్యో మొట్టోయని యేడ్చుకొనుమాః Translated by: Dr. Badala Ramaiah
Tamil Translation இகழ்ந்தாரென அஞ்சுவதேன்? இறைமறுத்தற்கு நாணுவதேன்? எவராயினும் திரு மகாதேவனுக்குத் தஞ்சமெனீர், ஏதுமறியோமென மௌனம் கொள்ளாதீர் கூடல சங்கம தேவன் முன் தந்தண தந்தண என்னீர். Translated by: Smt. Kalyani Venkataraman, Chennai
Marathi Translation निंदा करणाऱ्यांना भितोस कशाला ? नास्तीक म्हणवून घ्यायला लाजतो का? कोणी काही म्हणू दे, श्री लिंगदेवाला शरण जा. मला काय समजते म्हणून मौन राहू नको. कूडलसंगाच्या समोर काहीही म्हण. Translated by Shalini Sreeshaila Doddamani
ಶಬ್ದಾರ್ಥಗಳು ಆಳಿ = ನಾಶ; ದಂದಣ-ದತ್ತಣ = ತೊದಲು ನುಡಿ, ನುಡಿಗಟ್ಟು; ನಾಸ್ತಿಕ = ದೇವರನ್ನು ನಂಬದವ;
ಕನ್ನಡ ವ್ಯಾಖ್ಯಾನ ಹೊಸದಾಗಿ ಶಿವಧರ್ಮಕ್ಕೆ ಸೇರಿದ ದಲಿತವರ್ಗದ ಜನ-ಈ ಮೇಲೆ ಹೇಳಿದ ಶಿವಪೂಜೆಯ ವಿವರ ತಿಳಿಯದೆ. ಶಿಷ್ಟವರ್ಗದ ಜನ ಅದನ್ನು ಕಂಡು ತಮ್ಮನ್ನು ಅವಮಾನಪಡಿಸಿಯಾರೆಂದು ಅಂಜಿಕೆಪಡುತ್ತಿದ್ದರಾಗಬಹುದು ಮತ್ತು ಅನಕ್ಷರಸ್ಥರಾದ ಹಾಗೂ ಶಿವಪೂಜಾ ವಿಧಿವಿಧಾನದ ವಿವರ ಗೊತ್ತಿಲ್ಲದ ತಮ್ಮನ್ನು ಆ ಶಿಷ್ಟರು ಧಾರ್ಮಿಕವಾಗಿಯೂ ಅವಗಣನೆ ಮಾಡಿಯಾರೆಂದು ದಲಿತರು ನಾಚಿಕೆ ಪಡುತ್ತಿದ್ದರು. ಆಗ ಬಸವಣ್ಣನವರು ತಮ್ಮ ನೇತೃತ್ವದಲ್ಲಿಯೇ ಶಿವಧರ್ಮಕ್ಕೆ ಸೇರಿದ ಆ ಮುಗ್ಧಜನರ ಪಕ್ಷವಹಿಸಿ-ದೇವರಿಗೆ ಶರಣೆನ್ನಿ ಸಾಕು, ಶಿವಶರಣರ ಸುತ್ತಲೂ ಧಂ ಧಣ ಧತ್ತಣ ಎಂದು ನಿಮ್ಮ ಜಾನಪದ ವರಸೆಯಲ್ಲಿಯೇ ಕುಣಿಯಿರಿ ಸಾಕು, ನಿಮ್ಮ ಮನಸ್ಸು ಏಕಾಗ್ರವಾಗಿ ಶಿವನಲ್ಲಿ ಲಯವಾಗುವುದು-ಅದೇ ಪೂಜೆ, ಧ್ಯಾನ, ಯೋಗ, ಎಂದು ಧೈರ್ಯ ಹೇಳುತ್ತಿದ್ದರು. (ಅಳಿಗೊಳ್ : ಅವಮಾನಿಸು. ಮೋನ<ಮೌನ)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು