•  
  •  
  •  
  •  
Index   ವಚನ - 177    Search  
 
ಭಕ್ತನ ಜ್ಞಾನಿಸ್ಥಲ - ಪೂಜೆ
ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದರೆ ತಪ್ಪುವುವು ಅಪಮೃತ್ಯು, ಕಾಲಕರ್ಮಂಗಳಯ್ಯಾ! ದೇವಪೂಜೆಯ ಮಾಟ, ದುರಿತಬಂಧನದೋಟ! ಶಂಭು ನಿಮ್ಮಯ ನೋಟ, ಹೆರೆಹಿಂಗದ ಕಣ್‌ಬೇಟ! ಸದಾ ಸನ್ನಿಹಿತನಾಗಿ ಶರಣೆಂಬುವುದು, ನಂಬುವುದು. ಜಂಗಮಾರ್ಚನೆಯ ಮಾಟ, ಕೂಡಲಸಂಗನ ಕೂಟ!
Transliteration Suprabhāta samayadalli artiyalli liṅgava nenedare tappuvuvu apamr̥tyu, kālakarmaṅgaḷayyā! Dēvapūjeya māṭa, duritabandhanadōṭa! Śambhu nim'maya nōṭa, herehiṅgada kaṇ‌bēṭa! Sadā sannihitanāgi śaraṇembuvudu, nambuvudu. Jaṅgamārcaneya māṭa, kūḍalasaṅgana kūṭa!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Provided to YouTube by Times Music India Suprabhatha Samayadali · Ambayya Nuli Basava Thande Vachanagalu ℗ Ashwini Audio Released on: 2017-10-04
English Translation 2 If at the early hour of dawn You lovingly remember Him, You will avert the sudden death, Death, and all the Karmas too! To worship god’s, it means ! The bondage of your sins will cease! O Śambhu , that look of you Is a never- failing bait of eyes! Bend low to Him, believe in Him: To worship Jaṅgama is to be one With Kūḍala Saṅga. Translated by: L M A Menezes, S M Angadi
Hindi Translation सुप्रभात में श्रद्धा से लिंगदेव का स्मरण करो अकालमृत्यु और कालकर्म टल जायेंगे- । देव – पूजा से दुरित बंधन भागेंगे। शंभो, तव दर्शन नेत्रों की अतृप्त आशा है सदा सन्निहित रहो, शरण में जाओ, विश्वास रखो जंगमार्चन कूडलसंगमदेव से मिलना है ॥ Translated by: Banakara K Gowdappa
Telugu Translation సుప్రభాతమున లేచి దృఢభ క్తి పరశివుని దలప; కాలకర్మాది అపమృత్యువులు తరుగునయ్యా: దేవా! నీ పూజార్చన, దురిత బంధముల త్రుంచునయ్యా, శంభో ! నీ చూపులుడుగని కన్వలపు కదయ్యా, సదాసన్నిహితుడనై శరణంచు నమ్ముచు జంగమార్చనచేయు విధియే నీ సన్నిధి నాకు Translated by: Dr. Badala Ramaiah
Tamil Translation உவகையுடன் விடியலிலே இலிங்கத்தை உள்ளின் சாக்காடு, காலம், வினையெலாந் தவறுமையனே, இறைவழிபாட்டுச் செயல், இன்னல் பிணைப்பினோட்டம், சம்புவே உன் நோட்டம் குறையா இன்பநோட்டம், யாண்டும் அருகிருந்து தஞ்சமென நம்புவாய் அடியாரை ஏற்றுதல் கூடல சங்கையனைக் கூடுவதாம். Translated by: Smt. Kalyani Venkataraman, Chennai
Marathi Translation सुप्रभाती, एकचित्ते, शुचिर्भूत होऊनिया चुके मृत्युही त्याचा, लिंगपूजा करुनिया कालकर्माची न भीती, टळती सकल संकटे भक्त वत्सल लिंग पाहे, नयन अतृप्ती मिटे चित्तही एकाग्र होईल, उरती नच ते पापेही शरण संगती आणि सेवा, मिटवी पाप नि तापही नित्य लिंगार्चनी राहून, शरण म्हणवीत राहू दे जंगमांची दिव्य सेवा, कूडलसंगमदेवचि अर्थ - प्रातःकाळी लवकर उठून नित्यनैमित्तिक कर्म आटोपून शुचिभूर्तपणे व एकाग्रचित्ताने जो लिंगपूजा करील त्याचे सर्व पाप ताप मिटतील. आणि काल कर्माचे फेरेही चुकतील. भक्तवत्सल लिंगदेवास (सांबदेवास) प्रेमभरीत दृष्टीने पाहिल्यास नेत्र तृप्त होतील. चित्ताच्या एकाग्रतेमुळे लिंगैक्य साधण्यात सुलभता निर्माण होईल. शरण व जंगमांची सहज घडलेली सेवा व त्याची नित्य केलेली दिव्य लिंगार्चना कूडलसंगमदेव प्रसन्नतेने स्विकारतील. Translated by Rajendra Jirobe, Published by V B Patil, Hirabaug, Chembur, Mumbai, 1983 सुप्रभात समयी भक्तीने लिंगदेवचे स्मरण केले तर, टळेल अपमृत्यू, काल कर्म आदि. लिंगदेवाच्या पूजेने दुरित बंधन तुटेल. प्रभू तुम्हाला निरखणे, डोळ्याचे निरंतर आकर्षण सदा सन्निहित राहून नमन करणे, भरवसा करणे, समाजसेवा कूडलसंगम प्राप्तीचे साधन. Translated by Shalini Sreeshaila Doddamani
ಶಬ್ದಾರ್ಥಗಳು ಅಪಮೃತ್ಯು = ಅಕಾಲದಲ್ಲಿ ಉಂಟಾಗುವ ಸಾವು, ಆಕಸ್ಮಿಕವಾದ ಮರಣ; ಅರ್ಚನೆ = ಪೂಜೆ; ಅರ್ತಿ = ಪ್ರೀತಿ; ಕೂಟ = ಸ್ನೇಹ; ದುರಿತ = ಕಷ್ಟ; ಶಂಭು = ಶಿವ; ಸನ್ನಿತ = ಹತ್ತಿರ; ಸುಪ್ರಭಾತ = ಮುಂಜಾನೆ;
ಕನ್ನಡ ವ್ಯಾಖ್ಯಾನ ಅಪಮೃತ್ಯು ಮುಂತಾದ ಸಾವಿನ ಕೊರಚಾಟದಿಂದ ಮತ್ತು ದುರಿತ-ಭವ-ಬಂಧನ ಮುಂತಾದ ಪರದಾಟದಿಂದ ತಪ್ಪಿಸಿಕೊಳ್ಳಬೇಕಾದರೆ ಬೆಳಗಾದೊಡನೆಯೇ ಮೃತ್ಯುಂಜಯನಾದ ಶಿವನನ್ನು ನೆನೆ, ನೆನೆದು ಪೂಜೆಮಾಡು, ಪೂಜೆಮಾಡಿ ಕಣ್ತುಂಬ ನೋಡು. ಆ ನೋಟ ನಿನ್ನ ಪ್ರಿಯತಮನಾದ ಶಿವನನ್ನು ಕಂಡಂತೆ ಮಾತ್ರ. ನೀನು ಅವನೊಡನೆ ಸಮರತಿಯಾಗಿ ಬೆರೆಯಬೇಕಾದರೆ ಜಂಗಮಸೇವೆ ಮಾಡಬೇಕು. (ಶಿವ) ಲಿಂಗಪೂಜೆ ಮತ್ತು ಜಂಗಮ(ಲಿಂಗ)ಸೇವೆಯೆರಡೂ ಒಂದೇ ದಿವ್ಯಾನುಭವದ ಕ್ರಮಾಗತ ಎರಡು ಘಟ್ಟಗಳಷ್ಟೆ ! ಲಿಂಗಪೂಜೆ ಜಂಗಮಪೂಜೆಗೆ ದಾರಿ, ಜಂಗಮಪೂಜೆ ಲಿಂಗಪೂಜೆಯ ಪರಿಸಮಾಪ್ತಿ. ಈ ವಚನ ನಿರೂಪಣೆಯಲ್ಲಿ ಶೃಂಗಾರದ ಒಂದು ಉಪಮಾನ ಗುಪ್ತಗಾಮಿನಿಯಾಗಿದೆ. ಪ್ರೇಯಸಿಯು ಪ್ರೇಮಿಯ ವಿಚಾರವನ್ನು ಕೇಳಿ ಅನುರಕ್ತಳಾಗುತ್ತಾಳೆ-ಅದು ಕಿವಿಬೇಟ, ಅವನನ್ನು ಕಂಡು ಗಾಢವಾಗಿ ಪ್ರೀತಿಸುತ್ತಾಳೆ-ಅಂದು ಕಣ್ಬೇಟ, ಬಳಿಸಾರಿ ಒಂದುಗೂಡುತ್ತಾಳೆ-ಅದು ಕೂಟಬೇಟ, ಹೀಗೆ ಪ್ರಿಯನಲ್ಲಿ ಒಂದುಗೂಡುವವರೆಗೆ ಪ್ರೇಯಸಿಗೆ ತೃಪ್ತಿಯಿಲ್ಲ, ಒಂದುಗೂಡಿದ ಮೇಲೆ ಅದಕ್ಕೆ ಸಮಾನವಾದ ತೃಪ್ತಿ ಇನ್ನೊಂದಿಲ್ಲ. ಇದನ್ನು ಶರಣಸತಿ ಲಿಂಗಪತಿಗೆ, ಶಿವಪೂಜೆಗೆ ಜಂಗಮಸೇವೆಗೆ ಅನ್ವಯಿಸಿಕೊಳ್ಳಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು