•  
  •  
  •  
  •  
Index   ವಚನ - 178    Search  
 
ಭಕ್ತನ ಜ್ಞಾನಿಸ್ಥಲ - ಪಾಪ
ಅಂಕ ಕಳನೇರಿ ಕೈ ಮರೆದಿರ್ದೊಡೆ ಮಾರಂಕ ಬಂದಿರಿವುದ ಮಾಣ್ಬನೆ? ನಿಮ್ಮ ನೆನಹ ಮತಿ ಮರೆದಿರ್ದೊಡೆ, ಪಾಪ ತನುವನಂಡಲೆವುದ ಮಾಣ್ಬುದೆ? ಕೂಡಲಸಂಗಯ್ಯನ ನೆನೆದರೆ, ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ.
Transliteration Aṅka kaḷanēri kaimaredirdoḍe māraṅka bandirivuda māṇbane? Nim'ma nenaha mati maredirdoḍe, pāpa tanuvanaṇḍalevuda māṇbude? Kūḍalasaṅgayyana nenedare, pāpa urigoḍḍidaraginante karaguvudayyā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If a knight leaping into the lists, Forget his martial skill, Surely his adversary Will rush and lunge at him! If I lose sight of Thee, Surely my sins will fret my flesh... But if I think Of Lord Kūḍala Saṅga , My sins shall melt away Like wax exposed to flame! Translated by: L M A Menezes, S M Angadi
Hindi Translation योद्धा युद्ध भूमी में हस्तलाघव भूल जाय-, तो प्रतिद्वंद्वी भोंकना छोडेगा? मन तव स्मरण करना भूल जाय तो पाप तन को सताना छोडेगा? कूडलसंगमदेव का स्मरण करो तो ज्वाला – ग्रस्त लाख की भाँति पाप जल जायेगा॥ Translated by: Banakara K Gowdappa
Telugu Translation ళూరుడు రణమునబడి కేల్మఱచిన వైరి పై బడి పొడువక మాను నే? నిను స్మరించు మతి మఱచిపోవ పాపము తనువు నంటక విడుచునే? కూడల సంగమయ్యను దలప కాకదగులు లక్కవలె కరుగునయ్యా పాపము Translated by: Dr. Badala Ramaiah
Tamil Translation மறவன் களனேறிக் கை மறப்பின் பகைவன் வெட்டாமல் விடுவனோ? உங்கள் நினைவினை மனம் மறப்பின் மாயை உடலை வருத்துதலை விடுமோ? கூடல சங்கம தேவனையுள்ளின் தீவினை தீயிலிட்ட அரக்கனைய கரையுமையனே. Translated by: Smt. Kalyani Venkataraman, Chennai
Marathi Translation रणांगणात वीर शस्त्र विसरले तर शत्रू त्याला मारल्याशिवाय सोडेल का ? मन तुमचे स्मरण विसरले तर माया देहाला विचलीत केल्याशिवाय सोडेल का ? कूडलसंमदेवाचे स्मरण केल्याने पाप आगीत पडलेल्या लाखेप्रमाणे विरघळेल. Translated by Shalini Sreeshaila Doddamani
ಶಬ್ದಾರ್ಥಗಳು ಅಂಕ = ಸೈನಿಕ ಭಟ, ಯುದ್ದ ಕಾಳಗ; ತನು = ಶರೀರ; ಮತಿ = ಬುದ್ದಿ; ಮಾಣ್ಬು = ; ಮಾರಂಕ = ಪ್ರತಿಭಟ, ವೈರಿ, ಇದಿರಾಳು;
ಕನ್ನಡ ವ್ಯಾಖ್ಯಾನ ಸಂಗ್ರಾಮ ಭೂಮಿಯಲ್ಲಿ ಕಾಲಿಟ್ಟ ಮೇಲೆ-ಬಿಲ್ಲಿಗೆ ಬಾಣ ಹೂಡಿ ನಿಂತಿರಬೇಕು-ಶತ್ರುಸಂಹಾರಕ್ಕೆ ಸಿದ್ಧವಾಗಿ ಬಿಲ್ಲು ಬಾಣಗಳನ್ನು ಕೆಳಗೆಸೆದು ಮೈಮರೆತಿದ್ದರೆ ಪ್ರತಿಯೋಧನು ಬಂದಿರಿಯದಿರುವನೆ ? ಭೂಮಿಯಲ್ಲಿ ಹುಟ್ಟಿದ ಮೇಲೆ-ಮನವೆಂಬ ಬಿಲ್ಲಿಗೆ ಶಿವಶರಣೆಂಬ ಬಾಣವನ್ನು ಹೂಡಿ ಪಾಪವೆಂಬ ಶತ್ರುವನ್ನು ಎಚ್ಚುರುಳಿಸಲು ಎಚ್ಚರವಾಗಿರಬೇಕು. ಹಾಗಲ್ಲದೆ ಈ ಮನವನ್ನು ವಿಷಯಾದಿಗಳಲ್ಲಿ ತೊಡರಿಸಿ ದೇವಸ್ಮರಣೆಯನ್ನು ತೊರೆದಿದ್ದರೆ-ಪಾಪವು ಜನ್ಮದಿಂದ ಜನ್ಮಕ್ಕೆ ನಮ್ಮನ್ನು ಬೆನ್ನಟ್ಟಿ ಬರದೆ ಬಿಡದು. ಏಳು ಎಚ್ಚರಗೊಳ್ಳು-ಶಿವನಾಮವನ್ನುಚ್ಚರಿಸು-ಪಾಪವು ಉರಿಗೆ ಬಿದ್ದ ಅರಗಿನಂತೆ ಕರಗಿ ನೀನು ಈ ಭವದ ಪಿತೂರಿಯಿಂದ ಪಾರಾಗುವೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು