ಆಡಿಹರಯ್ಯಾ ಹಾಡಿಹರಯ್ಯಾ ಮನಬಂದ ಪರಿಯಲಿ!
ಶಿವಶರಣರ ಮುಂದೆ ಆ(ಡಿ)ರಯ್ಯಾ ಹಾ(ಡಿ)ರಯ್ಯಾ.
ಕೋಡಂಗಿಯಾಟವನಾಡಿದ ಭಕ್ತಂಗೆ ಬೇಡಿತ್ತನೀವ,
ನಮ್ಮ ಕೂಡಲಸಂಗಮದೇವ.
Transliteration Āḍ'̔iharayyā hāḍ'̔iharayyā manabanda pariyali!
Śivaśaraṇara munde ā(ḍi)rayyā hā(ḍi)rayyā.
Kōḍaṅgiyāṭavanāḍida bhaktaṅge bēḍittanīva,
nam'ma kūḍalasaṅgamadēva.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 They play and sing
The way their fancy takes!
If you would play and sing,
Do it before, good sir,
The Śiva-Śaraṇās ...
Lord Kūḍala Saṅgama will give
Whatever he asks
To one who has played the fool!
Translated by: L M A Menezes, S M Angadi
Hindi Translation खेलते हैं, गाते हैं मनमाने!
शिवशरण समक्ष खेलते हैं, गाते हैं
जो भक्त विदूषक का अभिनय करता है
कूडलसंगमदेव उसकी कामना पूर्ण करते हैं ॥
Translated by: Banakara K Gowdappa
Telugu Translation ఆడెదరయ్యా పాడెదరయ్యా యిచ్చవచ్చినటు;
శివశరణుల ముందు పాడుడయ్యా; ఆడుడయ్యా;
కోణంగి ఆటనాడు భక్తునకు
వేడినదిచ్చును కూడల సంగమదేవుడు.
Translated by: Dr. Badala Ramaiah
Tamil Translation ஆடுமின், பாடுமின் மனம் சென்ற வழியிலே,
சிவனடியார் முன் ஆடுமின், பாடுமின்,
குரங்காட்டமாடும் பக்தனுக்கு நயந்ததை யீவான்
நம் கூடல சங்கம தேவன்.
Translated by: Smt. Kalyani Venkataraman, Chennai
Marathi Translation
बोलावे, गावे मनाला येईल तसे,
शरणांच्यासमोर बोलावे गावे.
माकडाचा खेळ खेळणाऱ्या भक्ताला
मागेल ते देईल आमचे कूडलसंगमदेव.
Translated by Shalini Sreeshaila Doddamani
ಶಬ್ದಾರ್ಥಗಳು ಕೋಡಂಗಿ = ಮಂಗ; ಪರಿ = ರೀತಿ;
ಕನ್ನಡ ವ್ಯಾಖ್ಯಾನ ಬಯಲಾಟದಲ್ಲಿ ಕೋಡಂಗಿಯೆಂಬ ಪಾತ್ರದವನು ತನ್ನ ವಿಪರೀತವೇಷ-ವಿಪರ್ಯಸ್ತಭಾಷೆ-ವಿಕೃತ ಅಂಗಚೇಷ್ಟೆಗಳಿಂದ ಪ್ರೇಕ್ಷಕರನ್ನು ರಂಜಿಸುವನು. ಮುಖ್ಯಕಥಾಸಂದರ್ಭದಲ್ಲಿ ಉದ್ರೇಕಗೊಂಡಿದ್ದ ಅಥವಾ ದಿಗ್ಭ್ರಮೆಗೊಂಡಿದ್ದ ಆ ಪ್ರೇಕ್ಷಕರ ಮನಸ್ಸನ್ನು ತನ್ನ ವಿದೂಷಕ ನೈಪುಣ್ಯದಿಂದ ಶಮನಗೊಳಿಸಿ ಮುಂದಿನ ನಾಟಕವನ್ನು ಮರಳಿ ಹೊಸ ಹುರುಪಿನಿಂದ ನೋಡಲು ಆ ಪ್ರೇಕ್ಷಕರ ಅಂತರಂಗವನ್ನು ಸಜ್ಜುಗೊಳಿಸುವನು.
ಅದೇ ರೀತಿ ಈ ಜಗನ್ನಾಟಕವನ್ನು ನೋಡುತ್ತಿರುವ ಶಿವಶರಣರಿಗೆ ವಿನೋದಗೊಳಿಸಲು ಶಿವಭಕ್ತನಾದವನು-ತನಗೆ ಕುಣಿಯುವುದು ಬಂದರೆ ಕುಣಿದು, ಹಾಡುವುದು ಬಂದರೆ ಹಾಡಿ, ಕೋಡಂಗಿಯಾಟವನ್ನಾದರೂ ಆಡಿ ಉಲ್ಲಾಸಗೊಳಿಸುವುದೂ ಒಂದು ಸೇವೆಯೆಂದು-ಬಸವಣ್ಣನವರು ತಮ್ಮ ಜಾನಪದ ಭಕ್ತಸಮೂಹವನ್ನು-ಅವರವರ ಕಲೆಯ ಮೂಲಕ ಆರಾಧಿಸಲು-ಹುರಿದುಂಬಿಸುತ್ತಿರುವರು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು