ಹೊಲಬುಗೊಂಡರಸಬೇಡ. ಬಿಲಿತು ತರಬೇಡ:
ಒಲಿದೊಮ್ಮೆ: ʼಶಿವಶರಣೆʼನ್ನಿರಯ್ಯಾ;
ಒಂದು ಸೊಲ್ಲಿಂಗೆ ಮುಕ್ತಿ ಸಿದ್ಧಿ.
ಕೂಡಲಸಂಗಮದೇವ ಭಕ್ತಿ ಲಂಪಟನಾಗಿ.
Transliteration Holabugoṇḍarasabēḍa. Bilitu tarabēḍa:
Olidom'me: ʼśivaśaraṇeʼnnirayyā;
ondu solliṅge mukti sid'dhi.
Kūḍalasaṅgamadēva bhakti lampaṭanāgi.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Do not make search
Along the beaten path.
Bring nothing for a price.
Say once; and lovingly:
'To Śiva I bow.'
Say but one word
And you are free.
Lord Kūḍala Saṅgama
Has a weakness for
True piety.
Translated by: L M A Menezes, S M Angadi
Hindi Translation पथ में मत ढूँढो, खरीदकर मत लाओ
भक्ति से एक बार शिव को प्रणाम करो
एक स्तुति से मुक्ति सिद्ध होगी,
कूडलसंगमदेव भक्ति प्रिय जो है ॥
Translated by: Banakara K Gowdappa
Telugu Translation దారినబడి తఱచబోకుమ: కొనితేబోకుమ;
వలచి ఒకసారి శివశరణనుమా;
భక్తిలంపటుడవై బల్క, బల్కులో ముక్తి
కూడల సంగమదేవా!
Translated by: Dr. Badala Ramaiah
Tamil Translation வழிதேடிச் செல்லற்க, விலைக்குக் கொள்ளற்க
அன்புகெழுமி ஒருமுறை “சிவனேதஞ்சம்” என்னீரையனே,
ஒரு சொல்லிற்கு வீடுபேறு கைகூடும்
கூடல சங்கம தேவன் பக்தியை நயப்போனையனே.
Translated by: Smt. Kalyani Venkataraman, Chennai
Marathi Translation
शिवपथावर शोधावे लागत नाही,
येथे खर्च होत नाही.
भक्तीने एकदा शिवशरणाचे स्मरण कर.
एकदा स्मरण केल्याने मुक्ती मिळेल.
कूडलसंगमदेव भक्ती लंपट आहे.
Translated by Shalini Sreeshaila Doddamani
ಶಬ್ದಾರ್ಥಗಳು ಅರಸು = ಹುಡುಕು; ಬಿಲಿತು = ಕೊಂಡು ತರು; ಲಂಪಟ = ವಿಷಯಾಸಕ್ತ; ಸಿದ್ಥಿ = ಪ್ರಾಪ್ತಿ; ಸೊಲ್ಲು = ಶಬ್ದ; ಹೊಲಬು = ಸರಿಯಾದ ಕ್ರಮ ದಾರಿ;
ಕನ್ನಡ ವ್ಯಾಖ್ಯಾನ ಶಿವಪೂಜೆಗೆ ಬಿಲ್ವ ಮರುಗ ಮಂಚಿಪತ್ರೆ ಜಾಜಿಮಲ್ಲಿಗೆ ಶಾವಂತಿಗೆ ಇಲ್ಲವೆಂದು ಅಲ್ಲಿ ಇಲ್ಲಿ ಅಲೆದು ಅರಸಿ ತರಬೇಡ. ಶ್ರೀಗಂಧ ಗುಗ್ಗುಳ ಹಣ್ಣು ಕಾಯಿ ಘಂಟೆ ಆರತಿ ತಟ್ಟೆ ಇಲ್ಲವೆಂದು (ಸಾಲಮಾಡಿ)ಕೊಂಡು ತರಬೇಡ. ನಿನ್ನಲ್ಲೇನಿದೆಯೋ ಅದರಲ್ಲೇ ಅರ್ಚನೆ ಮಾಡಿ-ಶಿವನೇ ಶರಣೆನ್ನು. ಭಕ್ತಿಯ ಆ ಒಂದು ಮಾತಿಗೇ ಮುಕ್ತಿಯನ್ನು ಕರುಣಿಸುವನು ಶಿವನು. ಅವನು ಭಕ್ತಿಯುಳ್ಳವರೆಂದರೆ ಮನಸೋಲುವನು-ಬಳಿಬಳಿಯೇ ಸುಳಿದು ಸೆಳೆದಪ್ಪುವನು-ಶಿವನು ಭಕ್ತಿಲಂಪಟ !
ಕಾಮಲಂಪಟನಾದವನು ಪ್ರೇಯಸಿಯ ಒಂದು ಮುದ್ದು ಮಾತಿಗೇ ಮಾರುಹೋಗುವುದಿಲ್ಲವೆ ?
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು