•  
  •  
  •  
  •  
Index   ವಚನ - 181    Search  
 
ಭಕ್ತನ ಜ್ಞಾನಿಸ್ಥಲ - ಭಕ್ತಿ
ನಾದಪ್ರಿಯ ಶಿವನೆಂಬರು-ನಾದಪ್ರಿಯ ಶಿವನಲ್ಲವಯ್ಯಾ; ವೇದಪ್ರಿಯ ಶಿವನೆಂಬರು-ವೇದಪ್ರಿಯ ಶಿವನಲ್ಲವಯ್ಯಾ: ನಾದವ ಮಾಡಿದ ರಾವಳಂಗೆ ಅರೆಯಾಯುಷ್ಯವಾಯಿತ್ತು. ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು! ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ: ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.
Transliteration Nādapriya śivanembaru-nādapriya śivanallayyā; vēdapriya śivanembaru-vēdapriya śivanallayyā: Nādava māḍida rāvaḷaṅge are āyuṣyavāyittu. Vēdavanōdida brahmana śira hōyittu! Nādapriyanū alla, vēdapriyanū alla: Bhaktipriya nam'ma kūḍalasaṅgamadēva.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Vachananjali, Sri Taralabalu Jagadguru Brihanmath, Sirigere
Video
English Translation 2 They say that Śiva is fond of ,nāda But He is not. They say that Śiva is fond of the Veda, But He is not. Rāvaḷa, who was the author of nāda, Lost half his life. Gone was the head of Brahma Who read the Veda. Our Lord Kūḍala Saṅgama Loves neither nāda nor Veda: It's bhakti he loves! Translated by: L M A Menezes, S M Angadi
Hindi Translation शिव को नाद प्रिय कहते हैं, शिव नादप्रिय नहीं है ।- शिव को वेदप्रिय कहते है-, शिव वेदप्रिय नहीं हैं- नादगायक रावण की आयु आधी हुई- वेदपाणी ब्रह्मा का सिर गया । कूडलसंगमदेव न नाद–प्रिय है, न वेद प्रिय हैं, वे भक्तिप्रिय हैं ॥- Translated by: Banakara K Gowdappa
Telugu Translation నాదప్రియుడు శివుడందురు. నాదప్రియుడు శివుడు కాడయ్యా: వేదప్రియుడు శివుడందురు. వేదప్రియుడు శివుడు కాడయ్యా: నాద మొనర్చిన రావణు డర్గాయుష్కుండయ్యెను వేదము చదివిన బ్రహ్మకు శిరంబెగిరెను! నాద ప్రియుడు కాడు వేద ప్రియుడూ కాడు భక్తి ప్రియుడు మా కూడల సంగమదేవుడు, Translated by: Dr. Badala Ramaiah
Tamil Translation இசையன்பன் சிவனென்பர், சிவனிசையன்ப னல்லவையனே, வேத அன்பன் சிவனென்பர், சிவன் வேதனன்பனல்லவையனே, இசையிசைத்த இராவணனுக்கு அரை ஆயுளாயிற்று, வேதமோதிய பிரம்மன் தலைபோயிற்று, இசையன்பனுமல்ல, வேத அன்பனுமல்ல பக்தியன்பன் நம் கூடல சங்கம தேவன். Translated by: Smt. Kalyani Venkataraman, Chennai
Marathi Translation नाद प्रिय म्हणती, शिवासी ते जन नाद प्रिय जाण, शिव नाही वेदप्रिय म्हणती, शिवासि ते जन वेद प्रिय जाण, शिव नाही नाद प्रिय असूनि , अकाली तो मेला मोक्षा अंचलता, रावण तो वेद पाठी असुनि, शिरच्छेद झाला मोक्षा अंचवला, ब्रम्हाही तो कूडलसंगमदेव! भक्तिप्रिय खास नाद-वेद हव्यास, नको, नको अर्थ - शिव नादप्रिय आहे हा लोकांचा समज आहे. पण तो नादप्रिय नाही. तसेच शिवाला वेदप्रिय म्हटले जाते पण तो वेदप्रियही नाही. कारण शिवभक्त रावण नाद संपन्न होता. ऐन तारुण्यात त्यास मरण आले म्हणून माझा शिव नाद, टाळ, मृदंग, किर्तनाला व सुस्वरात गाणाऱ्यांना भूलणारा नव्हे. त्याचप्रमाणे तो वेदप्रियही नाही. वेद पंडित ब्रम्हाचा शिरच्छेद झाला. ब्रम्ह स्वतःचेही रक्षण करु शकला नाही किंवा वेदही त्यांना वाचवू शकला नाही. म्हणून माझा कूडलसंगमदेव ( शिव परमात्मा) नादप्रिय वा वेदप्रिय नाही. तो केवळ भक्तिचा प्रिय आहे. अंतरमनाने केलेली भक्तिच त्याला आवडते. महात्मा बसवेश्वरांनी वरील वचनात दोन उदाहरणासह शिवाचे स्वरूप प्रकट करीत न भक्तीला प्राधान्य दिले आहे. Translated by Rajendra Jirobe, Published by V B Patil, Hirabaug, Chembur, Mumbai, 1983 नादप्रिय शिव म्हणतात, नादप्रिय शिव नाही. वेदप्रिय शिव म्हणतात, वेदप्रिय शिव नाही. नाद उपासक रावणाचे आयुष्य कमी झाले. वेद वाचणाऱ्या ब्रह्माचे शिर तुटले. नादप्रिय नाही, वेदप्रिय नाही. भक्तीप्रिय आमुचा कूडलसंगमदेव. Translated by Shalini Sreeshaila Doddamani
Urdu Translation کسی طرح سےوہ شیدا نہیں ہےنغموں کا پھرا س کےنام سے منسوب کیوں ہو موسیقی پرانے وید کا بھی وہ نہیں ہے دلدادہ ہمارے پیش نظرہے مثال راؤن کی وہ راگ رنگ پہ یوں تونثار تھا لیکن گنوائی اپنے ہی ہاتھوں سے اپنی عمرِ عزیز تھا یوں تووید کا خالق مگرزمانےمیں یہ واقعہ ہے، برہما بھی نذرِتیغ ہوئے اسےنہ راگ سےرغبت نہ وید سےالفت اسےپسند اگر ہےتوبس عبادت ہے اسی سے ہوتے ہیں خوش دیوا کوڈلا سنگم Translated by: Hameed Almas
ಶಬ್ದಾರ್ಥಗಳು ಅರೆ = ಸುಮ್ಮನೆ; ನಾದ = ಶಬ್ದ; ರಾವಳ = ;
ಕನ್ನಡ ವ್ಯಾಖ್ಯಾನ ಶಿವನನ್ನು ನಾದಲಂಪಟರು ನಾದಪ್ರಿಯನೆನ್ನುವರು, ವೇದಗರ್ವಿಗಳು ವೇದಪ್ರಿಯನೆನ್ನುವರು. ಆದರೆ ಶಿವನಿಗೆ ಆ ಯಾವ ವಿಕಾರವೂ ಇಲ್ಲ ಮತ್ತು ಬೇಕಿಲ್ಲ. ಅವನಿಗೆ ಬಹಳ ಪ್ರಿಯವಾದುದು ಭಕ್ತಿಯೊಂದೇ. ರಾವಣನು ವೀಣಾನಾದವನ್ನು ತನ್ನ ಪರಸತೀಲಾಂಪಟ್ಯ ಬೆರಸಿ ಶಿವನಿಗರ್ಪಿಸಿದ, ಬ್ರಹ್ಮನು ತನ್ನ ಬ್ರಾಹ್ಮ ಗರ್ವ ಬೆರಸಿ ವೇದಮಂತ್ರವನ್ನು ಶಿವನ ಮುಂದೆ ಘೋಷಿಸಿದ. ಸಚ್ಚಾರಿತ್ರ ಮತ್ತು ಸದ್ವಿನಯವಿಲ್ಲದ ಅವರಿಬ್ಬರಿಗೂ ಶಿವನು ಸುಮುಖನಾಗಲಿಲ್ಲವಷ್ಟೇ ಅಲ್ಲ-ಒಬ್ಬನ ಆಯುಷ್ಯರೇಖೆಯನ್ನು ಅರ್ಧಕ್ಕೆ ತುಂಡರಿಸಿದ, ಇನ್ನೊಬ್ಬನ ತಲೆಯನ್ನೇ ಚಿವುಟಿಹಾಕಿದ. ಶಿವನು ಕೇವಲ ಶಿವನೇ ಅಲ್ಲ-ತನಗೆ ಪ್ರಿಯವೇನೆಂದರಿಯದೆ ಯದ್ವಾತದ್ವಾ ನಡೆಸಿಕೊಂಡವರಿಗೆ ರುದ್ರ ಕೂಡ. ಇಲ್ಲಿ ರಾವಣನು ಅಧಿಕಾರಮದೋನ್ಮತ್ತ ರಾಕ್ಷಸರನ್ನೂ, ಬ್ರಹ್ಮನು ಜಾತಿಮದೋನ್ಮತ್ತ ಬ್ರಾಹ್ಮಣರನ್ನೂ, ಅಚ್ಚಭಕ್ತಿಯು ಮುಗ್ಧ ಶೂದ್ರಾತಿಶೂದ್ರ ಜನಸಾಮಾನ್ಯ ಪ್ರೇಮವನ್ನೂ ಪ್ರತಿನಿಧಿಸುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು