•  
  •  
  •  
  •  
Index   ವಚನ - 182    Search  
 
ಭಕ್ತನ ಜ್ಞಾನಿಸ್ಥಲ - ಪೂಜೆ
ಹಸಿವಾದೊಡುಂಬುದನು, ಸತಿಯ ಸಂಭೋಗವನು ಆನಾಗಿ ನೀ ಮಾಡೆಂಬವರುಂಟೆ; ಮಾಡುವುದು, ಮಾಡುವುದು ಮನಮುಟ್ಟಿ: ಮಾಡುವುದು, ಮಾಡುವುದು ತನುಮುಟ್ಟಿ ತನುಮುಟ್ಟಿ ಮನಮುಟ್ಟದಿರ್ದೊಡೆ ಕೂಡಲಸಂಗಮದೇವನೇತರಲ್ಲಿಯೂ ಮೆಚ್ಚ.
Transliteration Hasivādaḍumbudanu, satiya sambhōgavanu ānāgi nī māḍembavaruṇṭe; māḍuvudu, māḍuvudu manamuṭṭi: Māḍuvudu, māḍuvudu tanumuṭṭi tanumuṭṭi manamuṭṭadirdoḍe kūḍalasaṅgamadēvanētaralliyū mecca.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 To sate your hunger or to sate your lust Is never done by deputy! One ought to do it, do with heart, One ought to do it, do it oneself. If body acts, without the heart, It does not please at all Lord Kūḍala Saṅgama. Translated by: L M A Menezes, S M Angadi
Hindi Translation भूख लगने पर खाने के लिये, पत्नी से संभोग करने के लिए, कोई किसी और से कहता है? मन लगाकर स्वयं करना है तन लगाकर स्वयं करना है तन लगे पर मन न लगे, तो कूडलसंगमदेव कभी प्रसन्न नहीं होंगे ॥ Translated by: Banakara K Gowdappa
Telugu Translation ఆకిలికి భుజించుట సతిని భోగించుట; ఆత్మార్థమన్యునిచే చేయించువారు కలరే! చేయవలె చేయవలె మనసార; చేయవలె చేయవలె చేతులార; తనువొప్పి మనసొప్పకున్న శివు డేదియూ మెచ్చడయ్యా: Translated by: Dr. Badala Ramaiah
Tamil Translation பசியாயினுண்பதையும், கிழத்தியுடன் கூடுவதையும் தன்பொருட்டு “நீ செய்” என்பவருண்டோ? செய்வது, செய்வது மனம் நிறைந்து, செய்வது, செய்வது உடல் நிறைந்து, உடல் நிறைந்து, மனம் நிறைந்து ஆற்றாயெனின் கூடல சங்கம தேவன் எவ்வகையிலும் ஏலான். Translated by: Smt. Kalyani Venkataraman, Chennai
Marathi Translation भूक लागल्यावर खाणे, सतीबरोबर रतीसुख घेणे दुसऱ्यांच्याकडून करता येईल का? करायचे तर मनापासून करावे, करायचे तर जीव लावून करावे. तनाने पूजा केली पण मन लावून केली नाही तर कूडलसंगमदेव प्रसन्न होणार नाही. Translated by Shalini Sreeshaila Doddamani
ಶಬ್ದಾರ್ಥಗಳು ತನು = ಶರೀರ; ಸಂಭೋಗ = ಮಿಲನ;
ಕನ್ನಡ ವ್ಯಾಖ್ಯಾನ ತನಗೆ ಹಸಿವಾದರೆ ತಾನೇ ಉಣ್ಣಬೇಕು, ತನಗೆ ರತಿಯಾದರೆ ತಾನೇ ಹೆಂಡತಿಯೊಡನೆ ಸಂಭೋಗಿಸಬೇಕು. ನನಗೆ ಹಸಿವಾಯಿತು-ನೀನು ಉಣ್ಣು ಎಂದರೆ, ನನಗೆ ರತಿಯಾಯಿತು-ನೀನು ಸಂಭೋಗಿಸು ಎಂದರೆ ಅಪಹಾಸ್ಯವಾದೀತು. ಏಕೆಂದರೆ ಅವು ತನ್ನದೇ ಆದ ದೇಹ ಮುಟ್ಟಿ ಮನ ಮುಟ್ಟಿ ನಡೆಯಬೇಕಾದ ತೀರ ವೈಯಕ್ತಿಕ ರಸಕ್ರಿಯೆಗಳು. ಅವನ್ನು ಒಬ್ಬರಿಗಾಗಿ ಇನ್ನೊಬ್ಬರು ಮಾಡಲಾಗುವುದಿಲ್ಲ. ಹಾಗೆಯೇ ಶಿವಪೂಜೆಯು ತನುಮುಟ್ಟಿ ಮನಮುಟ್ಟಿ ತನ್ನಿಂದಲೇ ನಡೆಯಬೇಕಾದೊಂದು ರಾಸಲೀಲೆ. ಕೂಲಿಯ ಭಕ್ತಿಗೆ ಕೂಲಿಯ ಪೂಜೆಗೆ ದೇವರೊಲಿಯುವುದಿಲ್ಲ-ಎನ್ನುತ್ತ-ಜನರು ದೇವರ ಪೂಜೆಯನ್ನು ನೇರವಾಗಿ ತಾವೇ ಮಾಡದೆ ಇನ್ನೊಬ್ಬರ ಕೈಯಲ್ಲಿ ಮಾಡಿಸುವ ಛಾಂದಸ ಪ್ರವೃತ್ತಿಯನ್ನು ಬಸವಣ್ಣನವರು ಕಟುವಾಗಿ ಖಂಡಿಸುತ್ತಿರುವರು. ಇಷ್ಟಲಿಂಗದ ಪೂಜೆಯನ್ನು ತಾನೇ ಮಾಡಬೇಕೆಂಬುದಿರಲಿ, ದೇವಾಲಯದಲ್ಲಿ ಶಿವಲಿಂಗಪೂಜೆಯನ್ನೂ ಅರ್ಚಕನ ಮಧ್ಯಸ್ಥಿಕೆಯಿಲ್ಲದೆ ತಾನೇ ಮಾಡಬೇಕೆಂಬುದು ಬಸವಣ್ಣನವರ ಚಳುವಳಿ. ಅವರು ಪುರೋಹಿತ ಷಾಹಿಯ ಮಧ್ಯಸ್ಥಿಕೆಯನ್ನು ಸ್ವಂತ ಶಿವಧರ್ಮದಲ್ಲಿಯೂ ಸಹಿಸಲಿಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು