ಭಕ್ತನ ಜ್ಞಾನಿಸ್ಥಲ - ಲಿಂಗನಿಷ್ಠೆ
ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವನು ತಾ ಮಾಡಬೇಕಲ್ಲದೆ,
ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ?
Transliteration Tannāśrayada ratisukhavanu, tānumba ūṭavanu
bēre mattobbara kaiyalli māḍisabahude?
Tanna liṅgakke māḍuva nityanēmavanu tā māḍabēkallade,
bēre mattobbara kaiyalli māḍisabahude?
Kem'mane upacārakke māḍuvarallade
nim'manettaballaru, kūḍalasaṅgamadēvā?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Indulging in love, eating one's food-
Is that ever done by deputy!
Oneself one ought to do
All Lings's rites and ceremonies:
It's never done by deputy...
O Kūḍala Saṅgama,
How can they know Thee, Lord,
Doing it for mere formality?
Translated by: L M A Menezes, S M Angadi
Hindi Translation निजाश्रित रतिसुख, निजभोजन
अन्य के हाथों करा सकते हैं?
निजशिवलिंगार्थ भी किए जानेवाले
नित्य नेम स्वयं करना चाहिए
अन्य के हाथों करा सकते हैं?
वे यों ही शिष्टाचारार्थ करते हैं,
तुम्हें कहाँ जानते हैं, कूडलसंगमदेव ।
Translated by: Banakara K Gowdappa
Telugu Translation తన్నాశ్రయించిన రతి సుఖము
తాదిను భోజనము;
వేఱె మఱి ఒక నిచే చేయింపదగునే?
తన దేవునకు చేయు నిత్య నిమయము
తాఁజేయవలెగాని వేరొకనిచే
చేయింపదగునే? వృథా ఉపచారమునకు చేతురేగాని
నిన్నెట్లు తెలియనేర్తురు కూడల సంగదేవా!
Translated by: Dr. Badala Ramaiah
Tamil Translation தன் கிழத்தியோடிணைவது தானுண்ணு முணவினை
வேறொருவர் மூலமாற்றவியலுமோ?
தன் இலிங்கத்திற்குத்தான் நாடோறுமாற்ற நெறியைத் தானாற்றாது
வேறொருவர் மூலம் ஆற்ற வியலுமோ?
வரிதே புகழ்ச்சியின் மாட்டுச் செய்வரன்றி
உம்மையறியவல்லார் கூடல சங்கம தேவனே.
Translated by: Smt. Kalyani Venkataraman, Chennai
Marathi Translation
आपुले भोजन, आपुलीया हस्ते,
कैसे परहस्ते, केले जाय
रतिसुख तैसे, आपुले आपण
परहस्ते जाण, शक्य नाही
तैसे लिंगार्चन परहस्ते जाण
करणे अज्ञान, दंभाचार
कूडलसंगमदेवा! औपचारिक ऐसे
जाणतिल कैसे, तुज लागी ?
अर्थ - आपले रतिसुख आपण घ्यावे. इतराकडून घेता येणार नाही. त्याचप्रमाणे आपली भूक दुसऱ्याने अन्न खाल्याने मिटत नाही. म्हणून आपली इष्टलिंगाची (परमेश्वराची) पूजा आपणच करावी. इतरांकरवी रोजगाराने पूजा करवून घेणे व्यर्थ होय. पूजेत औपचारिकता असू नये. पूजा स्वहस्ते केल्यानेच माझा कूडलसंगमदेव पावणार पूजा, भक्ति, नित्य-नेम पूजारी किंवा पुरोहिताकडून करवून घेणाऱ्यास व करणाऱ्यास परमात्मा जाणू शकणार नाही.
Translated by Rajendra Jirobe, Published by V B Patil, Hirabaug, Chembur, Mumbai, 1983
आपले रतीसुख भोगल्याशिवाय, जेवण जेवल्याशिवाय,
दुसऱ्यांच्याकडून ही कामे करविता येतील ?
आपल्या इष्टलिंगास केले जाणारे नित्य नियम
आपण केल्याविना दुसऱ्यांच्याकडून ही कामे करविता येतील?
केवल औपचारिकते साठी करणारे सगळे
तुम्हा कसे जाणणार कूडलसंगमदेवा?
Translated by Shalini Sreeshaila Doddamani
Urdu Translation اس آدمی کا ہوکردار کس طرح محبوب
حصولِ لطف ونشاط ِحیات کی خاطر
وہ اپنےحصّے کی روزی ہویا کہ وصلِ حبیب
ہرایک حال میں جودوسروں سے کہتا ہو
مرے بجائےمرا فرض تم ادا کرنا
ہم اپنے کام کوخود ہی کریں تو بہترہے
جوسب پہ فرض ہےاس لنگ کی عبادت کو
یہ لازمی ہےکہ خودہی اداکریں ہم لوگ
بھلا یہ غیر کے ہاتھوں سےکس طرح ہوگی
یہ جانتے ہوئے اس رمزکوحقیقت کو
وہ تیرے حُسنِ حقیقی کوکیسے سمجھیں گے
جوصرف بہرِتماشہ چلیں عبادت کو
مرےعزیزمیرے دیوا کوڈلا سنگا
Translated by: Hameed Almas
ಶಬ್ದಾರ್ಥಗಳು ಕೆಮ್ಮನೆ = ಸುಮ್ಮನೆ; ನೇಮ = ನಿಯಮ; ರತಿ = ಶೃಂಗಾರದ ಅಧಿ ದೇವತೆ;
ಕನ್ನಡ ವ್ಯಾಖ್ಯಾನ ಹಿಂದಿನ ವಚನದಲ್ಲಿಯ ನಿದರ್ಶನಗಳನ್ನೇ ಕೊಟ್ಟು-ಇಷ್ಟಲಿಂಗಕ್ಕೆ ಪರರ ಕೈಯಿಂದ ಪೂಜೆ ಮಾಡಿಸುವುದನ್ನು ನಿಷೇದಿಸಲಾಗಿದೆ-ಪ್ರತ್ಯೇಕವಾಗಿ ಈ ವಚನದಲ್ಲಿ.
ಇಷ್ಟಲಿಂಗ ಪೂಜೆಯ ಎಷ್ಟು ಭಾವನಾತ್ಮಕ ಮತ್ತು ಆತ್ಮೀಯವೆಂಬುದನ್ನರಿಯದ ಮತ್ತು ಕಾಟಾಚಾರವೆಂಬಂತೆ ಅದನ್ನು ಇನ್ನೊಬ್ಬರ ಕೈಯಿಂದ ಮಾಡಿಸುವ ಜನರಿಗೆ-ಶಿವನೆಂದರೆ ಪತಿಯೆಂಬ ತಾನು ಸತಿಯೆಂಬ-ಇಬ್ಬರದೂ ಮೀಸಲು ಮಧುರ ಸಂಬಂಧವೆಂಬ ವಿಷಯ ತಿಳಿಯದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು