•  
  •  
  •  
  •  
Index   ವಚನ - 184    Search  
 
ಭಕ್ತನ ಜ್ಞಾನಿಸ್ಥಲ - ಲಿಂಗನಿಷ್ಠೆ
ಬಂಡಿ ತುಂಬಿದ ಪತ್ರೆಯ ತಂದು ಕಂಡ ಕಂಡಲ್ಲಿ ಮಜ್ಜನಕ್ಕೆರೆವಿರಿ: ತಾಪತ್ರಯವ ಕಳೆದು ಪೂಜಿಸಿ; ತಾಪತ್ರಯವ ಲಿಂಗನೊಲ್ಲ. ಕೂಡಲಸಂಗಮದೇವ ಬರಿಯುದಕದಲ್ಲಿ ನೆನೆವನೆ?
Transliteration Baṇḍi tumba patreya tandu kaṇḍa kaṇḍalli majjanakkereviri: Tāpatrayava kaḷedu pūjisi; tāpatrayava liṅganolla. Kūḍalasaṅgamadēva bariyudakadalli nenevane?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 You bring carts full of bilwa leaves, Pour water for the bath Wherever you please. If you must worship, wipe The triple pain Which Liṅga hates. Lord Kūḍala Saṅgama Does not grow soft With a mere water bath! Translated by: L M A Menezes, S M Angadi
Hindi Translation शकट भर बिल्व लाकर जहाँ देखों वहाँ अभिषेक करते हो; तापत्रय से मुक्त हो पूजा करो तापत्रय लिंगदेव नहीं चाहते कूडलसंगमदेव केवल जल से आर्द्र होंगे? Translated by: Banakara K Gowdappa
Telugu Translation బండినిండ పత్తిరి కొనిదెచ్చి చూచినకడ యెల్లా అభిషేకము సేతురె; తాపత్రయము విడిచి కొల్వుడో! తాపత్రయ మొల్లదు లింగము కూడల సంగమ దేవుడు జలమాత్రమున నానునే? Translated by: Dr. Badala Ramaiah
Tamil Translation வண்டி நிரம்ப வில்வம் தந்து, காணுமிடமெலாந் திருமஞ்சனம் செய்வீர், இன்னலைக் களைந்து தொழுவீர், இன்னலைச் சிவன் நயவான் கூடல சங்கம தேவன் வரிதே நீரினால் நனைவனோ? Translated by: Smt. Kalyani Venkataraman, Chennai
Marathi Translation गाडी भरुन बेलपत्री आणून, इथे तिथे अभिषेक करता तापत्रयाविना पूजा कर, तापत्रय लिंगदेवाला पसंत नाही. कूडलसंगमदेव केवळ उदकाने प्रसन्न होईल ? Translated by Shalini Sreeshaila Doddamani
ಶಬ್ದಾರ್ಥಗಳು ಉದಕ = ನೀರು; ತಾಪತ್ರಯ = ಮೂರು ಬಗೆಯ ತಾಪ(ಕಾಯ, ಮನ, ಮಾತಿನಲ್ಲಿ ಉಂಟಾಗುವ ತಾಪ); ಮಜ್ಜನ = ಸ್ನಾನ;
ಕನ್ನಡ ವ್ಯಾಖ್ಯಾನ ಶಿವಲಿಂಗಕ್ಕೆ ಪೂಜೆ ಮಾಡಲೆಂದು ಹೋದಹೋದಲ್ಲಿ ಬಂಡಿಗಳಲ್ಲಿ ನೀರನ್ನೂ ಬಿಲ್ವಪತ್ರೆಯನ್ನು ಹೇರಿಕೊಂಡು ಹೋಗಿ-ಅಲ್ಲಲ್ಲಿ ಲಿಂಗಕ್ಕೆ ಧಾರೆಧಾರೆಯಾಗಿ ನೀರನ್ನು ಎರೆದು, ಇಂಡೆಇಂಡೆಯಾಗಿ ಪತ್ರೆಯನ್ನು ಏರಿಸುವರು. ಅದರಿಂದ ಶಿವಲಿಂಗಕ್ಕೆ ತಂಪೆನಿಸುವುದೇನು ? ನಮ್ಮಲ್ಲಿರುವ ತಾಪತ್ರಯಗಳ ಬೇಗೆ ತಾಗಿ ನಮ್ಮ ಕೈಯಲ್ಲೇ ಸಿಕ್ಕಿಬಿದ್ದಂತಿರುವ ಆ ಶಿವಲಿಂಗನು ಪರಿತಪಿಸುವನು. ಅದು ಪೂಜೆಯಾಗದೆ ಅಣಕವಾಗುವುದು. ಆದ್ದರಿಂದ ಶಿವನು (ನಮ್ಮನ್ನು) ನೆನೆಯಬೇಕಾದರೆ-ನಾವು ನಮ್ಮ ತಾಪತ್ರಯಗಳನ್ನು ಬಿಟ್ಟು ಪೂಜಿಸಬೇಕು-ಎನ್ನುವರು ಬಸವಣ್ಣನವರು. ತಾಪತ್ರಯವೆಂಬಲ್ಲಿ “ಪತ್ರೆ”ಯವೆಂಬ ಶ್ಲೇಷೆಯಾಗುವುದನ್ನು ಗಮನಿಸಿ-ಈ ವಿಧವಾದ ಶ್ಲೇಷೆಗೆ 62ನೇ ವಚನವನ್ನು ನೋಡಿ : ಅಲ್ಲಿ ಇವನಾರವ ಎಂಬಲ್ಲಿ ಹಾರವ ಎಂಬ ಶ್ಲೇಷೆಯಿದೆ-ಇದು ಪದಶ್ಲೇಷೆ. ತಾಪತ್ರಯಗಳು ಆಧಿದೈವಿಕ-ಆಧಿಭೌತಿಕ-ಆಧ್ಯಾತ್ಮಿಕ ಎಂದು ಮೂರು ಬಗೆ : ದೈವನಿಯಾಮಕವಾಗಿ ಬರುವ ಹಸಿವು ತೃಷೆ ಮುಪ್ಪು ಸಾವು ಮುಂತಾದವುಗಳಿಂದ ಉಂಟಾಗುವ ದುಃಖ ಆಧಿದೈವಿಕ.ಪಾಂಚ ಭೌತಿಕವಾಗಿ ಬರುವ ಚಳಿ ಸೆಖೆ ಮುಂತಾದವುಗಳಿಂದ ಉಂಟಾಗುವ ದುಃಖ ಆಧಿಭೌಧಿಕ. ತನ್ನ ದೇಹ ಮನಸ್ಸುಗಳೇ ಮೂಲವಾಗಿಬರುವ ರೋಗರುಜಿನಗಳಿಂದ ಮತ್ತು ಮದಮತ್ಸರಾದಿಗಳಿಂದ ಉಂಟಾಗುವ ದುಃಖ ಆಧ್ಯಾತ್ಮಿಕ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು