•  
  •  
  •  
  •  
Index   ವಚನ - 185    Search  
 
ಭಕ್ತನ ಜ್ಞಾನಿಸ್ಥಲ - ಲಿಂಗ-ಜಂಗಮ
ಭಕ್ತನಾಗಿ ಲಿಂಗ-ಜಂಗಮವ ಪೂಜಿಸಬೇಕು ಭಕ್ತನಾಗಿ ತನ್ನ ತಾ ಪೂಜಿಸಿಕೊಂಬುದು ಎಂತಯ್ಯಾ? ಸ್ವಾಮಿ-ಭೃತ್ಯಸಂಬಂಧವು ಎಂತಯ್ಯಾ ಪೂರೈಸುವುದು? ಕೂಡಲಸಂಗಮದೇವಾ, ಕಣ್ಣ ಕಟ್ಟಿ ಕನ್ನಡಿಯ ತೋರುವಂತೆ!
Transliteration Bhaktanāgi liṅga-jaṅgamava pūjisabēku bhaktanāgi tanna tā pūjisikombudu entayyā? Svāmi-bhr̥tyasambandhavu entayyā pūraisuvudu? Kūḍalasaṅgamadēvā, kaṇṇa kaṭṭi kannaḍiya tōruvante!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If you would worship Liṅga and Jaṅgama, You must be a bhakta first. Being a bhakta, how Can you adore yourself? How can the bond Between servent and Lord Be made good, O Kūḍala Saṅgama Lord? It's holding a looking-glass After blindfolding the eyes! Translated by: L M A Menezes, S M Angadi
Hindi Translation भक्त को लिंगजंगम की पूजा करनी चाहिए- भक्त को अपनी पूजा स्वयं कर लेना कैसे? स्वामी संबंध कैसे पूर्ण होगा- सेवक यह आँख पर पट्टी बाँध दर्पण दिखाने की भाँति है, कूडलसंगमदेव ॥ Translated by: Banakara K Gowdappa
Telugu Translation భక్తుడై లింగంగముల పూజింపవలె భక్తుడై తనకు తా పూజించుకొను టెట్లయ్యా? స్వామిభృత్యసంబంధమెట్ల య్యా నిండునది? కూడల సంగమదేవా ! కనుగట్టి అద్దమిచ్చినట్లయ్యె! Translated by: Dr. Badala Ramaiah
Tamil Translation பக்தனாகி, இலிங்க மெய்யடியாரை வழிபடல் வேணும். பக்தனாகித் தான் வழிபாட்டினை ஏற்பதேனையனே? ஆண்டான் -- தொண்டன் உறவு எங்ஙனம் நிறைவேறுவுதோ? கூடல சங்கம தேவனே கண்கட்டி ஆடி காட்டற்போல். Translated by: Smt. Kalyani Venkataraman, Chennai
Marathi Translation भक्त होऊन लिंग जंगमाची पूजाकरावी. भक्ताला स्वपूजेची इच्छा कशाला? स्वामी भृत्याचा हा संबंध कसा संभाळणार? कूडलसंगमदेवा, डोळे बांधून दर्पण दाखविल्यासम आहे. Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ಪೂರುಸು = ; ಭೃತ್ಯ = ಸೇವಕ;
ಕನ್ನಡ ವ್ಯಾಖ್ಯಾನ ಪೂಜೆಯ ನೆಪದಲ್ಲಿ ತನಗೆ ತಾನೆ ಅಭಿಷೇಕ(ಸ್ನಾನ)ಮಾಡಿಕೊಂಡು, ತನಗೆ ತಾನೇ ವಿಭೂತಿ ಪೂಸಿಕೊಂಡು, ರುದ್ರಾಕ್ಷಿ ಧರಿಸಿ ಪುಷ್ಪಾಂಜಲಿಯನ್ನು ಕೊಟ್ಟುಕೊಂಡು-ತಾನೇತಾನಾಗಿ ಮೆರೆಯುವುದಲ್ಲ ಲಿಂಗಪೂಜೆ. ಶಿವನು ಸ್ವಾಮಿ, ನಾವು ಭೃತ್ಯರು. ಈ ಸ್ವಾಮಿ-ಭೃತ್ಯ ಸಂಬಂಧ ಅರ್ಥಪೂರ್ಣವಾಗುವ ಒಂದು ಸಾಂಗೋಪಾಂಗ ಕಾರ್ಯವಿಧಾನವೇ ಲಿಂಗಪೂಜೆ. ಆ ಪೂಜೆಯು ಭಕ್ತನು ಮಾಡಿಕೊಳ್ಳುವ ಸ್ನಾನ-ಭಸ್ಮಧಾರಣ-ಕಲಾನ್ಯಾಸ-ಷಡಂಗನ್ಯಾಸ-ಪಂಚಬ್ರಹ್ಮನ್ಯಾಸ-ರುದ್ರಾಕ್ಷಧಾರಣ ಇತ್ಯಾದಿಯಿಂದಲೇ ಅಲ್ಲ-ಮುಂದುವರಿದು ಮಾಡುವ ಇಷ್ಟಲಿಂಗಪೂಜೆಯಿಂದಲೂ ಪರಿಸಮಾಪ್ತಿಗೊಳ್ಳುವುದಿಲ್ಲ. ಅವಕ್ಕೆ ಪೂರಕವಾಗಿ ಜಂಗಮಸೇವೆಯನ್ನು ಮಾಡಲೇಬೇಕು. ಜಂಗಮವನ್ನು ಗುರುತಿಸದೆ ಗೌರವಿಸದೆ ಕೇವಲ ಲಿಂಗವನ್ನು ಕಣ್ಣು ಮುಚ್ಚಿ ಧ್ಯಾನಿಸುವಂತೆ ಮಾಡುವುದು-ಕಣ್ಣನ್ನು ಮುಚ್ಚಿಕೊಂಡು ಕನ್ನಡಿಯನ್ನು ಹಿಡಿದಂತೆ ಹಾಸ್ಯಾಸ್ಪದವಾಗುವುದು. ಲಿಂಗ(ದರ್ಪಣ)ದಲ್ಲಿ ಜಂಗಮವನ್ನು ಕಾಣಬೇಕು-ಆ ಜಂಗಮಪೂಜೆಯಿಂದ ಲಿಂಗಪೂಜೆ ಪರಿಪೂರ್ಣಗೊಳ್ಳುವುದೆಂಬುದಭಿಪ್ರಾಯ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು