•  
  •  
  •  
  •  
Index   ವಚನ - 187    Search  
 
ಭಕ್ತನ ಜ್ಞಾನಿಸ್ಥಲ - ಲಿಂಗ-ಜಂಗಮ
ಕನ್ನಡಿಯ ನೋಡುವ ಅಣ್ಣಗಳಿರಾ, ಜಂಗಮವ ನೋಡಿರೇ; ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿರ್ಪ. `ಸ್ಥಾವರ ಜಂಗಮ ಒಂದೆ' ಎಂದುದು ಕೂಡಲಸಂಗನ ವಚನ.
Transliteration Kannaḍiya nōḍuva aṇṇagaḷirā, jaṅgamava nōḍire; jaṅgamadoḷage liṅgayya sannihitanāgirpa. `Sthāvara jaṅgama onde' endudu kūḍalasaṅgana vacana.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 My brother, you who gaze Into the mirror, look At Jaṅgama ; For in Him Liṅga dwells. Kūḍala Saṅga's word Says, 'The Immovable and The Movable are one.' Translated by: L M A Menezes, S M Angadi
Hindi Translation दर्पण देखनेवाले भाइयों, जंगम को देखो, जंगम में लिंगदेव सन्निहित है कूडलसंगमदेव का कथन है स्थावर और जंगम एक है ॥ Translated by: Banakara K Gowdappa
Telugu Translation భూమిలో నిధు లుంట అంజనము కలవారు చూపెదరు భయపడకుర! మనమున సందేహింపకురా! జంగమున లింగయ్య కలడని నమ్మిన సంగయ్య కన్పించురా! Translated by: Dr. Badala Ramaiah
Tamil Translation ஆடியை நோக்கும் அண்ணன்மீர், மெய்யன்பரைக் காணீர், மெய்யன்பருளே -- இலிங்கையனுறைகிறான் “ஸ்தாவர -- ஜங்கமம் ஒன்றே” எனும் கூடல சங்கனின் பொன்மொழி. Translated by: Smt. Kalyani Venkataraman, Chennai
Marathi Translation इष्टलिंगदर्पण पाहणाऱ्या बंधूनो जंगमाला पहा. जंगमात लिंगदेव सन्निहीत आहे. ` स्थावर जंगम एक आहे.` हे कूडलसंमदेवाचे वचन आहे. Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ಸನ್ನಿಹಿತ = ಹತ್ತಿರ; ಸ್ಥಾವರ = ಸ್ಥಗಿತ, ಚೈತನ್ಯವಿರದ, ಜೀವವಿರದ;
ಕನ್ನಡ ವ್ಯಾಖ್ಯಾನ ಕಾಣದೇ ಹೋದ ಪ್ರಿಯವಸ್ತು ಎಲ್ಲಿರುವುದೆಂಬುದನ್ನು ಹೇಳಲು (ಮಾಯಾ)ಗನ್ನಡಿಯನ್ನು ನೋಡುವುದುಂಟು. ಹಾಗೆಯೇ ಕಣ್ಣಿಗೆ ಕಾಣದಂತಾಗಿರುವ ಶಿವನು ಎಲ್ಲಿರುವನೆಂಬುದನ್ನು ಕಾಣಬೇಕಾದರೆ ಜಂಗಮ(ಮುಖದರ್ಪಣ)ವನ್ನು ನೋಡು. ಅಲ್ಲೇ ಅವನ ಕಣ್ಣುಗಳಲ್ಲೇ ಮುಕ್ಕಣ್ಣನಾಗಿ, ಧರಿಸಿದ ಜಟಾಭಾರದಲ್ಲೇ ಗಂಗಾಧರನಾಗಿ ಶಿವನು ಗೋಚರಿಸುವನು. ಜಂಗಮ ಬೇರೆಯಲ್ಲ ಲಿಂಗ ಬೇರೆಯಲ್ಲ-ಸ್ಥಾನ ಸ್ಥಾನಗಳಲ್ಲಿ ನೆಲೆನಿಂತಿರುವ (ಸ್ಥಾವರ)ಲಿಂಗವೂ, ಲೋಕಹಿತಕ್ಕಾಗಿ ಸದಾ ಸಂಚಾರ ಮಾಡುತ್ತಿರುವ ಜಂಗಮ(ಲಿಂಗ)ವೂ ಒಂದೇ ದಿವ್ಯಶಕ್ತಿಯ ಸ್ಥಿತಿ-ಗತಿಯೆಂಬ ಎರಡು ರೂಪಗಳೆಂದು ಶಿವಾಗಮಗಳು ಸಾರುತ್ತಿವೆ. ಈ ವಚನದಲ್ಲಿ ಬಸವಣ್ಣನವರು ಬಳಸಿರುವ ಸ್ಥಾವರ ಎಂಬ ಪದವು ಇಷ್ಟಲಿಂಗಕ್ಕೂ ಅನ್ವಯಿಸುತ್ತದೆಂಬುದನ್ನು ಗಮನಿಸಿರಿ. ಇಲ್ಲದಿದ್ದರೆ ಅವರು ಶಿವಾಲಯದ (ಸ್ಥಾವರ)ಲಿಂಗವನ್ನು ಮಾತ್ರ ಪ್ರಸ್ತಾಪಿಸುತ್ತಿರುವರೇನು ?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು