•  
  •  
  •  
  •  
Index   ವಚನ - 188    Search  
 
ಭಕ್ತನ ಜ್ಞಾನಿಸ್ಥಲ - ಭಕ್ತಿ
ಗೀತವ ಹಾಡಿದೊಡೇನು? ಶಾಸ್ತ್ರ-ಪುರಾಣವ ಕೇಳಿದೊಡೇನು? ವೇದ-ವೇದಾಂತವನೋದಿದೊಡೇನು? ಮನವೊಲಿದು ಲಿಂಗಜಂಗಮವ ಪೂಜಿಸಲರಿಯದವರು ಎಲ್ಲರಲಿ ಅನುಭಾವಿಯಾದೊಡೇನು? ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.
Transliteration Gītava hāḍidoḍēnu? Śāstra-purāṇava kēḷidaḍēnu? Vēda-vēdāntavanōdidoḍēnu? Manavolidu liṅgajaṅgamava pūjisalariyadavaru ellarali'anubhāviyādoḍēnu? Bhaktiyilladavaranolla kūḍalasaṅgamadēva.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
Music Courtesy: Album Name: Neerige Naidileye Shrungara, Singer: Ratna Hemantha Kulakarni, Music: M. S. Maruthi Label: Jhankar Music
English Translation 2 What if you sing The Gita? What if you hear The Śastrās and Purānas? What if you read The Veda and Vēdānta ? What if they have The highest experience of all, Unless they worship Liṅga and Jaṅgama With all their heart? Lord Kūḍala Saṅgama rejects The undevout. Translated by: L M A Menezes, S M Angadi
Hindi Translation गीत गायन से क्या? शास्त्रपुराण- श्रवण से क्या? वेदवेदांत पठन से क्या-? मनसा जो लिंगजंगम को पूजना नहीं जानते- वे सब अनुभावी हो, तो क्या? भक्तिहीनों को कूडलसंगमदेव नहीं चाहते ॥ Translated by: Banakara K Gowdappa
Telugu Translation లింగము నర్పింతు వేని జంగమునకు జంకనే జంకవలయు? గూటము మ్రింగినట్లు నిగిడి నిల్వురాదు; కలమాగి గొనవైచు నరటివలే వంగి తలవంచి వేడిన పదవినిచ్చు కూడల సంగమ దేవుడు. Translated by: Dr. Badala Ramaiah
Tamil Translation இசைபாடிலென்ன? சாத்திர புராணத்தைக் கேட்பிலென்ன? வேத வேதாந்தத்தை ஓதிலென்ன? மனவன்புகெழுமி இலிங்க மெய்யன்பரை வணங்கார் அனைவரைவிட வல்லவராகி யிருப்பிலென்ன? பக்தியற்றோர்க்கு அருளான் கூடல சங்கம தேவன். Translated by: Smt. Kalyani Venkataraman, Chennai
Marathi Translation गीत गायले तरी काय, शास्त्र-पुराण ऐकले तरी काय? वेदवेदांत वाचले तरी काय होणार? तन्मयतेने लिंग जंगमाची पूजा न करणारे सर्व प्रज्ञावंत असून काय उपयोग ? भक्तीविहीनावर कूडलसंगमदेव प्रसन्न होणार नाही. Translated by Shalini Sreeshaila Doddamani
ಶಬ್ದಾರ್ಥಗಳು ಅನುಭಾವಿ = ಸಾಕ್ಷಾತ್ಕಾರವಾದ ವ್ಯಕ್ತಿ; ಗೀತ = ಹಾಡು; ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ;
ಕನ್ನಡ ವ್ಯಾಖ್ಯಾನ ಜಂಗಮವನ್ನು ಲಿಂಗರೂಪಿ ಎಂದು ಕಾಣಲಾರದವನು ಗೀತಗಳನ್ನು ಹಾಡಿದರೇನು, ಶಾಸ್ತ್ರಗಳನ್ನು ಕೇಳಿದರೇನು, ವೇದ ಉಪನಿಷತ್ತುಗಳನ್ನು ಓದಿದರೇನು-ಎಲ್ಲವೂ ವ್ಯರ್ಥ-ಇವನು ಮಹಾ ಶಿವಜ್ಞಾನಿಯೆಂದು ಎಲ್ಲರೂ ಕೊಂಡಾಡಿದರೇನು-ಜಂಗಮಭಕ್ತಿಯಿಲ್ಲದವನನ್ನು ಶಿವನೊಲ್ಲ. ವಿ : ಬಸವಣ್ಣನವರ ಪ್ರಕಾರ ಶಿವಮತದವರೂ ವೇದ-ವೇದಾಂತ(ಉಪನಿಷತ್ತು)ಗಳನ್ನು ಓದುವರೆಂದು ಈ ವಚನದಿಂದ ಸ್ಪಷ್ಟವಾಗುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು