ಭಕ್ತನ ಜ್ಞಾನಿಸ್ಥಲ - ಲಿಂಗ-ಜಂಗಮ
ಲಾಂಛನ ಹೊರಗೆ ಬಂದಿರಲು, ಒಳಗೆ ಲಿಂಗಾರ್ಚನೆಯೆಂತಯ್ಯಾ?
ಮುಖದಲ್ಲಿ ಕಟ್ಟಿದ ಕನ್ನಡಿ, ಮೂಗಿನ ಮೇಲಣ ಕತ್ತಿ !
ಸಮಯಾಚಾರವೆಂತುಟಯ್ಯಾ? ಕೂಡಲಸಂಗಮದೇವಯ್ಯಾ.
ಮೂಗಕೊಯ್ಯದೆ ಮಾಣ್ಬನೆ ಹೇಳಯ್ಯಾ.
Transliteration Lān̄chana horage bandiralu, oḷage liṅgārcaneyentayya?
Mukhadalli kaṭṭida kannaḍi, mūgina mēlaṇa katti!
Samayācāraventuṭayyā? Kūḍalasaṅgamadēvayyā.
Mūgakoyyade māṇbane hēḷayyā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If the Jaṅgama appears without,
How are the rites of Liṅga
Performed within?
A mirror fastened o'er the face
And a sword
Hanging above the nose!
How can this be
Accordant ritual, Sir!
Tell me, will Lord Kūḍala Saṅgama
Forget to slash your nose?
Translated by: L M A Menezes, S M Angadi
Hindi Translation बाहर लांछन के रहने
भीतर लिंगार्चन करना उचित है?
सुख पर बंधे दर्पण, नाक पर टंगी तलवार
समयाचार कैसे होगा?
कहो, तुम्हारी नाक बिना काटे छोडेंगे
कूडलसंगमदेव ॥
Translated by: Banakara K Gowdappa
Telugu Translation ఆడుచు పాడుచు భక్తి నాచరింపదగు
లింగమది ఆశింపదు నిన్నేమీ అడుగదు;
ఒకపరి నివేదింపుమురా;
పీడిరచి వేడు జంగముడు రాగా
వడ్డింపకురా కూడల సంగమదేవా !
Translated by: Dr. Badala Ramaiah
Tamil Translation மெய்யன்பன் புறத்திருக்க, அகத்திலே
தூவித்தொழுவதோ ஐயனே
முகத்திலே கட்டிய கண்ணாடி, மூக்கின் மேலே கத்தி
சிவநெறி பிறழா தொழுகுவ தென் றையனே?
கூடல சங்கம தேவனே.
Translated by: Smt. Kalyani Venkataraman, Chennai
Marathi Translation
जंगम बाहेर येता आत इष्टलिंगार्चना कसली करता?
मुखासमोर आरसा, नाकावर लटकती तलवार आहे.
अशा स्थितीत भक्ती कशी करू शकतात.
कूडलसंगमदेव नाक कापल्याशिवाय सोडतील का?
Translated by Shalini Sreeshaila Doddamani
ಶಬ್ದಾರ್ಥಗಳು ಅರ್ಚನೆ = ಪೂಜೆ; ಮಾಣ್ಬು = ; ಲಾಂಛನ = ಚಿಹ್ನೆ;
ಕನ್ನಡ ವ್ಯಾಖ್ಯಾನ ಭಕ್ತನು ಒಳಗೆ ಕುಳಿತು ಲಿಂಗಪೂಜೆ ಮಾಡುವಾಗ-ಸೇವೆಯನ್ನು ಕೈಗೊಳ್ಳಲು ಜಂಗಮ ಬಂದು ಮನೆಯ ಬಾಗಿಲಲ್ಲಿ ನಿಂತರೆ-ಆಮೇಲೆಯೂ ಪೂಜೆಯನ್ನು ಆ ಭಕ್ತನು ಮುಂದುವರಿಸುತ್ತ ಕುಳಿತಿರುವುದು ಸಲ್ಲದು. ಅದು ಜಂಗಮಾನಾಧರಣೆಯಾವುದು. ಜಂಗಮಾನಾದರಣೆ ಸಮಯಾಚಾರವಲ್ಲ-ಅಂದರೆ ಅದು ಶಿವಧರ್ಮಕ್ಕೆ ತಕ್ಕ ಆಚಾರವಲ್ಲವೆಂದರ್ಥ. ಅಂದಮೇಲೂ ಯಾರಾದರೂ ಜಂಗಮವನ್ನು ಉಪೇಕ್ಷಿಸಿ ಲಿಂಗ ಪೂಜೆಯನ್ನು ಮಾಡುತ್ತಿದ್ದರೆ-ಅದು-ಮುಖದ ಮುಂದೆಯೇ ಕನ್ನಡಿ ಇದ್ದೂ ಮೂಗನ್ನು ಕೊಯ್ದುಕೊಂಡಂತೆ ಕಣ್ಗೇಡಿತನ ತಿಳಿಗೇಡಿತನವಾಗುವುದು. (ಲಾಂಛನವೆಂದರೆ ಜಂಗಮಕ್ಕೆ ಸಂಬಂಧಿಸಿದ ವೇಷಭೂಷಣ).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು