•  
  •  
  •  
  •  
Index   ವಚನ - 193    Search  
 
ಭಕ್ತನ ಜ್ಞಾನಿಸ್ಥಲ - ಲಿಂಗ-ಜಂಗಮ
ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ: ಅದು ಬೇಡದು, ಬೆಸಗೊಳ್ಳದು, ತಂದೊಮ್ಮೆ ನೀಡಬಹುದು. ಕಾಡುವ ಬೇಡುವ ಜಂಗಮ ಬಂದರೆ, ನೀಡಲುಬಾರದು, ಕೂಡಲಸಂಗಮದೇವಾ.
Transliteration Āḍutta hāḍutta bhaktiya māḍabahudu liṅgakke: Adu bēḍadu, besagoḷḷadu, tandom'me nīḍabahudu. Kāḍuva bēḍuva jaṅgama bandare, nīḍalubāradu, kūḍalasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Devotion can be done To Liṅga, with song and dance. It never makes demand: You bring and serve it once.. But, O Lord Kūḍala Saṅgama, Should Jaṅgama arrive, Begging and pestering, There is no serving him! Translated by: L M A Menezes, S M Angadi
Hindi Translation नाचते गाते लिंग भक्ति कर सकते हो वह न कुछ मांगता है, न पूछता है एक बार लाकर अर्पण कर सकते हो, पीडक – याचक जंगम आवे तो कुछ मत दो, कूडलसंगमदेव॥ Translated by: Banakara K Gowdappa
Telugu Translation గేయము పాడిననేమి? శాస్త్ర పురాణములు విన్ననేమి? వేదవేదాంతములు చదివిన ఫలమేమి? మనసార లింగ జంగముల పూజింప తెలియనివారు; అన్నిట నను భవులైన నేమి? భక్తి లేనివారి నొల్లడు కూడల సంగమదేవుడు. Translated by: Dr. Badala Ramaiah
Tamil Translation ஆடிப் பாடிப் பக்தி யாற்றலாம் இலிங்கத்திற்கு அது வேண்டாது, இன்னலுறாது; ஒருமுறை தந்து அளிக்கலாம் வற்புறுத்தி இரக்கும் மெய்யன்பன் வந்துழி ஈயலாகாது கூடல சங்கம தேவனே. Translated by: Smt. Kalyani Venkataraman, Chennai
Marathi Translation बोलत गात लिंगभक्ती करता येईल. तो काही मागत नाही, बोलत नाही, एकदा आणून देतात लिंगाला. पिडणाऱ्या मागणाऱ्या जंगमाला देणे साधे सोपे काम नाही कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ಬೆಸಗೊಳ್ಳು = ;
ಕನ್ನಡ ವ್ಯಾಖ್ಯಾನ ಲಿಂಗಕ್ಕೆ ಪೂಜೆ ಮಾಡುತ್ತ ಮಾಡುತ್ತ ಭಕ್ತಿ ತಲೆಗೇರಿ ಹಾಡಬಹುದು ಕುಣಿದಾಡಬಹುದು. ಮತ್ತು ಆ ಲಿಂಗ ಬಾಯಿಬಿಟ್ಟು ಕೇಳುವುದಿಲ್ಲವಾಗಿ ಮತ್ತು ಕೈಹಾಕಿ ತಿನ್ನುವುದಿಲ್ಲವಾಗಿ (ನೈವೇದ್ಯ) ನೀಡಲೂಬಹುದು. ಆದರೆ ಆಹಾರವಿಲ್ಲದೆ ಬಳಲಿರುವ ಬಡವಾಗಿರುವ ಜಂಗಮ ಮನೆಯ ಬಾಗಿಲಿಗೇ ಬಂದು ಹಸಿವಾಗಿ ಅನ್ನ ನೀಡಿರೆಂದು ಬೇಡಿದರೂ, ಇಲ್ಲದಿದ್ದರೆ ಸಾಯುವೆನೆಂದು ಕಾಡಿದರೂ, ನೀಡುವುದಿಲ್ಲ. ಹೀಗೆ ಕಲ್ಲನ್ನು ಪೂಜಿಸುವ ಜನ ಕಲ್ಲೇ ಆಗಬಾರದು. ವಿ : ಬಸವಣ್ಣನವರು ಈ ವಚನದಲ್ಲಿ ಕುರಿತಿರುವ ಲಿಂಗವು ದೇವಾಲಯದ ಲಿಂಗವೂ ಆಗಬಹುದು-“ತಂದೊಮ್ಮೆ ನೀಡಬಹುದು” ಎಂಬ ಮಾತನ್ನು ಗಮನಿಸಿರಿ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು