ಭಕ್ತನ ಜ್ಞಾನಿಸ್ಥಲ - ಲಿಂಗ-ಜಂಗಮ
ನಾಗಂಗೆ ಹೊಸತನಿಕ್ಕಿಹೆವೆಂಬರು:
ನಾಗ ಬಂದರೆ ಕೋಲ ತಳೆದುಕೊಂಬರು!
ಆಗದಯ್ಯಾ, ʼಜಂಗಮಲಿಂಗʼವೆಂಬ ಶಬ್ದವಾಗದಯ್ಯಾ,
ಕೂಡಲಸಂಗಮದೇವರಲ್ಲಿ ಸಿಂಧುಬಲ್ಲಾಳಂಗಲ್ಲದಾಗದಯ್ಯಾ.
Transliteration Nāgaṅge hosatanikkihevembaru:
Nāga bandare kōla taḷedukombaru!
Āgadayyā, ʼjaṅgamaliṅgaʼvemba śabdavāgadayyā,
kūḍalasaṅgamadēvaralli sindhuballāḷaṅgallade āgadayyā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 They talk of making a taintless gift
To a snake; but when the snake does come.
They only waste a stick on it!
It will never be! The words
Jaṅgama and Liṅga will never be
In Lord Kūḍala Saṅgama, except
For Sindu-Ballāḷa !
Translated by: L M A Menezes, S M Angadi
Hindi Translation कहते हैं – नाग की मनौती रखते
नाग के आने पर लाठी लेते हैं
भाता नहीं जंगम-लिंग शब्द भाता नहीं ।
कूडलसंगमदेव में सिंधु बल्लाळ के सिवा किसी को भाता नहीं ॥
Translated by: Banakara K Gowdappa
Telugu Translation నాగులకు నైవేద్య మిడుమందురు;
నాగమే తేర కోలు కొనుడందురు;
తగదయ్యా జంగమ లింగమను శబ్దము తగదయ్యా.
కూడల సంగమదేవుని యెడ
సింధుభల్లాళునికి కాని కాదయ్యా.
Translated by: Dr. Badala Ramaiah
Tamil Translation கற்பாம்பிற்கு அமுதினைப் படைப்பர்
பாம்பு வந்துழி கோலை எடுப்பர் ஐயனே!
ஆகாதய்யனே, மெய்யன்பர், இலிங்கமெனு முரை ஆகாதையனே
நம் கூடல சங்கம தேவனிடத்தில்
சிந்துவல்லாளனுக்கல்லால் ஆகாதையனே.
Translated by: Smt. Kalyani Venkataraman, Chennai
Marathi Translation
नागाला नवी वस्तू अर्पण करतात.
प्रत्यक्ष नाग पाहून हाती काठी घेतात.
लिंग-जंगम एक आहे असे मानता येत नाही.
सिंधूबल्लाळाविना कोणाला साध्य नाही
कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ನಾಗ = ಸರ್ಪ;
ಕನ್ನಡ ವ್ಯಾಖ್ಯಾನ ಕಲ್ಲುದೇವರಿಗೆ ಪಟ್ಟೆಪೀತಾಂಬರಗಳನ್ನು ಉಡಿಸಿ, ಕವಚ ಕಿರೀಟಗಳನ್ನು ತೊಡಿಸಿ, ರಾಜಾನ್ನ ಪರಮಾನ್ನಗಳನ್ನು ಬಡಿಸಿ-ಜೀವಂತ ಜಂಗಮ ಬಂದರೆ ಕಾಣದಂತೆ ಅಡ್ಡಮೋರೆಯಿಕ್ಕುವುದು ಎಷ್ಟು ದಡ್ಡತನ !? ಜಂಗಮ(ಲಿಂಗ)ವೆಂದರೆ ತಿರುಗಾಡುವ ದೇವರಲ್ಲವೆ ? ಭಕ್ತರಿಗೆ ಬಂಧನ ಬಿಡಿಸಿ ಮುಕ್ತಿಸುಖವನ್ನು ದಯಪಾಲಿಸಲು ದೇವರಿಗೇನು ಪ್ರತ್ಯೇಕ ದೇಹವಿದೆಯೆ ? ಜಂಗಮದೇಹವೇ ಅವನ ದೇಹ. ಆ ಮೂಲಕವೇ ಅವನು ನಮ್ಮನ್ನು ಅನುಗ್ರಹಿಸಿಯಾನು.
ಆದ್ದರಿಂದ ಜಂಗಮ(ವೇ) ಲಿಂಗವೆಂಬ ನಿಶ್ಚಲ ವಿಶ್ವಾಸದಿಂದ ಆ ಜಂಗಮವನ್ನು ಸಮಾರಾಧಿಸಿರಿ. ಸಿಂಧುಬಲ್ಲಾಳನು ಜಂಗಮವೇ ಲಿಂಗವೆಂದು ನಂಬಿ-ಆ ಜಂಗಮ ಕೊಡಬಾರದ್ದನ್ನು ಕೇಳಿದರೂ ಕೊಟ್ಟನೆಂದ ಮೇಲೆ-ಹಸಿದು ಬಂದ ಜಂಗಮಕ್ಕೆ ಒಂದು ತುತ್ತನ್ನವನ್ನೂ ಒಂದು ಹಣ ಧನವನ್ನೂ ಕೊಡುವುದು ಸಾಧ್ಯವಿಲ್ಲವಲ್ಲಾ ಇವತ್ತಿನ ಜನಕ್ಕೆ ?!
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು