ಭಕ್ತನ ಜ್ಞಾನಿಸ್ಥಲ - ಲಿಂಗ-ಜಂಗಮ
ಎರೆದರೆ ನೆನೆಯದು, ಮರೆದರೆ ಬಾಡದು:
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ!
ಕೂಡಲಸಂಗಮದೇವಯ್ಯಾ,
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು!
Transliteration Eredare neneyadu, maredare bāḍadu:
Huruḷilla huruḷilla liṅgārcane!
Kūḍalasaṅgamadēvayyā,
jaṅgamakkeredare sthāvara neneyittu!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 If you pour water upon it,
It won't grow soft;
Nor wither if you forget
To water it.
Worthless the Liṅga rite!
O Lord Kūḍala Saṅgama,
If you pour water on Jaṅgama ,
The Immovable one gets soft!
Translated by: L M A Menezes, S M Angadi
Hindi Translation अभिषेक से आर्द्र नहीं होता,
विस्मरण से शुष्क नहीं होता,
निस्सार निस्सार है लिंगार्चन,
जंगम के अभिषेक से
स्थाणु आर्द्र होता है कूडलसंगमदेव ॥
Translated by: Banakara K Gowdappa
Telugu Translation ధారల తడియదు తప్పిన వాడదు
చవిలేదు చవిలేదు లింగార్చన సంగయ్య.
జంగమునకు బోయ స్థావరము తనియునయ్యా.
Translated by: Dr. Badala Ramaiah
Tamil Translation இறைப்பின் நனையாது, இறைத்தலிவையே லுலராது
பயனிலை, பயனிலை, இலிங்கம் தனைத்தூவித் தொழல்
கூடல சங்கம தேவனே, மெய்யன்பருக்கிறைக்கப்
பரம்பொருள் நனைந்ததையனே.
Translated by: Smt. Kalyani Venkataraman, Chennai
Marathi Translation
अभिषेका द्वारे, भिजे नच लिंग
कोमेजे न अंग, विसरता
जंगम तृप्तता, तुष्टे ते स्थावर
अभिषेक धार, काय कीजे ?
कूडलसंगमदेवा ! जंगम तो थोर
लिंगार्चनी सार, नाही नाही
अर्थ - देवालयातील स्थावर लिंगावर पाण्याचा-दूधाचा अभिषेक करणे म्हणजे शिवपूजा नव्हे. ती केली काय व न केली काय दोन्ही समच आहे त्याच प्रमाणे लिंगार्चन व अभिषेकाने तो ओला होत नाही म्हणजे प्रसन्न होणार नाही व न केल्याने तो वाळतही नाही. म्हणजे तुमच्यावर रागवणारही नाही. म्हणून अशा व्यर्थ अभिषेक स्पर्धेत न पडता धर्मप्रचार करणाऱ्या, शिवपथ मार्गदर्शन करणाऱ्या जंगमगुरू यांची सेवा मनोभावे करा. हीच प्रभूप्राप्तीची रीत आहे. जंगमांची तृप्ती हेच लिंगार्चन जाणावे.
Translated by Rajendra Jirobe, Published by V B Patil, Hirabaug, Chembur, Mumbai, 1983
अभिषेक केला तरी भिजणार नाही.
केले नाही म्हणून कोमेजणार नाही.
अर्थहीन अर्थहीन लिंगार्चना.
कूडलसंगमदेवा, जंगमाला तृप्त केले
तर स्थावर संतुष्ट होईल.
Translated by Shalini Sreeshaila Doddamani
Urdu Translation پانی سےجونہلائیں تووہ تر نہیں ہوتا
اوربھول بھی جائیں تووہ مُرجھا نہیں جاتا
اِس طرح کریںلِنگ کی پوجا تو ہے بےسُود
اےمیرے خدا میرےخدا کوڈلا سنگا
پانی جوپلائیں کسی پیاسےکوتوخوش ہو
جنگم کوجونہلائیں توبھگوا ن بھی خوش ہوں
Translated by: Hameed Almas
ಶಬ್ದಾರ್ಥಗಳು ಅರ್ಚನೆ = ಪೂಜೆ; ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ಸ್ಥಾವರ = ಸ್ಥಗಿತ, ಚೈತನ್ಯವಿರದ, ಜೀವವಿರದ; ಹುರುಳು = ಸತ್ಯ ತಿರುಳು;
ಕನ್ನಡ ವ್ಯಾಖ್ಯಾನ ಜಂಗಮದಾಸೋಹವಿಲ್ಲದ ಕೇವಲ ಲಿಂಗಾರ್ಚನೆಗೆ ಅರ್ಥವೇ ಇಲ್ಲ. ಯಾವ ಪ್ರಯೋಜನಕ್ಕಾಗಿ ಅದನ್ನು ನೀನು ಮಾಡುತ್ತಿದ್ದೀಯ ? ನೀರೆರೆದು ಅದನ್ನು ನೆನಸಿ ಮೃದುಮಾಡಬೇಕೆಂದೇನು ? ಅದು ನೆನೆಯುವುದುಂಟೆ ? ಅದಕ್ಕೆ ನೀನು ನೀರೆರೆಯುವುದನ್ನು ಮರೆತರೂ ಅದು ಬಾಡುವುದೂ ಇಲ್ಲ ! (ಅದು ಕಲ್ಲಲ್ಲವೆ ?), ಜಂಗಮಕ್ಕೆ ಎರೆದು ಸ್ನಾನಮಾಡಿಸು, ನಿನ್ನಲ್ಲಿರುವ ಅಂಬಲಿ ಎರೆದು ಹಸಿವಾರಿಸು, ಧನವನ್ನು ಧಾರೆಯೆರೆದು ತೃಪ್ತಿಪಡಿಸು-ಅವನು ನೆನೆಯುತ್ತಾನೆ. ಪರಮಸುಖಿಯಾಗೆಂದು ನಿನ್ನನ್ನು ಹರಸುತ್ತಾನೆ, ಬಸವಣ್ಣನವರು ಜಂಗಮಕ್ಕೆ ಕೊಟ್ಟ ಪ್ರಾಶಸ್ತ್ಯದಿಂದ-ಅವರು ಬೋಧಿಸಿದ ಶಿವಧರ್ಮ ಅತ್ಯಂತ ಮಾನವೀಯವೆಂಬುದನ್ನು ಇಲ್ಲಿ ಮನಗಾಣಬಹುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು