•  
  •  
  •  
  •  
Index   ವಚನ - 197    Search  
 
ಭಕ್ತನ ಜ್ಞಾನಿಸ್ಥಲ - ಲಿಂಗ-ಜಂಗಮ
ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯಾ: ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯಾ; ಜಂಗಮವಾಪ್ಯಾಯನವಾದರೆ ಲಿಂಗ ಸಂತುಷ್ಟಿಯಹುದಯ್ಯಾ: 'ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯತು ಜಂಗಮಃ ಮಮತೃಪ್ತಿರ್ಮಹಾದೇವಿ ಉಭಯೋರ್ಲಿಂಗ ಜಂಗಮಾತ್'! ಇದು ಕಾರಣ ಕೂಡಲಸಂಗಮದೇವರಲ್ಲಿ ಜಂಗಮವಾಪ್ಯಾಯನವಾದರೆ ಲಿಂಗಸಂತುಷ್ಟಿ.
Transliteration Agniyādhāradalli kabbuna nīrumbudayyā: Bhūmiyādhāradalli vr̥kṣa nīrumbudayyā; jaṅgamavāpyāyanavādare liṅga santuṣṭiyahudayyā: 'Vr̥kṣasya vadanaṁ bhūmiḥ sthāvarasyatu jaṅgamaḥ mamatr̥ptirmahādēvi ubhayōrliṅgajaṅgamāt'! Idu kāraṇa kūḍalasaṅgamadēvaralli jaṅgamavāpyāyanavādare liṅgasantuṣṭi.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Iron sucks water on the strength Of fire. The tree sucks water on the strength Of earth. If you keep Jaṅgama content, Liṅga is satisfied. "Earth is the mouth of the tree; The Movable, of the Immovable. If I am pleased,Umā divine, Both Liṅga and Jaṅgama will be pleased." Therefore, in Lord Kūḍala Saṅgama, If you keep Jaṅgama content, Liṅga is satisfied. Translated by: L M A Menezes, S M Angadi
Hindi Translation अनलाधार से लोहा पानी पीता है धराधार से वृक्ष पानी पीता है, जंगम तुष्टि से लिंग तुष्टि होती है वृक्षस्य वदनं भूमिः स्थावरस्य च जंगमम् अहं तुष्टोस्म्युमादेवी उभयोलिंग जंगमात् अतः जंगम संतुष्ट हो तो लिंग-संतुष्ट होता है ॥ Translated by: Banakara K Gowdappa
Telugu Translation అగ్ని ఆధారమున లోహము నీరు త్రాగునయ్యా భూమి ఆధారమున వృక్షము నీరు త్రాగునయ్యా; జంగమ తృప్తియే లింగతృప్తి కదయ్యా; ‘‘వృక్షస్యవదనం భూమిః స్థావరస్యతు జంగమం అహంతుష్టి రుమాదేవి ఉభయోర్లింగ జంగమం’’ కాన సంగమదేవునిలో జంగమ మాప్యాయనంబైన లింగము తృప్తిచెందు. Translated by: Dr. Badala Ramaiah
Tamil Translation தீயின் பற்றுக் கோடினால் இரும்பு நீரருந்துமையனே, புவியின் பற்றுக் கோடினால் மரம் நீரருந்துமையனே, மெய்யன்பன் மகிழ்வுற, இலிங்கம் மகிழ்வுறுமையனே. “வ்ருக்ஷஸ்ய வதனம் பூமி, ஸ்தாவரஸ்ய ச ஜங்கம! அஹம் துஷ்ட்டோஸ்மை மாதேவி உபயோர் லிங்க ஜங்கமாத்”|| என்பதால் கூடல சங்க தேவரிடத்து மெய்யன்பன் மகிழ்வுறின் இலிங்கம் மகிழும். Translated by: Smt. Kalyani Venkataraman, Chennai
Marathi Translation अग्नीच्या सहाय्याने लोखंड पाणी ग्रहण करते. जमिनीच्या सहाय्याने वृक्ष पाणी ग्रहण करतो. जंगमाच्या तृप्तीने लिंग संतुष्ट होईल देवा. वृक्षस्य वदनं भूमिः स्थावरस्य च जंगमं। अहं तुष्टोऽस्म्युमादेवि उमयोलिंगजंगमात्। म्हणून जंगमाच्या तृप्तीने लिंग संतुष्ट होईल कूडलसंगमदेवा, Translated by Shalini Sreeshaila Doddamani
ಶಬ್ದಾರ್ಥಗಳು ಅಪ್ಯಾಯನ = ಸೇವಿಸಬಹುದಶದ; ಅಹಂ = ನಾನು; ಕಬ್ಬುನ = ಕಭ್ಭಿನ; ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ವದನ = ಮುಖ; ಸಂತುಷ್ಟಿ = ತೃಪ್ತಿ; ಸ್ಥಾವರ = ಸ್ಥಗಿತ, ಚೈತನ್ಯವಿರದ, ಜೀವವಿರದ;
ಕನ್ನಡ ವ್ಯಾಖ್ಯಾನ ಕಬ್ಬಿಣ ತಾನು ಕಾದ ಬೆಂಕಿಯ ಮೂಲಕ ನೀರುಣ್ಣುತ್ತದೆ, ವೃಕ್ಷ ತಾನು ನಿಂತ ನೆಲದ ಮೂಲಕ ನೀರುಣ್ಣುತ್ತದೆ-ಶಿವನು ತನ್ನ ಚಲನರೂಪವಾದ ಜಂಗಮದ ಮುಖಾಂತರ ಸಂತೋಷವನ್ನು ಪಡೆಯುತ್ತಾನೆ. ಆಗಮಗಳಲ್ಲಿ ಶಿವನು ಈ ಮಾತನ್ನೇ ಹೇಳಿರುವನು : ಜಂಗಮಾಪ್ಯಾಯನವಾದರೆ ಲಿಂಗಸಂತುಷ್ಟಿ. ಬೆಂಕಿಯು ಕಬ್ಬಿಣಕ್ಕೆ ಒಂದು ಆಕಾರವನ್ನು ಕೊಡುವಂತೆ ಮಾನವನು ದೈವಕ್ಕೆ ಒಂದು ಯುಕ್ತ ಆಕಾರವನ್ನು ಕೊಡುವನು ಮತ್ತು ಭೂಮಿಯು ವೃಕ್ಷಕ್ಕೆ ಆಧಾರವಾಗುವಂತೆ ಜಾಗೃತಮಾನವನು ಶಿವಂಕರ ದೈವಭಾವಕ್ಕೆ ಆಧಾರಪ್ರಾಯನೂ ಆಗುವನು ಎಂಬ ಈ ವಚನದ ರಹಸ್ಯಾರ್ಥವನ್ನು ಮನಗಾಣಬೇಕು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು