•  
  •  
  •  
  •  
Index   ವಚನ - 198    Search  
 
ಭಕ್ತನ ಜ್ಞಾನಿಸ್ಥಲ - ಜಂಗಮ
ಭಾಂಡವ ತುಂಬಿದ ಬಳಿಕ ಸುಂಕವ ತೆತ್ತಲ್ಲದೆ ವಿರಹಿತ ಹೋಗಬಾರದು. ಕಳ್ಳ ನಾಣ್ಯ ಸಲುಗೆಗೆ ಸಲ್ಲದು: ಕಳ್ಳ ನಾಣ್ಯವ ಸಲ್ಲಲೀಯರಯ್ಯಾ! ಭಕ್ತಿಯೆಂಬ ಭಾಂಡಕ್ಕೆ ಜಂಗಮವೇ ಸುಂಕಿಗ, ಕೂಡಲಸಂಗಮದೇವಾ.
Transliteration Bhāṇḍava tumbida baḷika suṅkava tettallade virahita hōgabāradu. Kaḷḷanāṇya salugege salladu: Kaḷḷanāṇyava sallalīyarayyā! Bhaktiyemba bhāṇḍakke jaṅgamavē suṅkiga, kūḍalasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Unless you pay the toll After collecting your wares, You can't proceed! Counterfeit coin Will never circulate: They don,t permit Counterfeit coin! O Lord Kūḍala Saṅgama, Jaṅgama collects the toll For the wares of piety! Translated by: L M A Menezes, S M Angadi
Hindi Translation माल भरने के बाद चुंगी दिये बिना नहीं जाना चाहिए । खोटा सिक्का नहीं चलता, खोटे सिक्के को चलने नहीं देते भक्ति रूपि माल की चुंगी जंगम ही लेता है, कूडलसंगमदेव॥ Translated by: Banakara K Gowdappa
Telugu Translation సరుకు నింపిన వెనుక సుంకమీక తప్పించుకొని పోలేవు దొంగ నాణ్యము చెల్లదయ్యా దొంగ నాణ్యము చెల్ల నీరయ్యా; భక్తి యను సరుకునకు జంగముడే సుంకరి; కూడల సంగమదేవా Translated by: Dr. Badala Ramaiah
Tamil Translation பொருட்களை ஏற்றின் ஆயம் ஈயாது செல்லவியலுமோ? கள்ள நாணயம் புழக்கத்திற்கு ஒவ்வுமோ? கள்ள நாணயத்தை பயன்படுத்தாதீ ரையனே. “பக்தி” எனும் பண்டத்திற்கு, மெய்யன்பரே ஆயம் கொள்வோர் கூடல சங்கம தேவனே. Translated by: Smt. Kalyani Venkataraman, Chennai
Marathi Translation माल भरल्यावर कर दिल्याशिवाय जाता येत नाही. खोटे नाणे चलनात चालत नाही. खोटे नाणे चलनात चालवून घेत नाही. भक्तीरुपी मालावर जंगम कर वसूल करतो कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಭಾಂಡ = ಸರಕು ಪಾತ್ರೆ; ವಿರಹಿತ = ; ಸುಂಕ = ತೆರಿಗೆ; ಸುಂಕಿಗ = ತೆರಿಗೆಗಾರ;
ಕನ್ನಡ ವ್ಯಾಖ್ಯಾನ ಸರಕನ್ನು ತುಂಬಿಕೊಂಡು ವ್ಯಾಪಾರಕ್ಕೆ ಹೊರಟ ಮೇಲೆ ಸುಂಕವನ್ನು ಕೊಟ್ಟಿಲ್ಲದ ಊರು ಪಟ್ಟಣದೊಳಕ್ಕೆ ಆ ಸರಕನ್ನು ಹೋಗಬಿಡರು-ರಾಜನ ಪ್ರತಿನಿಧಿಗಳಾದ ಸುಂಕದ ಅಧಿಕಾರಿಗಳು. ಮತ್ತು ಆ ಸುಂಕದವರಿಗೆ ಕಳ್ಳನಾಣ್ಯವನ್ನು ಕೊಟ್ಟು ತಪ್ಪಿಸಿಕೊಳ್ಳೋಣವೆಂದು ವಂಚಿಸಲು ಪ್ರಯತ್ನಿಸಿದರೆ-ಅದನ್ನವರು ಪತ್ತೆಹಚ್ಚಿ ತಿರಸ್ಕರಿಸುವರು. ವ್ಯಾಪಾರವೆಂದಮೇಲೆ ಕೊಡಬೇಕಾದ ನ್ಯಾಯವಾದ ಸುಂಕವನ್ನು ಅಲ್ಲಲ್ಲಿ ಕೊಡಬೇಕು-ಉದ್ದಕ್ಕೂ ಲಾಭ ಮಾಡಿಕೊಂಡು ಹೋಗಬೇಕು. ಹಾಗೆಯೇ ಭಕ್ತಿ ಮಾಡುತ್ತೇನೆಂದು ಭಸ್ಮವನ್ನು ರುದ್ರಾಕ್ಷಿಯನ್ನು ಲಿಂಗವನ್ನು ಧರಿಸಿದ ಮೇಲೆ ಸಲ್ಲಿಸುವ ಸುಂಕವೆಂದರೆ ಜಂಗಮಸೇವೆಯೇ ಆಗಿದೆ. ಆ ಸೇವೆಯೂ ಜಂಗಮಮೂರ್ತಿಗಳು ಸ್ವೀಕರಿಸುವ ರೀತಿಯಲ್ಲಿ ತ್ರಿಕರಣಪೂರ್ವಕವಾಗಿದ್ದು ಸಾಚಾ ಆಗಿರಬೇಕು. ಹೀಗಲ್ಲದೆ ಭಸ್ಮ ರುದ್ರಾಕ್ಷಿ ಲಿಂಗವನ್ನು ಧರಿಸುವ, ಶಿವಪಂಚಾಕ್ಷರಿಯನ್ನು ಉಚ್ಚರಿಸುವ, ಶಿವಲಿಂಗವನ್ನು ಅರ್ಚಿಸುವ, ಪ್ರಸಾದವನ್ನು ಸ್ವೀಕರಿಸುವ ಯಾವ ಅಧಿಕಾರವೂ ಸಿಗುವುದಿಲ್ಲ. ಕೊನೆಗೆ ಐಹಿಕಜೀವನ ವ್ಯಾಪಾರವೆಲ್ಲಾ ಪಾರಮಾರ್ಥಿಕ ಲಾಭವಿಲ್ಲದೆ ವ್ಯರ್ಥವಾಗುವುದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು