ಮಾಡಿ ನೀಡಿ ಲಿಂಗವ ಪೂಜಿಸಿಹೆನೆಂಬವರು ನೀವೆಲ್ಲಾ ಕೇಳಿರಣ್ಣಾ:
ಹಾಗದ ಕೆರಹ ಹೊರಗೆ ಕಳೆದು,
ದೇಗುಲಕ್ಕೆ ಹೋಗಿ ದೇವರಿಗೆ ನಮಸ್ಕಾರವ ಮಾಡುವನಂತೆ-
ತನ್ನ ಕೆರಹಿನ ಧ್ಯಾನವಲ್ಲದೆ ದೇವರ ಧ್ಯಾನವಿಲ್ಲಾ!
ಧನವನಿರಿಸದಿರಾ, ಇರಿಸಿದರೆ ಭವ ಬಪ್ಪುದು ತಪ್ಪದು!
ಕೂಡಸಂಗನ ಶರಣರಿಗೆ ಸವೆಸಲೇಬೇಕು.
Transliteration Māḍi nīḍi liṅgava pūjisihenembavaru nīvellā kēḷiraṇṇā:
Hāgada keraha horage kaḷedu,
dēgulakke hōgi dēvarige namaskārava māḍuvanante-
tanna kerahina dhyānavallade dēvara dhyānavillā!
Dhanavanirisadirā, irisidare bhava bappudu tappudu!
Kūḍasaṅgana śaraṇarige savesalēbēku.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Listen, O brother! all who claim
To have worshipped Liṅga
With ritual and with offering.
Even as the man
Who enters a temple to greet his god,
Doffing his twopenny shoes outside-
With his mind fixed upon his shoes,
He cannot concentrate upon his god !
Do not save up your wealth, for if you do,
Rebirth shall come unfailingly!
You ought to spend it on
Kūḍala Saṅga's Śaraṇās
Translated by: L M A Menezes, S M Angadi
Hindi Translation विधिवत् हमने लिंगपूजा की-
कहनेवाले भाइयों, तुम सब सुनो
चार पैसे के जूते बाहर छोड
मंदिर में देव को नमस्कार करनेवाले की भाँति-
उसे अपने जूते का ध्यान न कि देव का
धनसंचय मत करो-,
करने पर भव से मुक्ति नहीं,
उसे कूडलसंगमदेव के शरणों पर व्यय करना ही होगा ॥
Translated by: Banakara K Gowdappa
Telugu Translation చేసి పెట్టి పూజించితి మంటిరే వినుడయ్యా?
మీ రెల్ల; కడప చెంత చెప్పులు విడిచి
అలయమున కేగి సాష్టాంగము సల్పినట్లేనయ్యా!
చెప్పుల పై గాని శివునిపై ధ్యానము లేదయ్యా:
కూర్పకురా ద్రవ్యము కూర్చితివా భవంబు
తప్పదురా కూడల సంగమదేవా!
Translated by: Dr. Badala Ramaiah
Tamil Translation செய்து, அளித்து இலிங்கத்தைத்
தொழுவேமெனும் யாவரும் கேளிர்
பணமீந்த செருப்பைப் புறம்பே களைந்து
கோயிலிற்குச் சென்று வணங்குதற் போல
தன் செருப்பின் மீதே நாட்டம், கடவுள்மீது நாட்டமில்லை.
பொருளைச் சேமியாதீர், சேமிப்பின் பிறப்ப துறுதியையனே.
Translated by: Smt. Kalyani Venkataraman, Chennai
Marathi Translation
सेवाभावनेने लिंगपूजा करणाऱ्यांनो तुम्ही ऐका.
दीडदमडीची पादत्राणे बाहेर सोडून
देवळात जावून नमस्कार करतात.
आपले ध्यान पादत्राणावर, देवावर नाही.
धनसंचय करु नको, धनसंचयाने भवबंधन चूकत नाही.
कूडलसंगमाच्या शरण सेवेत राहिले पाहिजे.
Translated by Shalini Sreeshaila Doddamani
Urdu Translation آپ سب لوگ یہ توکہتے ہیں
ہم نے پوجا ہے لِنگ کو لیکن
جب بھی داخل ہوئے ہومندرمیں
ہاتھ جب بھی اُٹھے دُعا کے لیے
دھیان اُس کی طرف نہ تھا ہرگز
تھی فقط فکراپنی چپّل کی
اس لیےسب سےمیں یہ کہتا ہوں
کوئی دولت کےپھیرمیں نہ رہے
ورنہ اہل ِجہاں ستائیں گے
کوڈلا سنگما کےشر نوں پر
ساری دولت نثارکردینا
Translated by: Hameed Almas
ಶಬ್ದಾರ್ಥಗಳು ಕೆರ = ; ಧ್ಯಾನ = ಮನನ, ಚಿಂತನ; ಭವ = ಜೀವನ; ಹಾಗ = ಒಂದು ನಾಣ್ಯ;
ಕನ್ನಡ ವ್ಯಾಖ್ಯಾನ ಕೆರವನ್ನು ಹೊರಗೆ ಇಟ್ಟು ದೇವಾಲಯದೊಳಕ್ಕೆ ಹೋಗಿ ದೇವರಿಗೆ ನಮಸ್ಕಾರ ಮಾಡುವವನ ಧ್ಯಾನವೆಲ್ಲಾ ಇಟ್ಟು ಬಂದ ಕೆರದ ಮೇಲೆಯೇ ಇರುವುದು. ಆ ಕೆರವನ್ನು ಯಾರು ಮೆಟ್ಟಿ ಕೊಂಡೊಯ್ವರೋ, ಅದೆಲ್ಲಿ ಕಳೆದು ಹೋಗುವುದೋ ಎಂಬ ಚಿಂತೆ ಆವರಿಸಿರುವುದು. ಅಂದಮೇಲೆ ದೇವರ ಧ್ಯಾನವೆಲ್ಲಿ ಬಂತು ?
ಲಿಂಗಕ್ಕೆ ಪೂಜೆ ಮಾಡಿದೆನೆಂಬ, ಜಂಗಮಕ್ಕೆ ದಾಸೋಹ ನೀಡಿದೆನೆಂಬ ಕೃಪಣಧನಿಕರ ಪಾಡೂ-ಹೊರಗೆ ಕೆರ ಬಿಟ್ಟು ಒಳಗೆ ದೇವರಿಗೆ ಕೈಮುಗಿಯುವನ ಪಾಡೇ ಆಗಿರುವುದು. ಲಿಂಗಕ್ಕೆ ಮಾಡುವಾಗ, ಜಂಗಮಕ್ಕೆ ನೀಡುವಾಗ ತಾನು ಬೈಚಿಟ್ಟ ಧನವೆಲ್ಲಿ ಕೈಬಿಡುವುದೋ ಎಂಬ ಭಯ ಅವನನ್ನು ಒಳಗೊಳಗೇ ಕಾಡುತ್ತಿರುವುದು. ಅವನಿಗೆ ಹಣದ ಮೇಲೆ ನಿಗವೇ ಹೊರತು ಲಿಂಗದ ಮೇಲೆ ಭಕ್ತಿಯಿಲ್ಲ, ಜಂಗಮದ ಮೇಲೆ ಪ್ರೀತಿಯಿಲ್ಲ, ಆದುದರಿಂದಲೇ ಬಸವಣ್ಣನವರು ಭಕ್ತರಿಗೆ-“ಧನವನಿರಿಸದಿರಾ, ಇರಿಸಿದರೆ ಭವ ಬಪ್ಪುದು ತಪ್ಪದು” ಎಂದು ಎಚ್ಚರಿಸುತ್ತಿರುವರು. ಮುಂದುವರಿದು ಧನವನ್ನು “ಶರಣರಿಗೆ ಒಡನೆ ಸಲಿಸಲೆ ಬೇಕು” ಎಂದಿರುವರು. ಅವರ ಈ ಮಾತಿನಲ್ಲಿ-ಧನವನ್ನು ಧರ್ಮದಿಂದ ಸಂಪಾದಿಸಿ ಧರ್ಮಕ್ಕಾಗಿಯೇ ವೆಚ್ಚಿಸಬೇಕೆಂಬ ಆದೇಶವಿದೆ.
ಎಂದಿಗೂ ತೀರದ ತನ್ನ ಒಡಲಿನ ಬಾಧೆಗೆ ಹಣದ ಕೊರತೆಯಾದೀತೆಂದು-ಇವತ್ತು ಮಾಡಬೇಕಾದ ಧರ್ಮಕಾರ್ಯಕ್ಕೆ ಕೊರತೆ ಮಾಡಬಾರದೆಂಬುದೇ ಅವರ ಅಭಿಪ್ರಾಯ. ಈ ದಿನ ಧರ್ಮಕ್ಕೆ ವ್ಯಯ ಮಾಡಿದ ಹಣದ ಕೊರತೆ ನಾಳೆಯ ಕಾಯಕದಿಂದ ನೀಗುತ್ತದೆ-ಆದರೆ ಇಂದು ಮಾಡಿದ ಧರ್ಮವಂಚನೆ ನಮ್ಮ ಪಾಪದ ಪಟ್ಟಿಯಲ್ಲಿ ಸದಾ ನಿಂತುಬಿಡುತ್ತದೆ. ಶರಣರಿಗೆ ನೀಡದ ಹಣ ಎಕ್ಕಡಕ್ಕೆ ಸಮಾನವೆಂಬ ಇಂಗಿತ ಈ ವಚನದಲ್ಲಿದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು