ಭಕ್ತನ ಜ್ಞಾನಿಸ್ಥಲ - ಸಿರಿ-ಸಂಪತ್ತು
ಆಯುಷ್ಯವುಂಟು, ಪ್ರಳಯವಿಲ್ಲೆಂದು ಅರ್ಥವ ಮಡುಗುವಿರಿ:
ಆಯುಷ್ಯವು ತೀರಿ ಪ್ರಳಯವು ಬಂದರೆ ಆ ಅರ್ಥವನುಂಬುವರಿಲ್ಲಾ!
ನೆಲನನಗಿದು ಮಡುಗದಿರಾ! ನೆಲ ನುಂಗಿದೊಡುಗುಳುವುದೆ?
ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ, ಉಣ್ಣದೆ ಹೋಗದಿರಾ!
ನಿನ್ನ ಮಡದಿಗಿರಲೆಂದರೆ, ಮಡದಿಯ ಕೃತಕ ಬೇರೆ;
ನಿನ್ನೊಡಲು ಕೆಡೆಯಲು ಮತ್ತೊಬ್ಬನಲ್ಲಿಗಡಕೆದೆ ಮಾಣ್ಬಳೆ?
ಹೆರರಿಗಿಕ್ಕಿ ಹೆಗ್ಗುರಿಯಾಗಬೇಡಾ;
ಕೂಡಲಸಂಗನ ಶರಣರಿಗೊಡನೆ ಸವೆಸುವುದು.
Transliteration Āyuṣyavuṇṭu, praḷayavillendu arthava maḍuguviri:
Āyuṣyavu tīri praḷayavu bandare ā arthavanumbuvarillā!
Nelananagedu maḍugadirā! Nela nuṅgidoḍuguḷuvude?
Kaṇṇinalli nōḍi, maṇṇinalli nerahi, uṇṇade hōgadirā!
Ninna maḍadigiralendare, maḍadiya kr̥taka bēre;
ninna oḍalu keḍeyalu mattobbanallige aḍakede māṇbaḷe?
Herarigikki hegguriyāgabēḍa;
kūḍalasaṅgana śaraṇarige oḍane savesuvudu.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 As though you'd live for ever and not die,
You hoard your wealth.
But should life end and death should come,
There would be none to enjoy your wealth!
Do not hoard wealth,
Burrowing the earth!
When the earth swallows, does it
Spit out a gain?
Content to look at it with eyes,
Storing it under ground,
Do not you, unconsuming, go!
You think you leave it to your wife;
May be your wife has other plans:
The moment that your body drops,
Surely she gives it to another man!
Do not give it for others' use
And prove a big and silly sheep!
It should be spent, and spent at once,
For Kūḍala Saṅga's Śaraṇās.
Translated by: L M A Menezes, S M Angadi
Hindi Translation आयु है, प्रलय नहीं है समझ अर्थसंचय करते हो-;
आयु का अंत और प्रलय हो तो
धन के भोक्ता नहीं रहेंगे ।
धरती में मत छिपाओ,
धरती निगलने पर उगलेगी?
आँखों देख मिट्टी में छिपाकर
बिना खाये मत जाओ
अपनी पत्नी के लिए बचाना चाहो
तो पत्नी का कपट कुछ और होगा
तुम्हारा अंत होने पर
वह अन्य पुरुष को
उसे देना छोड देगी?
दूसरों को देकर बडा बकरा बन बरबाद मत होओ;
कूडलसंगमेश के शरणों के लिए तत्क्षण व्यय करो॥
Translated by: Banakara K Gowdappa
Telugu Translation ఆయుష్యముండె ప్రళయములేదని
అర్థము దాచితివే; ఆయువుతీరి
ప్రళయమే రాగ ద్రవ్యము తినువారు లేరు.
నేల త్రవ్వి పాతి పెట్టకురా; నేల మ్రింగి వెలిగ్రక్కునే
చూచి చూచి మట్టిలో బడదాచకురా;
తినక చెడకురా; పడతికి దక్కునన నీ
పడతి నిను మోసముచేయు; ఒడలుచెడ నీ
పడతి వేఱొకని మఱుగకమానునే?
పెఱర కై దాచు పెనుగొట్టెగాకురా!
సంగని శరణులకు వెసవెచ్చింపరా!
Translated by: Dr. Badala Ramaiah
Tamil Translation ஆயுளுண்டு அழிவிலையென பொருளைச் சேமிப்பீரையனே
ஆயுள்தீர்ந்து சாக்காடு வரின், அதனைத் துய்ப்பவரில்லை
நிலத்தையகழ்ந்து ஒளித்திடாதீர், நிலம் விழுங்கியதை யுமிழுமோ?
கண்ணாற்கண்டு, மண்ணிலிட்டு உண்ணாதே செல்லாதே
உன் மனைவிக்கென்றிடின் அவள் செயல் வேறு
உன்னுடலழியின் வேறொருவனைக் கூடாதொழிவளோ?
பிறருக்கிட்டுப் பயனின்றிக் கெடாய்,
கூடல சங்கனின் அடியாருக்கு உடனே ஈவீர்.
Translated by: Smt. Kalyani Venkataraman, Chennai
Marathi Translation
मृत्युचे नाही भान, जगण्याचा अभिमान
ठेविले पुरून, संपत्ती धन
पाही धन धान, दोन्ही डोळे भरुन
ठेविले साचवून. कुणा कारण
कळाले ना मरण, येता शेवट क्षण
उपभोगावे कोण, तुझे धन
ठेवीले जे धन, पत्नीसाठी जपून
ऐसे खुळेपण करू नये
नाही ठेवी नाते, तुला उचलताचि
होई ती इतराची , धनासवे
कूडलसंगम देवा ! शरणांच्या सेवेत
वेचावे आनंदात, धन धान
अर्थ - आयुष्य केव्हा संपेल, मृत्यु केव्हा येईल हे कोणाला कळाले नाही. काय ? तुम्ही संचय केलेल्या संपतीचा तुमच्यानंतर कोण उपभोग घेणार आहे? तुमच्या नंतर तुमच्या पत्नीला होईल या उद्देशाने धन संपत्ती संचय करु नका. तुमच्या नंतर ती सर्व नाते तोडून दुसऱ्याचे हात धरून जाईल व तुमचे धन दुसऱ्यांचे हवाले होईल. किंवा धन संपत्ती आपल्याच संकटकाळी कामाला येईल म्हणून त्या धनाला डोळे भरून पाहून जमीनीत पुरून ठेवू नका कारण मरण केव्हा येईल येत नाही म्हणून त्याचा विनीयोग तुमच्या हातानेच शरण सेवेत खर्ची घाला.
Translated by Rajendra Jirobe, Published by V B Patil, Hirabaug, Chembur, Mumbai, 1983
आयुष्य आहे, मृत्यू नाही म्हणून धन
गाडून ठेवतात.
आयुष्य संपून मृत्यू येता, त्या धनाचा
उपयोग कोणाला नाही. जमिनीत गाडू नको,
जमिन परत देणार आहे ?
डोळ्याने पहा, भोगल्याविना जाऊ नको.
पत्नीसाठी सोडून जातोस ?
तिचा विचार वेगळाच आहे.
तू गेल्यावर दुसऱ्याच्या हाती देणार नाही का?
दुसऱ्याच्या हाती देवून ध्येयभ्रष्ट होऊ नको.
कूडलसंगमदेवाच्या शरण सेवेत खर्च कर.
Translated by Shalini Sreeshaila Doddamani
ಶಬ್ದಾರ್ಥಗಳು ಅಡಕ = ಹಿಡಿತ ಮಿತಿ; ಅರ್ಥ = ಹಣ, ವಿತ್ತ; ನೆರಹಿ = ಸೇರು; ಪ್ರಳಯ = ನಾಶ, ಪ್ರಪಂಚದ ಅಳಿವು; ಮಡುಗು = ಇರಿಸು, ಇಡು; ಮಾಣ್ಬು = ;
ಕನ್ನಡ ವ್ಯಾಖ್ಯಾನ ಮಕ್ಕಳು ಮರಿ ಇಲ್ಲವಾದರೂ, ಜನರು ಹಣ ಕೂಡಿಡುವುದೇ ಒಂದು ಚಟವಾಗಿ-ಇನ್ನೂ ನನಗೆ ಆಯುಷ್ಯಿದೆ, ಇನ್ನಷ್ಟು ಹಣವನ್ನು ಕೂಡಿಡುವೆನೆಂದು-ಉಣ್ಣದೆ ತಿನ್ನದೆ ದಾನ ಮಾಡದೆ ಭೂಮಿಯಲ್ಲಿ ಬಚ್ಚಿಡುವರು. ಅಂಥವರಲ್ಲಿ ಒಬ್ಬನನ್ನು ಕುರಿತು ಬಸವಣ್ಣನವರು ಹೇಳುತ್ತಾರೆ : ನೀನು ಸತ್ತರೆ ನಿನ್ನ ಬಚ್ಚಿಟ್ಟ ಐಶ್ವರ್ಯವನ್ನು ಅನುಭವಿಸಲು ನಿನಗೆ ಮಕ್ಕಳಿಲ್ಲ-ಆದ್ದರಿಂದ ಹಣವನ್ನು ಕಣ್ಣಿನಲ್ಲಿ ನೋಡಿ ನೋಡಿ, ಮಣ್ಣಿನಲ್ಲಿ ಮರೆಮಾಡಿ ಉಣ್ಣದೆ ವ್ಯರ್ಥವಾಗಿ ಸಾಯಬೇಡ. ನಿನ್ನ ಹೆಂಡತಿ ತನ್ನ ಕಷ್ಟಕಾಲದಲ್ಲಿ ಅನುಭವಿಸುವಳೆನ್ನುವೆಯಾದರೆ-ಅವಳು ಮಾಡುವುದೇ ಬೇರೆ : ನೀನು ಸಾಯುವುದೇ ತಡ-ನಿನ್ನ ಐಶ್ವರ್ಯವನ್ನೆಲ್ಲ ಇನ್ನೊಬ್ಬನಿಗೆ ಕೊಟ್ಟು ಕೂಡಾವಳಿ ಮಾಡಿಕೊಳ್ಳುವಳು. ಯಾರ ಸುಖಕ್ಕಾಗಿಯೋ ನೀನು ಕೂಡಿಟ್ಟು ಬಲಿಗೆ ಸಿದ್ಧವಾಗುವ ಕೊಬ್ಬಿದ ಕುರಿಯಂತಾಗಬೇಡ. ಲೋಕಸೇವೆಗೆ ನಿರತರಾಗಿರುವ ಶಿವಶರಣರಿಗೆ ಕೊಟ್ಟುಬಿಡು.
ಸತ್ತವನು ಬಚ್ಚಿಟ್ಟ ಹಣ ಪತ್ತೆಯಾಗುವುದಿಲ್ಲ-ಪತ್ತೆಯಾದರೂ ಉತ್ತರಾಧಿಕಾರಿಗೇ ಸಿಕ್ಕುವುದೆಂಬ ಖಾತ್ರಿಯಿಲ್ಲ, ಸಿಕ್ಕಿದರೂ ಅದನ್ನು ಕಸಿದು ತಿನ್ನುವ ಜನ ನಾನಾ ವೇಷ ಧರಿಸಿ ಬರುತ್ತಾರೆ. ನೀನು ಕಷ್ಟಪಟ್ಟು ಕೂಡಿಟ್ಟ ಅಪಾರ ಹಣ-ನೀನು ಸತ್ತಮೇಲೆ ಅಕಲಾಯವಾಗುವುದು ಬೇಡ. ಬದುಕಿರುವಾಗಲೇ ಅದರ ಬಹುಪಾಲನ್ನು ಧರ್ಮಕಾರ್ಯಕ್ಕಾಗಿ ಪುದುವಿಡು-ಎಂಬುದು ವಚನದ ತಾತ್ಪರ್ಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು