ಭಕ್ತನ ಜ್ಞಾನಿಸ್ಥಲ - ಮಾಯಾಪಾಶ
ತನು-ಮನ-ಧನವ ಹಿಂದಿಕ್ಕಿಕೊಂಡು,
ಮಾತಿನ ಬಣಬೆಯ ಒಳಲೊಟ್ಟೆಯ ನುಡಿವರು ನೀವೆಲ್ಲಾ ಕೇಳಿರೆ:
ತಲಹಿಲ್ಲದ ಕೋಲು ಹೊಳ್ಳು ಹಾರುವುದಲ್ಲದೆ
ಗುರಿಯ ತಾಗಬಲ್ಲುದೆ?
ಮಾಯಾಪಾಶ ಹಿಂಗಿ, ಮನದ ಗಂಟು ಬಿಡದನ್ನಕ್ಕ
ಕೂಡಲಸಂಗಮದೇವನೆಂತೊಲಿವನಯ್ಯಾ?
Transliteration Tanu-mana-dhanava hindikkikoṇḍu,
mātina baṇabeya mundiṭṭukoṇḍu,
oḷaloṭṭeya nuḍivaru nīvellā kēḷire:
Talahillada kōlu hoḷḷu hāruvudallade
guriya tāgaballude?
Māyāpāśa hiṅgi, manada gaṇṭu biḍadannakka
kūḍalasaṅgamadēvanentolivanayyā?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Keeping behind, the body, mind and wealth,
-Do you all list!- you that spout
Stacks of words hollow inside:
A headless arrow may point less dart;
But will it strike the white?
Unless the knot of mind breaks loose,
How could Kūḍala Saṅgama
Love you?
Translated by: L M A Menezes, S M Angadi
Hindi Translation तन, मन धन पीछे रखकर
सारहीन बातों का ढेर लगानेवालो, तुम सब सुनो
बेसिरे का बाण बेकार नहीं जायेगा,
तो लक्ष्य को बेधेगा?
जब तक माया पाश दूर न हो और मन की गाँठ न खुले,
कूडलसंगमदेव कैसे पसन्न होंगे ?
Translated by: Banakara K Gowdappa
Telugu Translation తను-మన-ధనములు లో దాచుకొని
వట్టి మాటల కల్ల లాడు మీరెల్ల వినుడయ్యా:
తలలేని బాణము, గాలికి పోవునేగాని, గురితాక నేర్చునే!
మాయాపాశము సడలి మదిగంటు విడనందాక
సంగమదేవు డెటు వలచునయ్యా!
Translated by: Dr. Badala Ramaiah
Tamil Translation உடல், மனம், செல்வத்தைப் பின்னிட்டுப்
புற்குப்பைபோல பயனற்ற உரையை முன்னிட்டுப்
புன்மையுரைக்கும் அனைவரும் கேளிர்.
குப்பியற்ற அம்பு பறக்குமேயன்றிக்
குறியினைத் தொடவியலுமோ?
மாயப்பாசம் நீங்கி, மனத்தின் ஐயம் நீங்கும் வரை
கூடல சங்கம தேவன் எங்ஙனமருள் புரிவான்?
Translated by: Smt. Kalyani Venkataraman, Chennai
Marathi Translation
तन-मन-धन दडवून ठेवणारे,
व्यर्थ गप्पा मारणारे आणि असत्य बोलणाऱ्यांनो तुम्ही ऐका.
टोक नसलेला बाण सुटेल पण त्याने लक्ष्यभेद होईल का?
मायापाश तुटल्याशिवाय,
मनाचे विषय-विकार दूर झाल्याशिवाय
कूडलसंगमदेव प्रसन्न होईल ?
Translated by Shalini Sreeshaila Doddamani
ಶಬ್ದಾರ್ಥಗಳು ಒಳಲೊಟ್ಟೆ = ಒಳಗೆ ಪೊಳ್ಳಾಗಿರುವುದು, ನಿರರ್ಥಕವಾದುದು; ತನು = ಶರೀರ; ತಲಹು = ಗುರಿ ಮುಟ್ಟುವ ಶಕ್ತಿ; ಬಣಬೆ = ; ಮಾಯಾಪಾಶ = ; ಹೊಳ್ಳು = ಪೊಳ್ಳು ಒಳಗೆ ಬರಿದಾಗಿರುವುದು;
ಕನ್ನಡ ವ್ಯಾಖ್ಯಾನ ತನು-ಮನ-ಧನವನ್ನು ಬಚ್ಚಿಟ್ಟುಕೊಂಡು-ತೂಕವಿಲ್ಲದ ಮಾತಿನ ಕಂತೆಕಟ್ಟಿ ಬಣಬೆ ಒಟ್ಟುವ ಕ್ರಿಯಾ ಹೀನ ವಾಚಾಳಿಗಳನ್ನು ಕುರಿತ ಮಾತಿದು : ಹರಿತವಾದ ಲೋಹದ ಮೊನೆಯಿಲ್ಲದ ಬಾಣದ ದಂಟನ್ನು ಹೆದೆಯೇರಿಸಿ ಬಿಲ್ಲು ಬಿರಿಬಾಗುವಂತೆ ಆಕರ್ಣಾಂತವಾಗಿ ಸೆಳೆದು ಬಿಟ್ಟರೇನಂತೆ-ಆ ದಂಟು ಹಗುರವಾಗಿರುವುದರಿಂದ ಜಿಗಿದು ಎತ್ತೆತ್ತಲೋ ಬೀಳುವುದಲ್ಲದೆ, ಕುರಿತ ಗುರಿಯನ್ನು ತಾಗುವುದಿಲ್ಲ. ಹಾಗೆಯೇ-ಕಾರ್ಯತಃ ತ್ಯಾಗವಿಲ್ಲದೆ ಆಡುವ ಮಾತಿನಲ್ಲಿ ವೇಗ ಓಘ ಏನಿದ್ದರೇನು-ಎಲ್ಲ ವ್ಯರ್ಥಾಡಂಬರ ! ಮಾತೆಂದರೆ ತೂಕವಾಗಿ ಒಂದು ನಿಟ್ಟಿನಲ್ಲಿ ಸಾಗಬೇಕು, ಅಂಥವನಿಗೇ ಶಿವನೊಲಿಯುವುದು. ಗುರುಲಿಂಗಜಂಗಮದ ಮಾತನಾಡುವ ಜನ ಮೊದಲು ತಮ್ಮ ತನು ಮನ ಧನಕ್ಕೆ ಗಂಟುಬಿದ್ದಿರುವ ಮಾಯಾಪಾಶವನ್ನು ಬಿಡಿಸಿ ಬಿಸಾಡಿರಬೇಕೆಂಬುದು ವಚನದ ತಾತ್ಪರ್ಯ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು