ಭಕ್ತನ ಜ್ಞಾನಿಸ್ಥಲ - ಲಿಂಗ-ಜಂಗಮ
ಸರ್ವಭೂತಾತ್ಮನೆಂಬ ಮಾತಿನ ಮಾತಿನಲ್ಲಿ ಹೋಗದು,
ತನು-ಮನ-ಧನವ ಗುರುಲಿಂಗ ಜಂಗಮಕ್ಕೆ ಸವೆಸಲೇಬೇಕು.
ಇದು ಕಾಣದ ಕೂಡಲಸಂಗನ ಶರಣರಿಗೆ ಅಂಜಲೇಬೇಕು.
Transliteration Sarvabhūtātmanemba mātina mātinalli hōgadu,
tanu-mana-dhanava guru liṅga jaṅgamakke savesalēbēku.
Nam'ma kūḍalasaṅgana śaraṇarige an̄jalēbēku.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 One should not be led away
By words upon words that say
He is all ereation's soul.
The body, mind and wealth
Must be spent upon
Guru,Liṅga and Jaṅgama.
One must fear, therefore,
Kūḍala Saṅga's Śaraṇās.
Translated by: L M A Menezes, S M Angadi
Hindi Translation सर्वभूतात्मा जैसी बातों से नहीं होगा
तन, मन, धन व्यय करना ही चाहीए ।
कूडलसंगमेश के शरणों से डरना ही चाहिए ॥
Translated by: Banakara K Gowdappa
Telugu Translation సర్వ భూతాత్ముడను మాటల
మాటున పడిపోకురా?
తను-మన ధనముల గురులింగ జంగములకు
వెచ్చింపనే వెచ్చింపవలెగాన
సంగని శరణులకు జంకవలె
Translated by: Dr. Badala Ramaiah
Tamil Translation சர்வபூதாத்மா எனுமுரையை, உரையளவிலே மட்டுமின்றி
உடல், மனம், செல்வத்தை ஈவீர் ஐயனே,
நம் கூடல சங்கனின் அடியார்க் கஞ்சுமின்.
Translated by: Smt. Kalyani Venkataraman, Chennai
Marathi Translation
भूतात्मा खेतात्मा नामे श्राद्ध केले
भाव भाष्य झाले, व्यर्थ व्यर्थ
गुरू लिंग जंगम शरणांच्या सेवेत
केले ज्यांनी अर्पित, सारे सारे
कूडलसंगम देवा ! भक्ति भावे वेचणे
जाण हेचि साधने, सार्थ सार्थ
अर्थ- सर्व भूतात्म्याचे खेतात्म्याचे स्मरण केल्याने त्यांचे श्राद्ध केल्याने आपणास सुख शांती लाभेल ही कल्पनाच मुळीच चुकीची आहे. यास कसलाही आधार नाही. आणि ज्याला आधार नाही त्यावर भाष्य करणे वा श्रद्धा भाव ठेवणे योग्य होणार नाही कारण तुमच्या मनाच्या सुख-दुःखासाठी कोणताही भूतात्मा - खेतात्मा कारणीभूत ठरणार नाही किंवा तुमच्या संकटाच्या वेळी मदतीस धावून येणार नाही तुमचे सत्कर्मच तुमच्या कामाला येईल. तुमचे रक्षण करील म्हणून तन मन व धन संपत्ती गुरु लिंग जंगम व शरणांच्या सेवेत खर्ची घालावे. समर्पण हेच खरे भक्ति मार्गातले साधन होय हेच तुमचे सत्कर्म होय म्हणून समर्पण हे तुमच्या जीवनाला सार्थक ठरेल.
Translated by Rajendra Jirobe, Published by V B Patil, Hirabaug, Chembur, Mumbai, 1983
सर्व भुतात्म्याची बडबड केल्याने काय होणार?
तनमनधन गुरुलिंगजंगमला
झिजवून उपासना केली पाहिजे.
म्हणून कूडलसंगाच्या शरणाला भिले पाहिजे.
Translated by Shalini Sreeshaila Doddamani
ಶಬ್ದಾರ್ಥಗಳು ಅಂಜು = ಹೆದರು; ತನು = ಶರೀರ; ಭೂತ = ದೆವ್ವ;
ಕನ್ನಡ ವ್ಯಾಖ್ಯಾನ ದೇವರು ಎಲ್ಲ ಪಶು ಪಕ್ಷಿ ಪ್ರಾಣಿಗಳಲ್ಲಿದ್ದಾನೆ. ಇರುವೆಗೆ ರವೆ, ಹಕ್ಕಿಗೆ ಕಾಳು, ಹಸುವಿಗೆ ಹುಲ್ಲು ಕೊಟ್ಟು ದಿನದಿನವೂ ಕೋಟಿದಾನ ಮಾಡುತ್ತಿದ್ದೇವೆ. ಅಷ್ಟರಿಂದ ದೇವರು ತೃಪ್ತನಾಗುವುದಿಲ್ಲವೇ ? ಶರಣರಿಗೇ ಪ್ರತ್ಯೇಕ ಪರಿಚರ್ಯೆ ಪೂಜೆ ದಾನಗಳೇಕೆ ಎನ್ನಬಾರದು. ಎಂಭತ್ತುನಾಲ್ಕು ಲಕ್ಷ ಬಗೆಯ ಜೀವರಾಶಿಯಲ್ಲಿ ಮಾನವಾವತಾರವು ಮಹತ್ವಪೂರಿತವಾದದ್ದು. ಆ ಮಾನವರಲ್ಲಿಯೂ ಸರ್ವರ ಹಿತ ಬಯಸಿ ಶಿವನಿಗೇ ಶರಣಾಗತರಾಗಿರುವ ಶರಣರೇ ಶ್ರೇಷ್ಠರು. ಮುಂದೆ ವಿಕಾಸವಾಗಲಿರುವ ದಿವ್ಯ ಮಾನವಸಂತತಿಯ ಜಾಯ ಮಾನದ ಬಿತ್ತನೆಬೀಜ ಅವರಲ್ಲಿದೆ. ಆ ನಿಟ್ಟಿಗೆ ನಮ್ಮ ಉದ್ಧಾರ ಅವರಿಂದಲೇ ಆಗುವುದಿದೆ. ಆದುದರಿಂದಲೇ ಅವರಿಗೆ ನಾವು ತನುಮನಧನದಿಂದ ವಿಧೇಯರಾಗಿರಬೇಕು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು