•  
  •  
  •  
  •  
Index   ವಚನ - 205    Search  
 
ಭಕ್ತನ ಜ್ಞಾನಿಸ್ಥಲ - ಡಾಂಭಿಕತೆ
ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ, ಹಲವು ಪರಿಯಲಿ ವಿಭೂತಿಯ ಹೂಸಿ, ಗಣಾಡಂಬರದ ನಡುವೆ ನಲಿನಲಿದಾಡಿ, ಉಂಡು, ತಾಂಬೂಲಗೊಂಡು ಹೋಹುದಲ್ಲಾ! ತನು-ಮನ-ಧನವ ಸಮರ್ಪಿಸದವರ ಕೂಡಲಸಂಗಮದೇವರೆಂತೊಲಿವನಯ್ಯಾ?
Transliteration Halavu maṇiya kaṭṭi kuṇikuṇidāḍi, halavu pariyali vibhūtiya hūsi, gaṇāḍambarada naḍuve nalinalidāḍi, uṇḍu, tāmbūlagoṇḍu hōhudalla! Tanu-mana-dhanava samarpisadavara kūḍasaṅgamadēvarentolivanayyā?
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 To string a number of beads, To leap and play, To smear the ash in many a way, The sport among the pageant of saints, To eat, to chew tāmbūla -well, It's not all there is! How can Lord Kūḍala Saṅgama Love them that have not offered yet The body, mind and wealth? Translated by: L M A Menezes, S M Angadi
Hindi Translation कई मणियाँ बाँध नृत्य करना विविध रीति से विभूति लगाना गणसमूह मध्य आमोद प्रमोद करना- भोजन कर तांबूल चबाते जाना नहीं है तन – मन –धन समर्पित नहीं करनेवालों पर कूडलसंगमदेव कैसे प्रसन्न होंगे ? Translated by: Banakara K Gowdappa
Telugu Translation పలు రుద్రాక్షలు గట్టి తైతకలాడి; మాటిమాటికి విభూతి పూసి గణంబుల మధ్య గంతులు వైచి తిని తాంబూలము గొనిపోవుట గాదయ్యా, తనుమన ధనముల ధారవోయకే సంగమదేవుడు మెచ్చడయ్యా నిను. Translated by: Dr. Badala Ramaiah
Tamil Translation பற்பல கண்மணிகளைப் புனைந்து கூத்தாடி பல்வகையிலே திருநீற்றினைப் பூசி, பகட்டினர் நடுவே மகிழ்ந்திருந்து உண்டு, தாம்பூலம் கொண்டு செல்வதோ! உடல், மனம் பொருளை ஈயோர்க்குக் கூடல சங்கம தேவன் எங்ஙன மருள்வான்? Translated by: Smt. Kalyani Venkataraman, Chennai
Marathi Translation मणिमाळांचा श्रृंगार करुन नाचणे, अनेक ठिकाणी विभूती लावून घेणे. गण समुहात नाचणे, जेवून-तांबूल खाऊन जाणे योग्य नाही. तनमनधन, समर्पण न करणाऱ्यावर कूडलसंगमदेव प्रसन्न कसे होईल? Translated by Shalini Sreeshaila Doddamani
ಶಬ್ದಾರ್ಥಗಳು ಆಡಂಬರ = ; ತಾಂಬೂಲ = ; ಪರಿ = ರೀತಿ; ಹೂಸಿ = ಲೇಪಿಸು;
ಕನ್ನಡ ವ್ಯಾಖ್ಯಾನ ಗಣಾಡಂಬರವೆಂದರೆ-ಆಡಂಬರವೆಂಬ ಚರ್ಮವಾದ್ಯದ ತಾಳಗತಿಗೆ ಕುಣಿಯುವ ಭಕ್ತರ ತಂಡದ ಒಂದು ಕುಣಿತ. ಅಲ್ಲಿ ಕುಣಿಯುವವರು ಶಿವಭಕ್ತರೇ ಆಗಿ-ರುದ್ರಾಕ್ಷಿಯನ್ನು ತಲೆ ಕಿವಿ ಕೊರಳು ತೋಳುಮಣಿಕಟ್ಟು ಮುಂತಾದೆಡೆಗಳಲ್ಲಿ-ಕಿರೀಟಾಕಾರವಾಗಿ ಕುಂಡಲಾಕಾರವಾಗಿ ಹಾರಾಕಾರವಾಗಿ ಬಂದಿಯಾಕಾರವಾಗಿ ಬಳೆಯಾಕಾರವಾಗಿ ಅಲಂಕಾರವಾಗಿ ಧರಿಸಿಕೊಂಡು, ಮೈಗೆಲ್ಲಾ ಭಸ್ಮೋದ್ಧೂಳನ ಮಾಡಿಕೊಂಡು, ಆ ಭಸ್ಮವನ್ನೇ ನೀರಿನಲ್ಲಿ ಕಲಸಿ ಅಡ್ಡ ತ್ರಿಪುಂಡ್ರವಾಗಿ ಹಣೆ ಕೊರಳು ಭುಜ ಬೆನ್ನು ಮುಂತಾದೆಡೆ ಮಂದವಾಗಿ ಎಳೆದುಕೊಂಡು-ಆಡಂಬರವಾದ್ಯವನ್ನು ಹಿಡಿದು ಬಾರಿಸುತ್ತ ಗಣಂಗಳ ನಡುವೆ ಕುಣಿದು, ಕುಣಿದಾದ ಮೇಲೆ ನಲಿದು ಹರಗಣ ಪಂಕ್ತಿಯಲ್ಲಿ ಮಂಡಿಸಿ ಉಂಡು ತಾಂಬೂಲ ಜಗಿಯುತ್ತ ಪಿಚ್ಚನೆ ಉಗುಳುತ್ತ ಡರ್ರನೆ ತೇಗುತ್ತ-ಮನೆಗೋ ಮರದ ನೆರಳಿಗೋ ಗುಡಿಗೋ ಚಾವಡಿಗೋ ಹೋಗಿ ಮಲಗಿ ಗೊರಕೆ ಹೊಡೆಯುವುದೇನು ಕಷ್ಟ ? ಅದು ಭಕ್ತಿಯಲ್ಲ-ಇನ್ನೊಬ್ಬರ ವೆಚ್ಚದಲ್ಲಿ ಆರಾಮಜೀವನ ನಡೆಸುವುದು ಭಕ್ತಿಯಲ್ಲ. ದುಡಿಮೆಯಿಂದ ದೇಹವನ್ನು ಬಲಪಡಿಸಿಕೊಂಡು, ಮನವನ್ನು ದೃಢಪಡಿಸಿಕೊಂಡು, ಧನವನ್ನು ಸಂಪಾದಿಸಿಕೊಂಡು-ಆ ತನು ಮನ ಧನ ಮೂರನ್ನೂ ಶಿವಾರ್ಪಣಬುದ್ಧಿಯಿಂದ ಶಿವಭಕ್ತರಿಗೆ ವಿನಿಯೋಗಿಸಬೇಕು. ಹಾಗಲ್ಲದೆ ಅಮಲೇರಿದ ಭಕ್ತಿಗೆ ವಿಮಲಶಿವನು ಒಲಿವನಾದರು ಹೇಗೆ ?

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು