•  
  •  
  •  
  •  
Index   ವಚನ - 206    Search  
 
ಭಕ್ತನ ಜ್ಞಾನಿಸ್ಥಲ - ತ್ರಿವಿಧ ದಾಸೋಹ
ತನುವ ಕೊಟ್ಟು ಗುರುವನೊಲಿಸಬೇಕು; ಮನವ ಕೊಟ್ಟು ಲಿಂಗವನೊಲಿಸಬೇಕು; ಧನವ ಕೊಟ್ಟು ಜಂಗಮವನೊಲಿಸಬೇಕು. ಈ ತ್ರಿವಿಧವ ಹೊರಗು ಮಾಡಿ, ಹರೆಯ ಹೊಯಿಸಿ, ಕುರುಹ ಪೂಜಿಸುವವರ ಮೆಚ್ಚ ಕೂಡಲಸಂಗಮದೇವ.
Transliteration Tanuva koṭṭu guruvanolisabēku; manava koṭṭu liṅgavanolisabēku; dhanava koṭṭu jaṅgamavanolisabēku. Ī trividhava horagu māḍi, hareya hoyisi, kuruha pūjisuvavara mecca kūḍalasaṅgamadēva.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Offering your body, you should Endear yourself to Guru; Offering your heart, you should Endear yourself to Liṅga ; Offering your wealth, you should Endear yourself Jaṅgama... Lord Kūḍala Saṅgama loves not Those who, without these three, Beat hard the kettle-drum And worship a mere sign. Translated by: L M A Menezes, S M Angadi
Hindi Translation तन देकर गुरु को प्रसन्न करना चाहिए मन देकर लिंग को प्रसन्न करना चाहिए धन देकर जंगम को प्रसन्न करना चाहिए इन तीनों को छोड नगाडा बजाकर मूर्ति पूजा करनेवालों पर कूडलसंगमदेव प्रसन्न नहीं होते ॥ Translated by: Banakara K Gowdappa
Telugu Translation తనువిచ్చి గురుని మెప్పింపవలె మనసిచ్చి లింగము నర్చింపవలె ధనమిచ్చి జంగముల దనియింపవలె త్రివిధ మిటు వెచ్చింపక; పలక గొట్టి వట్టి మట్టిబొమ్మల గొల్చువారల మెచ్చడయ్యా కూడల సంగమదేవుడు. Translated by: Dr. Badala Ramaiah
Tamil Translation உடலையீந்து குருவிற்குத் தொண்டு புரிவாய் மனத்தையீந்து இலிங்கத்திற்குத் தொண்டு புரிவாய் பொருளையீந்து அடியார் தொண்டு புரிவாய் இம்மூன்றையும் புறக்கணித்து பறைமுழங்க பறைசாற்றி வணங்குவோரை நயவான், கூடல சங்கம தேவன். Translated by: Smt. Kalyani Venkataraman, Chennai
Marathi Translation देह झिजवूनि, घडे गुरु सेवा प्रसन्न तो व्हावा, गुरुदेव तैसाचि जंगम, प्रसन्न होण्याला खर्चितो धनाला, भरपूर पूजा जर केली ढोल वाजवून लिंगदेव प्रसन्न होई कैसा सर्व साध्य होई, त्रिविध सेवेने साध्य करुन घेणे, तुझे हाती कूडलसंगमदेव ! वरखड ती भक्ति ठेविल्याने मुक्ति, साध्य नाही अर्थ - तन-मन-धन या विविध सेवेने गुरु-लिंग व जंगम यांना प्रसन्न करुन घेता येईल, याशिवाय त्यांना अन्य काहीही नको आहे. घंटा वाजवीत वाद्य वाजवित वैभवाने लिंगार्चन करणाऱ्यांना व महान भक्त असल्याचा आव आणणाऱ्या दंभाचाऱ्यांना परमेश्वर कधीही व केव्हाही प्रसन्न होणार नाही. तरी वेळीच सावध व्हा. आणि तन-मन-धन अर्पण करुन खरी शिवभक्ति करा. Translated by Rajendra Jirobe, Published by V B Patil, Hirabaug, Chembur, Mumbai, 1983 तनू सेवेने गुरुला प्रसन्न केले पाहिजे. मन सेवेने लिंगाला प्रसन्न केले पाहिजे. धन सेवेने जंगमाला प्रसन्न केले पाहिजे. या त्रिविध सेवेशिवाय घडाभर जल अभिषेक करून, लिंगार्चना करणाऱ्या भिक्षुकावर कूडलसंगमदेव प्रसन्न होत नाही. Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ತನು = ಶರೀರ; ಹೊರಗು = ; ಹೋಯಿಸು = ;
ಕನ್ನಡ ವ್ಯಾಖ್ಯಾನ ಲಿಂಗದೀಕ್ಷೆಕೊಟ್ಟವನೂ, ಅಕ್ಷರ ಕಲಿಸಿ ಜ್ಞಾನಮಾರ್ಗತೋರಿದವನೂ ಗುರು. ಅವನು ತನ್ನೊರಲ್ಲೇ ಇರುವನು, ಅವನಿಗೆ ಶ್ರಮದಾನಪೂರ್ವಕವಾಗಿ ಸೇವೆ ಮಾಡಬೇಕು, ಜಂಗಮವು ನಿಂತಲ್ಲಿ ನಿಲ್ಲದೆ ಸದಾ ಸಂಚಾರಶೀಲನಾಗಿ ಸಮಾಜದ ಅಭಿವೃದ್ಧಿಗೆ ಯೋಜನೆಗಳನ್ನು ಹಾಕುತ್ತಿರುವನು. ಅಂಥವನಿಗೆ-ಮನೆಗೆ ಬಂದಾಗ-ಧನವನ್ನು ಕೊಡಬೇಕು. ಹೀಗೆ ಗುರುವಿನ ಮತ್ತು ಜಂಗಮದ ಸೇವೆಯನ್ನು ಮಾಡುವ ನಿಶ್ಚಲ ಸದ್ಬುದ್ಧಿಯನ್ನು ಕೊಡೆಂದು ಲಿಂಗಕ್ಕೆ ಮನನಟ್ಟು ಧ್ಯಾನಮಾಡಬೇಕು. ಈ ಧ್ಯಾನ-ದಾನ-ಶ್ರಮದಾನವೇನೊ ಇಲ್ಲದೆ-ಗುರು ಕೊಟ್ಟ ಲಿಂಗದ ಕಲ್ಲನ್ನು ಧಾಂಧೂಂ ಪೂಜಿಸಿದರೇನು ಪ್ರಯೋಜನ ? ಗುರು ಶಿಷ್ಯನ ಕೈಗೆ ಲಿಂಗವನ್ನು ಕೊಟ್ಟಿದ್ದು-ಗುರುಹಿರಿಯರ ಮತ್ತು ಜನರ ಸೇವೆಯನ್ನು ಮಾಡಲು ಬೇಕಾದ ಪೂರ್ಣವ್ಯಕ್ತಿತ್ವವನ್ನು ಕುರಿತು ಭಕ್ತನು ಧ್ಯಾನಿಸಲಿ, ಅದನ್ನು ಸಿದ್ಧಿಸಿ ಕೊಳ್ಳಲಿ ಎಂದು. ಅದೇ ಇಲ್ಲದ ಮೇಲೆ ಮಿಕ್ಕುದೆಲ್ಲಾ ಲೋಕವನ್ನು ದಾರಿತಪ್ಪಿಸುವ ಆಡಂಬರವಷ್ಟೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು