•  
  •  
  •  
  •  
Index   ವಚನ - 208    Search  
 
ಭಕ್ತನ ಜ್ಞಾನಿಸ್ಥಲ - ವೇದ-ಶಾಸ್ತ್ರ
ಶಾಸ್ತ್ರ ಘನವೆಂಬೆನೆ? ಕರ್ಮವ ಭಜಿಸುತ್ತಿದೆ! ವೇದ ಘನವೆಂಬೆನೆ? ಪ್ರಾಣಿವಧೆಯ ಹೇಳುತ್ತಿದೆ! ಸ್ಮೃತಿ ಘನವೆಂಬೆನೆ? ಮುಂದಿಟ್ಟರಸುತ್ತಿದೆ! ಅಲ್ಲೆಲ್ಲಿಯೂ ನೀವಿಲ್ಲದ ಕಾರಣ, ತ್ರಿವಿಧ ದಾಸೋಹದಲ್ಲಲ್ಲದೆ ಕಾಣಬಾರದು ಕೂಡಲಸಂಗಮದೇವನ!
Transliteration Śāstraghanavembene? Karmava bhajisuttide! Vēda ghanavembene? Prāṇi vadheya hēḷuttide! Smr̥ti ghanavembene? Mundiṭṭarasuttide! Allelliyū nīvillada kāraṇa, trividhadāsōhadalallade kāṇabāradu kūḍalasaṅgamadēvana!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Shall I say Śāstra is great? It only exalts karma! Shell I say Veda is great? It tells of animal sacrifice! Shell I say Smr̥ti is great? It seeks in the future! As He is in none of these, Lord Kūḍala Saṅgama can be seen Nowhere except In triple dedication. Translated by: L M A Menezes, S M Angadi
Hindi Translation शास्त्र श्रेष्ट कहूँ? वह कर्म को भजता है वेद श्रेष्ट कहूँ? वह प्राणी-वध बताता है। श्रुति श्रेष्ट कहूँ? वह सामने रखकर खोजती है इनमें कहीं भी तुम नहीं हो, अतः त्रिविध दासोह के यहाँ छोड अन्यत्र कूडलसंगमदेव को देख नहीं सकते ॥ Translated by: Banakara K Gowdappa
Telugu Translation శాస్త్రము ఘనమందునా ? కర్మను భజించు! వేదము ఘనమందునా? ప్రాణివధ ప్రోత్సహించు! స్మృతి ఘనమందునా? ప్రత్యక్షమే తరచు! త్రివిధ దాసోహముననే గాని వీటియం దెచటనూ నీవు లేవయ్యా: కూడల సంగమదేవా ! Translated by: Dr. Badala Ramaiah
Tamil Translation சாத்திரம் சிறந்ததென்பேனா? வினையை வேண்டுமால் வேதம் சிறந்ததென்பேனா? உயிர்வதையை யுரைக்குமால், சுருதி சிறந்ததென்பேனா? எதிர்மறையை யாராயுமால் இவற்றிலெங்கும் நீ இல்லையாதலின் மூவிதத் தொண்டிலல்லது உம்மைக் காணவியலுமோ, கூடல சங்கம தேவனே. Translated by: Smt. Kalyani Venkataraman, Chennai
Marathi Translation शास्त्रा म्हणू थोर, कर्मकांड सर्व वाया व्यर्थ गर्व, वाढवी ते वेदा म्हणू थोर, पशुवध करी व्यर्थ हिंसाचारी, आवडंबर म्हणू श्रुति थोर, शोधी जगभर जवळीचा विसर पाडीतसे माझ्या संगमदेवा, नाहीस तू तेथे म्हणून मजसी ते, व्यर्थ सर्व कूडलसंगमदेवा ! त्रिविध दासोहात न मिळे अन्यत्र, पाहू जाता अर्थ - शास्त्र गहण व श्रेष्ठ म्हणावे तर ते केवळ कर्मकांडाची उपासना करविणारे व भजविणारे आहे. वेद श्रेष्ठ म्हणावे तर धर्माच्या नावावर होमयज्ञांत बळी देण्यास सांगतात. श्रुती श्रेष्ठ म्हणावे तर ती नश्वराच्या पाठी पळविते म्हणजे परमेश्वर प्रत्येकाच्या अंतरंगात आहे आणि श्रुती बाहेर शोधण्यास सांगते. म्हणून ती मृगजळच होय. हे कूडलसंगमदेवा! वरील सर्व ठिकाणी मी तुला जाणून घेण्याचा प्रयत्न करतो आहे. पण व्यर्थ, शेवटी तू मला त्रिविध दासोहात दिसलास. म्हणजे गुरू-लिंग-जंगम यांच्या दासोहात समर्पणात अनुभवास आलास. Translated by Rajendra Jirobe, Published by V B Patil, Hirabaug, Chembur, Mumbai, 1983 शास्त्राला श्रेष्ठ म्हणावे तर, ते कर्माची उपासना करते. वेदाला श्रेष्ठ म्हणावे तर, ते प्राणी वध करण्यास शिकविते. श्रृतीला श्रेष्ठ म्हणावे तर, ती व्यर्थहीन शोध घेते. तेथे तुम्ही कोठेही नाही म्हणून त्रिविध दासोहाविना कोठेही पाहू नये कूडलसंगमदेवाला. Translated by Shalini Sreeshaila Doddamani
ಶಬ್ದಾರ್ಥಗಳು ಘನ = ದೊಡ್ಡದು; ದಾಸೋಹ = ನಾನು ದಾಸನು ಎಂಬ ಭಾವನೆ, ದಾಸನಾಗಿ ನಡೆಯುವುದು; ಭಜಿಸು = ಪೂಜಿಸು; ಸ್ಮೃತಿ = ನೆನಪು;
ಕನ್ನಡ ವ್ಯಾಖ್ಯಾನ ಪೂರ್ವಮೀಮಾಂಸಾದಿ ತತ್ತ್ವಶಾಸ್ತ್ರಗಳಲ್ಲಿ ಯಜ್ಞಯಾಗಾದಿ ಕರ್ಮಗಳನ್ನೂ, ವೇದಗಳ ಬ್ರಾಹ್ಮಣ ವಿಭಾಗಗಳಲ್ಲಿ ಆ ಯಜ್ಞಯಾಗಾದಿಗಳನ್ನು ಮಾಡುವಾಗ ಕೊಡಬೇಕಾದ ಪಶುಬಲಿಯನ್ನೂ, ಅದರ ಕ್ರಮವನ್ನೂ ದೊಡ್ಡದು ಮಾಡಿ ಹೇಳಿದೆ. ಇಡಿಯಾಗಿ ಮನು ಯಾಜ್ಞವಲ್ಕ್ಯ ಮುಂತಾದವರ ಸ್ಮೃತಿಗಳೂ ಕಣ್ಣೆದುರಿಗೇ ಇರುವ ಜನಸಾಮಾನ್ಯರ ಸಂಬಂಧವಾಗಿ ಮಾಡಬೇಕಾದ ಸೇವಾಕಾರ್ಯಗಳೇನನ್ನೂ-ಸರ್ವ ಸಮಾನತೆಯ ಆಧಾರದ ಮೇಲೆ-ವಿಧಿಸದೆ, ಕರ್ಮಕಾಂಡದ ದಂಡಕಾರಣ್ಯದಲ್ಲಿ ತೊಳಲುತ್ತಿವೆ, ಆದ್ದರಿಂದ ವೇದ-ಶಾಸ್ತ್ರ-ಸ್ಮೃತಿಯೆಂದು ದಾರಿತಪ್ಪಬೇಡ-ದೇವರಿರುವುದು ಗುರುಲಿಂಗ ಜಂಗಮ ದಾಸೋಹ ಮಾರ್ಗದಲಲ್ಲದೆ ಮತ್ತೆಲ್ಲಿಯೂ ಅಲ್ಲ. ಶುಷ್ಕಾಚರಣೆಗೆ ಅವಧಾರಣೆಯಿರುವ ವೈದಿಕ ಧರ್ಮವನ್ನು ಬಿಡು-ದಾಸೋಹವೇ ದೈವಪೂಜೆಯೆಂಬ ಶಿವಧರ್ಮವನ್ನು ಅನುಸರಿಸು ಎಂದು ಬಸವಣ್ಣನವರು ಆದೇಶಿಸುತ್ತಿರುವರು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು

C-592 

  Mon 27 Jan 2025  

 https://savithru.blogspot.com/2025/01/blog-post_6.html
  ಸವಿತೃ