•  
  •  
  •  
  •  
Index   ವಚನ - 209    Search  
 
ಭಕ್ತನ ಜ್ಞಾನಿಸ್ಥಲ - ವೇದ-ಶಾಸ್ತ್ರ
ವೇದದಂತುಟಲ್ಲ, ಶಾಸ್ತ್ರದಂತುಟಲ್ಲ. ಗೀತಮಾತಿನಂತುಟಲ್ಲ ಕೇಳಯ್ಯಾ. ಮಾತಿನ ಮಾಲೆಯ ಕವುಳಗೋಲ ಶ್ರವದಲ್ಲಿ ಸತ್ತವರೊಳರೆ, ಅಯ್ಯಾ? ದಿಟದಲಗಿನ ಕಾಳೆಗವಿತ್ತಲಿದ್ದುದೇ ಕೂಡಲಸಂಗನ ಶರಣರು ಬಂದಲ್ಲಿ!
Transliteration Vēdadantuṭalla, śāstradantuṭalla. Gītamātinantuṭalla kēḷayyā. Mātina māleya kavuḷagōla śravadalli sattavaroḷare, ayyā? Diṭadalagina kāḷegavittaliddudē kūḍalasaṅgana śaraṇaru bandalli!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Hear me, good Sirs! It is not like the Vedas, It is not like the Śāstras, Nor like the words of Gita! Has anybody ever died In the forked-stick drill Of garlands of words? When Kūḍala Saṅga's Śaraṇās come Will there be, here, A battle with real swords! Translated by: L M A Menezes, S M Angadi
Hindi Translation सुनिए, वह वेदवत् नहीं है शास्त्रवत् नहीं है गीतावचन वत् नहीं है- वचनमाला के मुदगर व्यायाम में- कोई मरा है? कूडलसंगमदेव के शरणों के आने पर वास्तविक तलवार से शुद्ध होगा ही ॥ Translated by: Banakara K Gowdappa
Telugu Translation తుదిలేదు. వేదము; కొనగాదు శాస్త్రము దరిలేదు గీతము; వినరయ్యా; నుడిసరుల కట్టిన కసరత్తుల కొడ్డి చచ్చువారుండిరే? అయ్యా నిజ ఖడ్గంబుల సమరమున్నది కూడల సంగని శరణులే రాగ. Translated by: Dr. Badala Ramaiah
Tamil Translation வேதம் போலன்று, சாத்திரம் போலன்று, கீதைபோலன்று, கேளாய் சொற்போரிலே, சொற்போரிலே மாண்டவருளரோ ஐயனே? உண்மையான போர் ஈங்குளது கூடல சங்கன் அடியார் வந்துள்ள பொழுது. Translated by: Smt. Kalyani Venkataraman, Chennai
Marathi Translation वेदाचे ते भाष्य, पुस्तके लिहिली तरी नाही झाली, देवभक्ति शास्त्रावरी चर्चा केली जरी फार तरी ना मिळणार, देव तुला गीत ईश्वराचे, गाईले तू गोड तरी नाही जोड, देवा संगे शब्दाच्या माराने, कोणी नाही मेला अंतःकरण त्याला, साक्ष होय देवा तुझे शरण, सत्याची धार पारखी सत्वर, कर्मनिष्ठा कूडलसंगमदेवा ? तुझे ते शरण कायकी जीवन, मानी थोर अर्थ- कोणत्याही तत्वाच्या उपयोगितेवरुन (Practicability) ते तत्व श्रेष्ठ वा कनिष्ठ ठरविले जाऊ शकते एखादे तत्व वा शास्त्र चांगले वाटते पण बुद्धीला निरुत्तर करणारे असेल पण यथार्थजीवनाला पोषक नसेल तर ते चांगले असून काय कामाचे ? वेद त्याचप्रमाणे शास्त्र व गीत चांगले असेल पण सामान्य माणसाच्या बुद्धिला ते पेलणारे नाही व त्याच्या जीवनाला उपयुक्त व पोषक ठरणारे नाहीत तसे शब्दाच्या काठीने कोणी मेले आहेत काय? जीवनाला सुजलाम सुफलाम करणारी शिवशरणांची तीन तत्वे सद्भावना, सद्भक्ती आणि सदाचार कायक (श्रम) ही होत. आणि या तिन्हीचा संगम साधणारे शिवशरण सदैव स्वर्गानंदात असतात. जीवन सत्याचे मेरू पर्वत चढलेल्या कडूनच सत्याची धार खऱ्या अर्थाने पारखली जाते. इतर दांभिकांना ती असंभव आहे. Translated by Rajendra Jirobe, Published by V B Patil, Hirabaug, Chembur, Mumbai, 1983 वेद जसा नाही, शास्त्र जसा नाही, गीता जसा नाही ऐक हे सर्व शाब्दीक आहे. बोलण्याच्या तलवार चालविण्याच्या अभ्यासात कोण मरेल ? कूडलसंगाच्या शरणा समोरच सत्याची धार पारखता येईल Translated by Shalini Sreeshaila Doddamani
ಶಬ್ದಾರ್ಥಗಳು ಅಂತುಟ = ಹಾಗಾದರೆ; ಆಲಗು = ; ಕವುಳು = ತುತ್ತು; ಕಾಳೆಗ = ; ಗೀತ = ಹಾಡು; ಶ್ರವ = ಶ್ರಮ(ಗರುಡಿಯ) ಸಾಧನ;
ಕನ್ನಡ ವ್ಯಾಖ್ಯಾನ ಆಧ್ಯಾತ್ಮಿಕತೆಯಿರುವುದು-ಘಟ್ಟಿಭದ್ರವಾದ ಸೇವಾ ಚಟುವಟಿಕೆಯಲ್ಲಿಯೇ ಹೊರತು-ಪೊಳ್ಳು ಕುಟ್ಟುವ ಮಾತುಗಳಲ್ಲಿ ಅಲ್ಲ.ವೇದದ ಮಾತು. ಶಾಸ್ತ್ರದ ಮಾತು, ಗೀತದ ಮಾತು-ಮಾತು ಮಾತು. ಈ ಬರಿಯ ಮಾತಿನ ಅಣಕಯುದ್ಧದಲ್ಲಿ ನಷ್ಟವೇನಿದೆ? ಈ ಧೈರ್ಯದಿಂದಲೇ ಆಧ್ಯಾತ್ಮಿಕತೆಯನ್ನು ಕುರಿತ ವಾಗ್ಯುದ್ಧ ಪಂಡಿತರ ಮಧ್ಯೆ ಶತಮಾನಗಳಿಂದ ನಡೆಯುತ್ತಲೇ ಇದೆ. ವಾದಿ-ಪ್ರತಿವಾದಿಗಳಿಬ್ಬರೂ ತಮ್ಮ ತಮ್ಮ ದಿವ್ಯ ಜೀವನದ ಆಯಕಟ್ಟುಗಳನ್ನು ಮರೆತು ಕಾಲ ಕಳೆಯುತ್ತಿದ್ದಾರೆ. ಈ ಹರಟೆಮಲ್ಲರಿಗೆ ಸಾವು ಜೀವದ ತುರ್ತಿನ ಯುದ್ಧದ ಸಮಯ ಬರುವುದು ಶಿವಶರಣರು ದೇಹಿ ಎಂದು ಮನೆಗೆ ಬಂದಾಗಲೆ. ಆಗಲಾದರೂ ಅವರು ಬಂದವರಿಗೆ ರೂಢಿಯ ಉಪಚಾರದ ಮಾತಾಡಿಯೇ ಕಳಿಸದೆ, ಬಂದ ಸಮಯವನ್ನರಿತು ತುತ್ತನ್ನದ ಸೇವೆ ಮಾಡಿದರೆ ಜಯಶೀಲರಾದಂತೇಯೇ ಈ ಜೀವನಸಂಗ್ರಾಮದಲ್ಲಿ ! ವಾಕ್ಪೌರುಷಕ್ಕೆ ಬದಲಾಗಿ ತ್ಯಾಗಶೌರ್ಯವನ್ನು ಮೆರೆಯುವುದೇ ಧರ್ಮವೀರನ ಲಕ್ಷಣವೆಂಬುದು ಈ ವಚನದ ತಾತ್ಫರ್ಯ. ನೋಡಿ ವಚನ 203.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು