ಮಾತಿನ ಮಾತಿನಲ್ಲಿಪ್ಪುದೆ ಭಕ್ತಿ?
ಮಾಡಿ ತನು ಸವೆಯದನ್ನಕ್ಕ, ಮನ ಸವೆಯದನ್ನಕ್ಕ,
ಧನ ಸವೆಯದನ್ನಕ್ಕ ಅಪ್ಪುದೇ ಭಕ್ತಿ?
ಕೂಡಲಸಂಗಮದೇವ ಎಲುದೋರೆ ಸರಸವಾಡುವನು,
ಸೈರಿಸದನ್ನಕ್ಕ ಅಪ್ಪುದೇ ಭಕ್ತಿ?
Transliteration Mātina mātinallappude bhakti?
Māḍi tanu saveyadannakka, mana saveyadannakka,
dhana saveyadannakka appudē bhakti?
Kūḍalasaṅgamadēva eludōre sarasavāḍuvanu,
sairisadannakka appude bhakti?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Can there be piety
In words and more words?
Can there be piety
Unless your body is spent,
Unless your heart is spent,
Unless your wealth is spent?
Lord Kūḍala Saṅgama
Plays tricks with you
Until your bones look out:
Can there be piety
Unless you stand his fun?
Translated by: L M A Menezes, S M Angadi
Hindi Translation भक्ति केवल बातों से होगी ?
यदि सेवा में तन का व्यय न हो
मन का व्यय न हो,
धन का व्यय न हो,
भक्ति होगी?
कूडलसंगमदेव अस्तियों के दीखने तक
विनोद करते हैं, इसे सहन किये बिना भक्ति होगी?
Translated by: Banakara K Gowdappa
Telugu Translation వట్టిమాటల బట్టునే భక్తి !
చేసి తనువు కృశించునందాక
మనసు కృంగుదాక; ధనము తరుగుదాక
భక్తి కుదురునే? సంగనితో
సరసము స్తనశల్య పరీక్ష
సహింపకే భక్తి సమకూడదయ్యా!
Translated by: Dr. Badala Ramaiah
Tamil Translation சொல்லிலே, சொல்லிலே ஆமோ பக்தி?
செய்து உடலிளையாவரை, மனம் உருகாவரை
அளித்துச் செல்வங் குன்றாவரை, ஆமோபக்தி?
கூடல சங்கம தேவன், என்பு விளங்க உறுத்துமொழிவதை
பொறுக்கும் வரை ஆமோ பக்தி?
Translated by: Smt. Kalyani Venkataraman, Chennai
Marathi Translation
शाब्दीक बोलात भक्ती आहे का ?
तन झिजविल्याविना, मन झिजविल्याविना,
धन झिजविल्याविना भक्ती होते का?
कूडलसंगमदेवाच्या कठोर परिक्षेत
सफल झाल्याविना भक्ती होईल का?
Translated by Shalini Sreeshaila Doddamani
ಶಬ್ದಾರ್ಥಗಳು ಎಲುದೋರೆ = ಎಲುಬು ಕಾಣುವವರೆಗೆ; ತನು = ಶರೀರ; ಸರಸ = ಪ್ರೀತಿ; ಸೈರಿಸ = ಸಹಿಸು;
ಕನ್ನಡ ವ್ಯಾಖ್ಯಾನ ಕೇವಲ ಮಾತಿನಲ್ಲಿ ಭಕ್ತಿಯಾಗುವುದಿಲ್ಲ. ಸೇವೆಯಲ್ಲಿ ತನು ಕೃಶವಾಗದೆ, ಮನ ಮದವಿಳಿಯದೆ, ಧನ ವ್ಯಯವಾಗದೆ ಭಕ್ತಿಯಾಗುವುದಿಲ್ಲ, ಪರೀಕ್ಷಾರ್ಥವಾಗಿ ದೇವರು ಕೊಡುವ ಕಷ್ಟಗಳನ್ನೆಲ್ಲ ಸಹಿಸಿದ ಹೊರತು ಸುಮ್ಮಸುಮ್ಮನೆ ಭಕ್ತಿಯಾಗುವುದಿಲ್ಲ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು