ಹಾವಸೆಗಲ್ಲ ಮೆಟ್ಟಿ ಹರಿದು, ಗೊತ್ತ ಮುಟ್ಟಬಾರದಯ್ಯಾ:
ನುಡಿದಂತೆ ನಡೆಯಲು ಬಾರದಯ್ಯಾ,
ಕೂಡಲಸಂಗನ ಶರಣರ ಭಕ್ತಿ, ಬಾಳ ಬಾಯಧಾರೆ!
Transliteration Hāvasegalla meṭṭi haridu, gotta muṭṭabāradayyā:
Nuḍidante naḍeyalu bāradayyā,
kūḍalasaṅgana śaraṇara bhakti, bāḷa bāyadhāre!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 One cannot reach the mark,
By stepping in a hurry over
A mossay stone!
O Sir, you cannot act
According to your words...
The piety of the Śaraṇās
Of Kūḍala Saṅga
Is as a sharp sword-edge!
Translated by: L M A Menezes, S M Angadi
Hindi Translation शैवाल-शिला पर तेजी से चढकर
लक्ष्य तक पहुँचना कठिन है;
कथनी से करनी कठिन है;
कूडलसंगमेश के शरणों की भक्ति असि-धारा॥
Translated by: Banakara K Gowdappa
Telugu Translation పాచిరాళ్ళ పై పరువులెత్తుచు
ముట్టలేవయ్యా ముందటి గురిని
చెప్పినట్టుల చేయుట కష్టమయ్యా
అసిధారావ్రతము శరణుల భక్తి.
Translated by: Dr. Badala Ramaiah
Tamil Translation பாசிக் கல்லின் மீது நடந்து
குறியையடைவதோ ஐயனே!
கூறிய வண்ணம் நடப்ப தரிதையனே,
கூடல சங்கனின் அடியார் பக்தி,
வாளின் முனையிலே நடப்பதையனே.
Translated by: Smt. Kalyani Venkataraman, Chennai
Marathi Translation
शेवाळ्याच्या दगडावर चालून ध्येय प्राप्ती होत नाही,
बोलल्याप्रमाणे चालणे होत नाही,
कूडलसंगाच्या शरणांची भक्ती
तलवारीच्या धारे प्रमाणे आहे.
Translated by Shalini Sreeshaila Doddamani
ಶಬ್ದಾರ್ಥಗಳು ಬಾಯ = ಬಾಯಿ; ಹಾವಸೆ = ;
ಕನ್ನಡ ವ್ಯಾಖ್ಯಾನ ಬರೀ ಮಾತುಗಳನ್ನಾಡುವುದು ಬಹಳ ಸುಲಭ-ಅವುಗಳಲ್ಲಿ ಒಂದು ಮಾತನ್ನಾದರೂ ಆಚರಣೆಗೆ ತರುವುದು ಕಡುಕಷ್ಟ. ನುಡಿದಂತೆ ನಡೆಯುವುದೇ ಭಕ್ತಿಯ ಮಾರ್ಗ-ಆದುದರಿಂದಲೇ ಇದು ಸುಲಭವಲ್ಲ. ಈ ಭಕ್ತಿಮಾರ್ಗ ಪಾಚಿಮುಸುಕಿದ ಕಲ್ಲಿನಂತೆ ನಡೆದರೆ ಜಾರುವುದು-ಅಷ್ಟೇ ಅಲ್ಲ-ಖಡ್ಗದ ಹರಿತವಾದ ಬಾಯಿಧಾರೆಯಂತೆ ಕಾಲಿಟ್ಟರೆ ಕತ್ತರಿಸುವುದು-ಅಷ್ಟು ದುರ್ಗಮ ಅದು. ಆ ಭಯಂಕರ ಭಕ್ತಿಮಾರ್ಗದಲ್ಲಿ ನಡೆಯಬೇಕಾದವನು-ದೇಹ-ಮನ-ಧನಭಾರವನ್ನು ಶಿವಶರಣರ ಪಾದಗಳೆಡೆ ಮಿಡಿಪಿಟ್ಟು ನಡೆದರೆ ಕೊನೆ ಮುಟ್ಟ ಕ್ಷೇಮವಾಗಿ ನಡೆಯುವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು