ಭಕ್ತಿಯೆಂಬುದ ಮಾಡಬಾರದು:
ಗರಗಸದಂತೆ ಹೋಗುತ್ತ ಕೊಯ್ವುದು, ಬರುತ್ತ ಕೊಯ್ವುದು!
ಘಟಸರ್ಪನಲ್ಲಿ ಕೈದುಡುಕಿದರೆ ಹಿಡಿವುದ ಮಾಣ್ಬುದೆ,
ಕೂಡಲಸಂಗಮದೇವಾ!
Transliteration Bhaktiyembuda māḍabāradu:
Garagasadante hōgutta koyvudu, barutta koyvudu!
Ghaṭasarpanalli kaiduḍukidare hiḍivuda māṇbude,
kūḍalasaṅgamadēvā!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Don't you take on
this thing called bhakti:
like a saw
it cuts when it goes
and it cuts again
when it comes.
If you risk your hand
with a cobra in a pitcher
will it let you
pass?
Translated by: A K Ramanujan
Book Name: Speaking Of Siva
Publisher: Penguin Books
----------------------------------
You cannot do
What goes for piety:
It cuts through like s saw
Going and comming!
Touch with your hand
A monstrous snake:
It will surely bite,
O Lord Kūḍala Saṅgama!
Translated by: L M A Menezes, S M Angadi
Hindi Translation भक्ति कठिन है,
आरे की भाँति जाते चीरता है,
आते चीरता है,
घटसर्प में हाथ डालो,
तो डसना छोड देगा कूडलसंगमदेव?
Translated by: Banakara K Gowdappa
Telugu Translation భక్తి యన్నది కష్టమన్నా!
అంపమువలె పోవుచూ కోయు వచ్చుచూ కోయు
ఘట సర్పమును బట్టుచు పట్టుతప్పిన
కాటు తప్పదురా కూడలసంగమ దేవా !
Translated by: Dr. Badala Ramaiah
Tamil Translation பக்திதனைச் செய்வதியலுமோ?
இரம்பம்போல போகக் கொய்யு, மீளக் கொய்யும்
பாம்புக் குடத்திலே கைவிடின் கடியாதொழியுமோ
கூடல சங்கம தேவனே.
Translated by: Smt. Kalyani Venkataraman, Chennai
Marathi Translation
करु नये भक्ति, भक्ति नोहे सोपी
करवत सम कापी, येता जाता
कूडलसंगमदेवा ! भुजंगा मुखी हात
खचित करी घात, भक्ति ऐसी
अर्थ - भक्ति करणे हे येरा गबाळाचे काम नाही. भक्ति ही सुळावरील पोळीच जाणावी. अंतर बाह्य शुद्धी खेरीज भक्ति करणे म्हणजे महाभयंकर भुजंगाच्या तोंडात हातच समजावा. भूजंग कडाडून चावल्याशिवाय सोडीत नाही. तद्वत दृढ मनाविना केलेली भक्ति, प्रदर्शनासाठी केलेली भक्ति, हानी केल्याशिवाय राहत नाही. कारण भक्ति ही लाकडाच्या पोटातील करवताप्रमाणे होय. ती लाकडाला जाताना व येतानाही कापते.
येथे जीवन म्हणजे लाकूड, करवत म्हणजे भक्ति जाणावे भक्तिचा तमाशा करणे म्हणजेच मृत्यू.
Translated by Rajendra Jirobe, Published by V B Patil, Hirabaug, Chembur, Mumbai, 1983
भक्ती करणे सोपे काम नाही.
करवतीसम येताना कापते, जाताना कापते.
घटसर्पाला हात लावला तर चावणार
नाही का कूडलसंगमदेवा ?
Translated by Shalini Sreeshaila Doddamani
ಶಬ್ದಾರ್ಥಗಳು ಕೈದುಡು = ; ಘಟಸರ್ಪ = ವಿಷ ಸರ್ಪ; ಮಾಣ್ಬು = ;
ಕನ್ನಡ ವ್ಯಾಖ್ಯಾನ ಭಕ್ತಿಯನ್ನು ಮಾಡುವುದು ಕಷ್ಟ-ಅದು ಗರಗಸದಂತೆ ಹೋಗುತ್ತಲೂ ಕೊಯ್ಯುವುದು, ಬರುತ್ತಲೂ ಕೊಯ್ಯುವುದು-ಅಂದರೆ-ಭಕ್ತಿ ಮಾಡುವನನ್ನು ಶಿವನು ಪರೀಕ್ಷಿಸುವನಾಗಿ-ಆಗಲೂ ಕಷ್ಟ, ಗುರುಹಿರಿಯರು ಜಂಗಮರೂ ಪರೀಕ್ಷಿಸುವರಾಗಿ-ಆಗಲೂ ಕಷ್ಟ, ತನ್ನ ಭಕ್ತಿಯನ್ನು ಸಮರ್ಥಿಸಿಕೊಳ್ಳಬೇಕಾದಾಗ-ಸರ್ಪವಿರುವ ಗಡಿಗೆಯೊಳಕ್ಕೆ ಕೈಚಾಚಬೇಕಾಗಿ ಬಂದರೂ ಹಿಂದೆಗೆಯಬಾರದು-ಅಷ್ಟು ನಿಷ್ಠೆಯಿಂದ ಭಕ್ತಿ ಮಾಡಬೇಕು.
ವಿ : ಹಿಂದಿನ ಕಾಲದಲ್ಲಿ ತಾನು ಸತ್ಯವಂತನೆಂಬುದನ್ನು ತೋರಿಸಿಕೊಡಲು ಸರ್ಪವಿರುವ ಗಡಿಗೆಯಲ್ಲಿ ಕೈ ಎಟ್ಟಬೇಕಾಗಿತ್ತು. ಆಗ ಹಾವು ಅವನ ಕೈಯನ್ನು ಕಚ್ಚದಿದ್ದರೆ ಸತ್ಯವಂತ, ಕಚ್ಚಿದರೆ ಕಳ್ಳ ಎಂಬಂಥ ನ್ಯಾಯವ್ಯವಸ್ಥೆ-ಲೌಕಿಕ ಸಾಕ್ಷಿಗಳಿಲ್ಲದ ಕೆಲವು ಸಂದರ್ಭಗಳಲ್ಲಿ ಇತ್ತು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು