ಹಲವು ಕಾಲ ಧಾವತಿಗೊಂಡು ಒಟ್ಟಿದ ಹಿದಿರೆಯು
ಒಂದು ಮಿಡುಕುರಲ್ಲಿ ಬೇವಂತೆ,
ಸಲೆ ನೆಲೆ ಸನ್ನಿಹಿತನಾಗಿರ್ಪ ಶರಣನ ಭಕ್ತಿ
ಒಂದನಾಯತದಿಂದ ಕೆಡುವುದು.
ಸ್ವಧರ್ಮದಲ್ಲಿ ಗಳಿಸಿದ ಪಿತನ ಧನವ
ಅಧರ್ಮದಲ್ಲಿ ಕೆಡಿಸುವ ಸುತನಂತೆ-
ಶಿವನ ಸೊಮ್ಮ ಶಿವಂಗೆ ಮಾಡದೆ, ಅನ್ಯಕ್ಕೆ ಮಾಡಿದೊಡೆ,
ತನ್ನ ಭಕ್ತಿ ತನ್ನನೇ ಕೆಡಿಸುವುದು, ಕೂಡಲಸಂಗಮದೇವಾ.
Transliteration Halavukāla dhāvatigoṇḍu oṭṭida hidireyu
ondu miḍukuralli bēvante,
sale nele sannihitanāgirpa śaraṇana bhakti
ondanāyatadinda keḍuvudu.
(Su)dharmadalli gaḷisida pitana dhanava
adharmadalli keḍisuva sutanante-
śivana som'ma śivaṅge māḍade, an'yakke māḍidoḍe,
tanna bhakti tannanē keḍisuvudu, kūḍalasaṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 As a stack piled a long long time,
Laboriously,
May blaze with a single spark,
Even so the piety
Of one confirmed in sancity
May perish with a single sin.
Even as a son who wastes in vice
The wealth his father gathered virtuously-
If Śiva's riches are not given to Him,
But to another, one's own piety
Will ruin him, Lord
Kūḍala Saṅgama!
Translated by: L M A Menezes, S M Angadi
Hindi Translation दीर्घ कालीन श्रम से एकत्र घास
एक चिनगारी से जैसे भस्म होती है,
वैसे निश्चित, लक्ष्यसन्निहित-
शरण की भक्ति एक दोष से नष्ट होती है
स्वधर्मार्जित पितृधन-
अधर्म से नष्ट करनेवाले पुत्रवत्
शिवसंपत्ति शिवार्पित करना छोड-,
औरों को अर्पित करने से
उसकी भक्ति उसी का नाश करेगी, कूडलसंगमदेव॥
Translated by: Banakara K Gowdappa
Telugu Translation కలకాలము ధావంతపడి పేర్చిన వరివామి
ఒక్క మిణుగురుచే మండి మసిjైునరీతి;
సరి సరి సన్నిహితుడై యున్న శరణుని భక్తి
చిన్న తప్పుచే చెడిపోవునయ్యా;
స్వధర్మమున కూర్చు తండ్రి యాస్తి
అధర్మమున చెఱచు కొడుకురీతి
శివుని సొమ్ము శివునకే వెచ్చింపక
వెచ్చింప పరులకు; తన భక్తియే
తన్ను గాల్చు కూడల సంగమదేవా!
Translated by: Dr. Badala Ramaiah
Tamil Translation பலகாலம் முயன்று திரட்டிய படப்பு
ஒரு பொறி நெருப்பி லெரிதற்போல,
நன்கு நிலைத்து அருகி யாற்றும் தொண்டன் பக்தி,
சிறு அலட்சியத்தால் கெடும்
அறம் மூலந்தேடிய தந்தை செல்வத்தைத்
தீ நெறியிலழிக்கும் மகனனைய,
சிவனுடைமையை சிவனுக்கீயாது பிறருக்கீயின்
தன்பக்தி தன்னையே அழிக்கும்
கூடல சங்கம தேவனே.
Translated by: Smt. Kalyani Venkataraman, Chennai
Marathi Translation
खूप कष्ट घेऊन रचलेला गवताचा ढीग
एका ठिणगीने जळल्याप्रमाणे
निष्ठावंत शरणाची भक्ती एका लहान
चूकीनेही व्यर्थ होते.
सत् धर्माने कमविलेले पित्याचे धन
अधर्मात कुपुत्र नष्ट केल्या प्रमाणे
शरणाचे धन शरणा विना खर्च केले तर
आपली भक्ती आपणास नष्ट करील कूडलसंगमदेवा.
Translated by Shalini Sreeshaila Doddamani
ಶಬ್ದಾರ್ಥಗಳು ಧಾವತಿ = ಶ್ರಮ, ಕೆಲಸ; ಸುತ = ಮಗ; ಸೊಮ್ಮ = ಸೊಂತದ ಆಸ್ತಿ, ಸ್ವತ್ತು; ಹಿದಿರೆ = ;
ಕನ್ನಡ ವ್ಯಾಖ್ಯಾನ ಶಿವನು ತಂದೆ, ಅವನ ಸುಪುತ್ರನು ಶಿವಭಕ್ತ, ಭಕ್ತನಿಗೆ ಏನೆಲ್ಲ ಸೌಭಾಗ್ಯವಿದೆಯೋ ಅದೆಲ್ಲಾ ಶಿವನದೇ ಆಗಿದೆ. ಹೀಗಿರುವಲ್ಲಿ ಶಿವಭಕ್ತನು-ತಂದೆಯು ಅರ್ಜಿಸಿದ್ದನ್ನು ಕೆಟ್ಟ ಮಗನಂತೆ ಅಪವ್ಯಯ ಮಾಡದೆ-ಶಿವನ ಸ್ವತ್ತನ್ನೆಲ್ಲ ಶಿವ(ಜಂಗಮ)ನಿಗೇ ಸಲ್ಲಿಸಬೇಕು, ಒಮ್ಮೆಯಾಗಲಿ ಆಶಿವಕ್ಕೆ ವ್ಯಯವಾದರೆ ಅದು ಅನಾಚಾರ. ಇಂಥ ಅನಾಚಾರದಿಂದ ಆ ಭಕ್ತನು ಕಾಲದಿಂದಲೂ ಮಾಡಿಕೊಂಡು ಬಂದಿದ್ದ ಭಕ್ತಿಯೆಲ್ಲಾ-ಕಷ್ಟಪಟ್ಟು ಒಟ್ಟಿಕೊಂಡಿದ್ದ ಕುಳ್ಳಿನ ರಾಶಿಗೆ ಒಂದು ಕಿಡಿ ಬಿದ್ದರೆ ಹೇಗೋ ಹಾಗೆ-ಸುಟ್ಟು ಬೂದಿ ಯಾಗುವುದು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು