ಭಕ್ತನ ಜ್ಞಾನಿಸ್ಥಲ - ಔಪಚಾರಿಕತೆ
ಹಸಿದು ಬಂದ ಗಂಡನಿಗೆ ಉಣಲಿಕ್ಕದೆ,
ಬಡವಾದನೆಂದು ಮರುಗುವ ಸತಿಯ ಸ್ನೇಹದಂತೆ
ಬಂದುದನರಿಯಳು, ಇದ್ದುದ ಸವೆಸಳು.
ದುಃಖವಿಲ್ಲದ ಅಕ್ಕೆ ಹಗರಣಿಗನ ತೆರನಂತೆ
ಕೂಡಲಸಂಗಮದೇವಾ.
Transliteration Hasidu banda gaṇḍanige uṇalikkade,
baḍavādanendu maruguva satiya snehadante
bandudanariyaḷu, idduda savesaḷu.
Duḥkhavillada akke hagaraṇigana teranante
kūḍalasaṅgamadēvā.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Like the affection of a wife
Who does not give his food
To her lord coming, hungry, home,
And yet laments he's losing weight-
His coming home is nought to her,
She does not serve him what there is-
It is like an actor's griefless grief,
O Kūḍala Saṅgama Lord!
Translated by: L M A Menezes, S M Angadi
Hindi Translation भूखे पति को भोजन न देकर
‘कृश हुआ’ कहकर शोक करनेवाली पत्नी के प्रेमवत्
उसका आना नहीं जानती
जो है उसे नहीं खिलाती,
यह अभिनेता के दुःखहीन
रोदन सा है कूडलसंगमदेव॥
Translated by: Banakara K Gowdappa
Telugu Translation ఆకట వచ్చు మగనికి అన్నము పెట్టక
బడుగయ్యెనని యేడ్చు; స్నేహమువలె సతి
వచ్చుట తెలియదు; కలది వెచ్చింపదు
వెతలేక యేడ్చు నటకుని వలె
కూడల సంగమ దేవా!
Translated by: Dr. Badala Ramaiah
Tamil Translation பசித்து வந்த கணவனுக்கு உணவினை ஈயாது
இளைத்தானென மறுகும் கிழத்தியின் நட்பினைப் போல்
வந்ததையறியாள் உள்ளதை ஈயாள்
நொய்ம்மையற்ற அவள் வேடம் புனைந்த
பொருநரைப் போல கூடல சங்கம தேவனே.
Translated by: Smt. Kalyani Venkataraman, Chennai
Marathi Translation
भूकेलेला पती घरी येता जेवण न वाढता,
पती दुबळा झाला म्हणून दुःख करणाऱ्या सतीचा स्नेह ढोंग आहे.
त्याच्या येण्याची शुध्द नाही, जेवण वाढण्याची काळजी नाही.
दुःखाशिवाय अश्रू हास्यस्पद आहे.
तसे कूडलसंगमदेवाची वंचना
करणारी भक्ती पाहून शरमिंदा झालो.
Translated by Shalini Sreeshaila Doddamani
ಶಬ್ದಾರ್ಥಗಳು ಅಕ್ಕೆ = ದುಃಖ; ಹಗರಣಿಗ = ಪಾತ್ರ ಧರಿಸುವವ, ನಾಟಕಕಾರ;
ಕನ್ನಡ ವ್ಯಾಖ್ಯಾನ ಆ ಹೆಂಡತಿ-ಹಸಿದು ಮನೆಗೆ ಬಂದ ಗಂಡನನ್ನು ಕಂಡು ಕೃಶವಾದನೆಂದು ಮರುಗುವಳೇ ಹೊರತು ಲಲ್ಲೆಗರೆದು ಕರೆದು ಊಟ ಮಾಡಿಸಲಿಲ್ಲ. ಅವನು ಬಂದುದನ್ನು ಹೋದುದನ್ನು ಜಮಾಖರ್ಚಿಗೇ ತರದೆ ಸುಮ್ಮನೆ ಗಂಡ ಕೃಶವಾದನೆಂದು-ಸುಮ್ಮ ಸುಮ್ಮನೆ ಕಣ್ಣೀರು ಕರೆಯುವುದನ್ನು ಮಾತ್ರ ಅವಳು ಬಿಡಲಿಲ್ಲ. ಇಂಥ ಮಾಯಾವಿನೀ ಹೆಣ್ಣಿಗೆ ಹೋಲಿಸಲಾಗಿದೆ ಕಳ್ಳಭಕ್ತರನ್ನು. ಅವರು ಮನೆಗೆ ಬಂದ ಶಿವಭಕ್ತರನ್ನು ಬರೀ ಉಪಚಾರದ ಮರುಕದ ಮಾತನಾಡಿ ಊಟಕ್ಕಿಡದೆ ಕಳಿಸುವರು. ಇವರ ಮರುಕ ನಾಟಕದ ಪಾತ್ರಧಾರಿಯ ಮರುಕದಂತೆ ನಟನೆಯೇ ಹೊರತು ನೈಜವಲ್ಲ.
ನಟನೆಯು ನಾಟಕದಲ್ಲಿ ಮೆಚ್ಚುಗೆಗೆ ಪಾತ್ರವಾದರೆ-ಅದು ಭಕ್ತಿಕ್ಷೇತ್ರದಲ್ಲಿ ಅತ್ಯಂತ ಹೇಯವೆನಿಸುತ್ತದೆ.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು