ಬರಬರ ಭಕ್ತಿಯರೆಯಾಯಿತ್ತು ಕಾಣಿರಣ್ಣಾ:
ಮೊದಲ ದಿನ ಹಣೆಮುಟ್ಟಿ, ಮರುದಿನ ಕೈಯ ಮುಟ್ಟಿ
ಮೂರೆಂಬ ದಿನಕ್ಕೆ ತೂಕಡಿಕೆ ಕಾಣಿರಣ್ಣಾ!
ಹಿಡಿದುದ ಬಿಡದಿದ್ದರೆ ಕಡೆಗೆ ಚಾಚುವ;
ಅಲ್ಲದಿದ್ದರೆ ನಡು ನೀರಲ್ಲದ್ದುವ
ನಮ್ಮ ಕೂಡಲಸಂಗಮದೇವ.
Transliteration Barabara bhakti areyāyittu kāṇiraṇṇā:
Modaladina haṇemuṭṭi, marudina kaiya muṭṭi
mūremba dinakke tūkaḍike kāṇiraṇṇā!
Hiḍiduda biḍadiddare kaḍege cācuva;
alladiddare naḍunīraladduva
nam'ma kūḍalasaṅgamadēva.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Look, brothers! in the course of time,
Devotion was reduced to half!
Look, brothers! the first day,
The touching of the brow,
The second, touching of the hand,
The third, a witless nod!
If you persist
In what you have begun
Our Lord Kūḍala Saṅgama
Will lead you to your goal;
If not,
He'll sink you in midstream!
Translated by: L M A Menezes, S M Angadi
Hindi Translation देखो भाई, भक्ति क्रमशः घटती गई;
पहले दिन माथा टेकते हैं
दूसरे दिन हाथ से स्पर्श करते हैं,
तीसरे दिन ऊँघते हैं!
अपने संकल्प पर दृढ रहो,
तो मम कूडलसंगमदेव पार लगायेंगे,
अन्यथा मंझधार में डुबो देंगे ॥
Translated by: Banakara K Gowdappa
Telugu Translation రారాగ భక్తి కొఱయయ్యె కదరా!
తొలుదొల్త తలదా కె; మఱునాడు చేతులకు వచ్చె
మూడవనాటికి మోయ బరువై పోయె;
పట్టినది విడకున్న గట్టుకు చేర్చు
కాదేని నట్టేట పడ ముంచిబోవు
కూడల సంగమ దేవుడు.
Translated by: Dr. Badala Ramaiah
Tamil Translation வரவர பக்தி அருகுவதைக் காணீர்!
முதல்நாள் நெற்றிதொட்டு, மறுநாள் கைதொட்டு,
மூன்றாம் நாள் தலையசைத்து வணங்குதலைக் காணாய்,
கைக் கொண்டதை விடாதொழியின் கரையேற்றுவான்,
இல்லையெனில் நடுநீரிலமிழ்த்துவன் கூடல சங்கம தேவன்.
Translated by: Smt. Kalyani Venkataraman, Chennai
Marathi Translation
प्रत्येक दिवशी भक्तीचा आवेश कमी होत जातो.
प्रथम दिनी ललाटस्पर्शीने दूसरे दिवशी हस्तस्पर्शाने
तिसरे दिवशी पेंगणे सुरु होईल पहा.
प्रतिदिनाची भक्ती सोडली नाही तर पार पडाल.
नाही तर नदीच्या मधेच बुडविल कूडलसंगमदेव.
Translated by Shalini Sreeshaila Doddamani
ಶಬ್ದಾರ್ಥಗಳು ಅರೆ = ; ತೂಕಡಿಕೆ = ತೂಗಡಿಸುವುದು;
ಕನ್ನಡ ವ್ಯಾಖ್ಯಾನ ದಿನಗಳೆದಂತೆಲ್ಲ ಮೊಳೆತು ಚಿಗಿತು ಬಳ್ಳಿವರಿದು ಸಫಲವಾಗುವುದು ನಿಷ್ಠಾವಂತನು ಮಾಡುವ ಭಕ್ತಿ, ನಿಷ್ಠೆಯಿಲ್ಲದವನು ಮಾಡುವ ಭಕ್ತಿ ದಿನದಿಂದ ದಿನಕ್ಕೆ ಕೊರೆಯಾಗಿ ಅರೆಯಾಗಿ ಕಣ್ಮರೆಯಾಗಿ ಹೋಗುವುದು ಬೇಗ ಬೇಗ. ಅನುರಕ್ತಿಯಿಲ್ಲದವನೊಬ್ಬನು ಮಾಡಲಾರಂಭಿಸಿದ ಭಕ್ತಿ ಮೂರು ದಿನದೊಳಗೆ ಹೇಗೆ ಅವನಲ್ಲಿ ಕೇವಲ ಅಂಗಚೇಷ್ಟೆಯಾಗಿ ಉಳಿಯಿತೆಂಬುದನ್ನು ಬಸವಣ್ಣನವರು ಬಹಳ ವಿನೋದವಾಗಿ ವರ್ಣಿಸಿರುವರು : ಅವನು ಮೊದಲನೇ ದಿನ ದೇವರ ಮುಂದೆ ಪೂರ್ಣಶ್ರದ್ಧೆಯಿಂದ-ನೆಲಕ್ಕೆ ಹಣೆ ಮುಟ್ಟುವಷ್ಟು ಮೈಯಿಕ್ಕಿ ತಲೆಚಾಚಿ ನಮಸ್ಕರಿಸಿದ. ಎರಡನೇ ದಿನ ಅರ್ಧಶ್ರದ್ಧೆಯಲ್ಲಿ ಕೈಯಿಂದ ನೆಲ ಮುಟ್ಟುವಷ್ಟು ನಸುಬಾಗಿ ನಮಸ್ಕರಿಸಿದ. ಮೂರನೇ ದಿನ ಅವನಿಗೆ ಶ್ರದ್ಧೆಯೆಲ್ಲಾ ಸೊನ್ನೆಯಾಗಿತ್ತು-ಸೆಟೆದು ನಿಂತೇ ತೂಕಡಿಸಿದವನಂತೆ ತಲೆಯಾಡಿಸಿದ.ಅದು ನಮಸ್ಕಾರವೂ ಅಲ್ಲ, ಭಕ್ತಿಯಿಂದ ಮಾಡಿದ್ದೂ ಅಲ್ಲ, ಅದು ಕೇವಲ ಅಂಗಚೇಷ್ಟೆಯಾಗಿತ್ತು.
ಹೀಗೆ ಭಕ್ತಿವ್ರತವನ್ನು ಒಂದು ಮೂರು ದಿನವೂ ಏಕರೀತಿಯಾಗಿ ಹಿಡಿದು ಮಾಡಲಾಗದಿದ್ದರೆ-ಅವರನ್ನು ಈ ಸಂಸಾರಸಾಗರದ ನಟ್ಟನಡು ಅದ್ದಿಬಿಡುವನು ಶಿವನು-ಪೂರ್ಣಶ್ರದ್ಧಾನ್ವಿತರನ್ನು ಮಾತ್ರ ಆ ತೀರ ಸೇರಿಸುವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು