•  
  •  
  •  
  •  
Index   ವಚನ - 221    Search  
 
ಭಕ್ತನ ಜ್ಞಾನಿಸ್ಥಲ - ವಿನಯ
ಬಿದಿರಲಂದಣವಕ್ಕು, ಬಿದಿರೆ ಸತ್ತಿಗೆಯಕ್ಕು, ಬಿದಿರಲ್ಲಿ ಗುಡಿಯು ಗೂಡಾರವಕ್ಕು; ಬಿದಿರಲ್ಲಿ ಸಕಲಸಂಪದವೆಲ್ಲವು! ಬಿದಿರದವರ ಮೆಚ್ಚ ಕೂಡಲಸಂಗಮದೇವ.
Transliteration Bidiralandaṇavakku, bidire sattigeyakku, bidiralli guḍiyu gūḍāravakku; bidiralli sakalasampadavellavu! Bidiradavara mecca kūḍalasaṅgamadēva.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The bamboo bends to a palanquin pole, The bamboo stands for a sunshade stick; The bamboo does, too, for a mast Of flag or tent: The bamboo can be all your wealth! Our Kūḍala Saṅgama dislikes Those who bend not in humbleness! Translated by: L M A Menezes, S M Angadi
Hindi Translation बाँस से पालकी बनती है, बाँस से छतरी बनती है, बाँस से झंडा उडाते हैं, डेरा डालते हैं, बाँस में सकल संपत्ति है, बाँस सा जो नहीं झुकते उन पर कूडलसंगमदेव प्रसन्न नहीं होते ॥ Translated by: Banakara K Gowdappa
Telugu Translation వంగిపల్లకి మోతు; నిలచి యెండల గాతు; పట్టిగుడి గుడారముల పడనీక నిల్పెదో వెదుర; సంపదలకు నిధాన మీవు; బెదరి వంగిన సంగయ్య మెచ్చునయ్య: Translated by: Dr. Badala Ramaiah
Tamil Translation வெதிரினால் தண்டிகையாம், வெதிரிலே குடையாம், வெதிரினால் கோவில் கூடாரமாம், வெதிரினா லனைத்துச் செல்வமுமாம், வெதிரதவரை நயவான் கூடல சங்கம தேவன். Translated by: Smt. Kalyani Venkataraman, Chennai
Marathi Translation बांबूची पालखी बनते, बांबूचे छत बनते. बांबूचे तंबू बनते. बांबूचे मंदिर बनते, बांबूचे बांबूसम अनेक वस्तू बनतात. बांबूसम वाकावे, बांबूसम वाकावे. बांबूसम न वाकणाऱ्यावर प्रसन्न होत नाही कूडलसंगमदेव Translated by Shalini Sreeshaila Doddamani
ಶಬ್ದಾರ್ಥಗಳು ಅಂದಣ = ಪಲ್ಲಕ್ಕಿ; ಗೂಡಾರ = ಬಟ್ಟೆಯಿಂದ ತಾತ್ಕಾಲಿಕವಾಗಿ ಕಟ್ಟುವ ಮನೆ ಡೇರೆ; ಸತ್ತಿಗೆ = ಛತ್ರಿ, ಕೊಡೆ;
ಕನ್ನಡ ವ್ಯಾಖ್ಯಾನ ಬಿದಿರೆಂಬುದೇನೂ ಮಹಾವೃಕ್ಷವಲ್ಲ-ಹುಲ್ಲುಜಾತಿಗೆ ಸೇರಿದ ಒಂದು ಮೆಳೆಗಿಡ. ಆದರೂ ಆ ಬಿದಿರು ಪಯಣಿಸಲು ಅಂದಣವಾಗುವುದು, ಬಿಸಿಲ ತಾಪವನ್ನು ತಗ್ಗಿಸಲು ಸತ್ತಿಗೆ(ಛತ್ರಿ)ಯಾಗುವುದು, ವಾಸಿಸಲು ಕುಟೀರವಾಗುವುದು, ಪ್ರವಾಸದಲ್ಲಿ ಬೀಡುಬಿಡಲು ಗುಡಾರವಾಗುವುದು. ಹೀಗೆ ಹಲವು ಕಾಲಕ್ಕೆ ಹಲವರಿಗೆ ಅನುಕೂಲ ಮಾಡುವ ಬಿದಿರು ಮಾನವನಿಗೊಂದು ದೊಡ್ಡ ಆದರ್ಶವಾಗಿದೆಯೆನ್ನುವರು ಬಸವಣ್ಣನವರು. ಅವರು ಈ ವಚನದಲ್ಲಿ ಬಿದಿರು ಎಂಬ ನಾಮಪದವನ್ನು ಕ್ರಿಯಾಪದವಾಗಿಯೂ ಬಳಸಿರುವರು : ಬಿದಿರದವರ ಮೆಚ್ಚ ಕೂಡಲ ಸಂಗಮದೇವ-ಎಂದರೆ-ಯಾರು ಬಿದಿರಿನಂತೆ ಸಕಲರಿಗೂ ಸಕಲ ಸಂಪದವಾಗುವುದಿಲ್ಲವೋ-ಅಷ್ಟೇ ಅಲ್ಲ(ಧರ್ಮಕ್ಕೆ) ಹೆದರುವುದಿಲ್ಲವೋ ಅವರನ್ನು ದೇವರು ಮೆಚ್ಚುವುದಿಲ್ಲವೆಂದರ್ಥ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು