•  
  •  
  •  
  •  
Index   ವಚನ - 222    Search  
 
ಭಕ್ತನ ಜ್ಞಾನಿಸ್ಥಲ - ದಾನ-ಧರ್ಮ
ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ, ಬಂಧುಗಳು ಬಂದಾಗಳಿಲ್ಲೆನ್ನ: ಲಿಂಗಕ್ಕೆ ಇಲ್ಲೆಂಬ, ಜಂಗಮಕ್ಕೆ ಇಲ್ಲೆಂಬ, ಬಂದ ಪುರಾತರಿಗೆ ಇಲ್ಲೆಂಬ: ಸಾವಾಗ ದೇಹವ ದೇಗುಲಕ್ಕೊಯ್ಯೆಂಬ, ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ, ಕೂಡಲಸಂಗಮದೇವಾ!
Transliteration Umbāgaḷillenna, uḍuvāgaḷillenna, bandhugaḷu bandāgaḷillenna: Liṅgakke illemba, jaṅgamakke illemba, banda purātarige illemba: Sāvāga dēhava dēgulakke oyyemba, dēvarige heṇa biṭṭi hēḷitte, kūḍalasaṅgamadēvā!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 He does not say he hasn't Whenever he eats; He does not say he hasn't Whenever he clothes; He does not say he hasn't Whenever his kinsfolk come: To Liṅga he says Nay, To Jaṅgama says Nay, And to the Saints who come.. When, dying, he asks to bear His body to the temple, Would the corpse have hired God for no wage, O Kūḍala Saṅgama Lord? Translated by: L M A Menezes, S M Angadi
Hindi Translation खाते समय ‘नाहीं’ नहीं कहता, पहनते समय ‘नाहीं’ नहीं कहता, भाई बंधुओं के आने पर ‘नाहीं’ नहीं कहता; लिंग के लिए ‘नहीं’ कहता, जंगम के लिए ‘नहीं’ कहता, आगंतुक शरणों से ‘नहीं’ कहता, मरते समय अपने शरीर को मंदिर ले जाने के लिए कहता है, शव शिव से बेगारी लेना चाहता है? कूडलसंगमदेव। Translated by: Banakara K Gowdappa
Telugu Translation తినలేద నడు; కట్టలే దనడు చుట్టములకు పెట్టలే దనడు కాని లింగమునకు లేదను; జంగమునకు లేదను; ఆద్యులు రాగలేదు పో పొమ్మనును కడకు కనుమూయుచు; గుడి చేర్పుమని అంగలార్చు; వెట్టిచాకిరి వేడునే శవము కూడల సంగమదేవుని. Translated by: Dr. Badala Ramaiah
Tamil Translation உண்ணற்கு இல்லையெனான், உடுத்தற்கு இல்லையெனான், உற்றார் வரின் இல்லையெனான், இலிங்கத்திற்கு ஈயான், மெய்யடியாருக்கு ஈயான், வந்த பழமை மிக்கோர்க்கு ஈயான், இறப்பின் உடலைக் கோயிலிலே இடு என்பான், இறைவனுக்குப் பிணம் ஊதியமின்றி தொண்டாற்றுமோ கூடல சங்கம தேவனே. Translated by: Smt. Kalyani Venkataraman, Chennai
Marathi Translation खायला कमी करीत नाही, ल्यायला कमी करत नाही. येणाऱ्या पै-पाहुण्यांना कमी करत नाही. लिंगाला देत नाही, जंगमाला देत नाही, आलेल्या प्रमथांना देत नाही. मरताना देहाला देवालयात नेण्यास सांगतात. शवाने कधी देवाची सेवा केली होती कूडलसंगमदेवा ? Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ಜೀವವಿರುವ, ಚೈತನ್ಯವಿರುವ ಸಕಲ ಜೀವರಾಶಿ; ಪುರಾತರು = ಹಿಂದಿನ ಕಾಲದ ಸುಪ್ರಸಿದ್ದ ಭಕ್ತರು;
ಕನ್ನಡ ವ್ಯಾಖ್ಯಾನ ತನಗಾದರೆ ಉಣ್ಣಲುಂಟು ಉಡಲುಂಟು-ಬಂದ ತನ್ನ ಬಂಧುಗಳಿಗೂ ಉಂಟು-ಆದರೆ ಲಿಂಗಕ್ಕೆ ಜಂಗಮಕ್ಕೆ ಶರಣಜನಕ್ಕೆ ಇಲ್ಲವೆಂಬ. ಸಾಯುವ ಸಮಯ ಬಂದಾಗ-ನನ್ನನ್ನು ದೇವಾಲಯಕ್ಕೆ ಒಯ್ಯಿರಿ, ದೇವರ ಸನ್ನಿಧಿಯಲ್ಲಿ ಪ್ರಾಣ ಬಿಡಬೇಕು, ನನ್ನ ದೇಹ ದೇವರಿಗೆ ಮೀಸಲು ಬಿಟ್ಟಿದ್ದೆ ಎನ್ನುವನು. ತಿಂದುಂಡು ಮೆರೆಯುವಾಗ ದೇವರಿಗೆ-ಉದಾಸೀನದಿಂದ ಲೋಭದಿಂದ-ದೂರವಾಗಿದ್ದವನು ಸಾಯುವ ಸಮಯ ಬಂದಾಗ ತನ್ನ ಹೆಣದ ಕಾಣಿಕೆಯನ್ನು ಕೊಟ್ಟು ದೇವರಿಗೆ ಹತ್ತಿರವಾಗಬೇಕೆಂಬುದು ಅದೆಷ್ಟು ವಿಪರ್ಯಾಸ ! ಇಟ್ಟರೆ ಕೊಳೆತು ನಾರುವ, ನಾಯಿನರಿಗೆ ಮಾತ್ರ ತಕ್ಕುದಾದ ತನ್ನ ಹೆಣವನ್ನು ಮಹಾದಾನಿಯಾದ ದೇವರಿಗೆ ಬಿಟ್ಟುಹೋದ ದುರ್ದಾನಿಯವನು. ತನ್ನ ದೇಹವನ್ನು-ಅದರ ಕೌಮಾರ ಮತ್ತು ಯೌವನದ ಅವಧಿಯಲ್ಲಿ ದುರ್ವಿಷಯದಲ್ಲಿ ತೊಡಗಿಸಿದವನು-ಕೊಳೆತು ನಾರುವಾಗ ಅದನ್ನು ಶಿವನಿರ್ಗಪಿಸುವೆನೆನ್ನುವುದು ಅದೆಷ್ಟು ಬೀಭತ್ಸತ್ಯಾಗ !

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು