•  
  •  
  •  
  •  
Index   ವಚನ - 223    Search  
 
ಭಕ್ತನ ಜ್ಞಾನಿಸ್ಥಲ - ದಾನ-ಧರ್ಮ
ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ! ನಾಯ ಹಾಲು ನಾಯಿಗಲ್ಲದೆ, ಪಂಚಾಮೃತಕ್ಕೆ ಸಲ್ಲದಯ್ಯಾ. ನಮ್ಮ ಕೂಡಲಸಂಗನ ಶರಣರಿಗಲ್ಲದೆ ಮಾಡುವ ಅರ್ಥ ವ್ಯರ್ಥ, ಕಂಡಯ್ಯಾ!
Transliteration Pāpiya dhana prāyaścittakkallade satpātrakke salladayyā! Nāya hālu nāyigallade, pan̄cāmr̥takke salladayyā. Nam'ma kūḍalasaṅgana śaraṇarigallade māḍuva artha vyartha, kaṇḍayyā!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The sinner's wealth serves not a worthy cause- Only to expiate his sins! A dog's milk serves only a dog, Not for a five-fold bath. Mark, Sir! The wealth you render any one But our Kūḍala Saṅga's Śaraṇās, Is given in vain! Translated by: L M A Menezes, S M Angadi
Hindi Translation पापी का धन प्रायश्चित के लिए है न कि सत्पात्र के लिए; श्वान का दूध श्वान के लिए है, न कि पंचामृत के लिए; देखो, कूडलसंगमदेव के शरणों के अतिरिक्त औरों को प्रदत्त अर्थ व्यर्थ है ॥ Translated by: Banakara K Gowdappa
Telugu Translation పాపి సొత్తు ప్రాయశ్చిత్తమునకు గాక; సత్పాత్రకు చెల్లదయ్య: కుక్కపాలు కుక్కకుగాక పంచామృతమునకు పనికి రావయ్యా! మా కూడల సంగని శరణులకు గాక అన్యులకు పెట్టు ద్రవ్యము వ్యర్ధమయ్య: Translated by: Dr. Badala Ramaiah
Tamil Translation தீயோன் செல்வம், கழுவாய்க்கன்று, நற்செயலிற்காமோ? நாயின்பால், நாய்க்கன்று, பஞ்சாமிர்தத்திற்காமோ? நம் கூடல சங்கனின் அடியாருக்கன்று ஈட்டும் செல்வம் பயனிலை காணாய், ஐயனே. Translated by: Smt. Kalyani Venkataraman, Chennai
Marathi Translation पापीयांचे धन, प्रायश्चितासाठी सत्य कार्यासाठी, नोहे जाण श्वानियीचे दुध, तिच्या पिल्लासाठी पंचामृतासाठी, नोहे जाण कूडलसंगमदेवा ! तव शरणाविण खर्चिले ते धन, व्यर्थ जाण अर्थ - पाप मार्गाने मिळविलेले धन पापाच्या प्रायश्चिताला कारणीभूत ठरते. म्हणून त्यांचे धन त्यांच्या प्रायश्चितापुरतेच असते. चांगल्या कामासाठी, समाज हितासाठी स्वतःच्या भल्यासाठी किंवा सत्पात्राला उपयोगी पडत नाही. जसे कुत्री चे दूध तिच्या पिलासाठी उपयोगी ठरते. त्याचा पंचामृतासाठी उपयोग नाही. तद्वत आपण आपले धन आपल्या मुलाबाळावर खर्च करतो. त्याच्यासाठी राखून सांभाळून ठेवतो. हे योग्य नाही. आपली कमाई कसलाही उद्देश वा अपेक्षा न ठेवता शरणासाठीच वेचावी. शरणाव्यतिरिक्त खर्च केलेले धन व्यर्थ होय. Translated by Rajendra Jirobe, Published by V B Patil, Hirabaug, Chembur, Mumbai, 1983 पापीचे धन प्रायश्चिता विना सत्कार्यासाठी होत नाही. कुत्र्याचे दूध त्यांच्या पिल्ला विना पंचामृतासाठी नाही. कूडलसंगमदेवाच्या शरणांना विना अर्थ व्यर्थ होईल देवा. Translated by Shalini Sreeshaila Doddamani
Urdu Translation کسی پاپی کی ان گنت دولت نیک کاموںمیںسود مند نہیں وہ پشیماں رہےگا آخرکار جیسےکُتیا کا دودھ پلّے کو کام آتاہے،کوئی اس سےمگر پنج امرت بنا نہیں سکتا اپنی پونجی کواپنی دولت کو کوڈلا سنگما کےشرنوں پر تم نچھاورنہ کرسکوتوسنو ساراسرمایہ رائگاں ہوگا Translated by: Hameed Almas
ಶಬ್ದಾರ್ಥಗಳು ಅರ್ಥ = ಹಣ; ಪಂಚಾಮೃತ = ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪದಿಂದ ಕೂಡಿದ ಅಭಿಷೇಕ; ಪ್ರಾಯಶ್ಚಿತ್ತ = ಪಶ್ಚಾತಾಪ;
ಕನ್ನಡ ವ್ಯಾಖ್ಯಾನ ಪಾಪಿ ಸಂಪಾದಿಸಿದ ಧನ ಮೊತ್ತದಲ್ಲಿ ಎಷ್ಟೇ ಆಗಾಧವಾದುದಾದರೂ-ಅದು ಅವನು ಮಾಡಿದ ಮಹಾಪಾತಗಳ ಪರಿಹಾರಕ್ಕೆ ಕೈಗೊಳ್ಳುವ ಪ್ರಾಯಶ್ಚಿತ್ತದ ವೆಚ್ಚಕ್ಕೆ ಮಾತ್ರ ಬಳಕೆಯಾಗುವಷ್ಟು ನಿಕೃಷ್ಟ. ಆ ಐಶ್ವರ್ಯದ ಒಂದೊಂದು ಕಾಸೂ ಬಡವರ ಮುಗ್ಧರ ಅನಾಥರ ರಕ್ತದಲ್ಲಿ ಕಾದು, ಕಣ್ಣೀರಲ್ಲಿ ನೆಂದುದೆಂದ ಮೇಲೆ ಧರ್ಮಕಾರ್ಯಕ್ಕೆ ಬಳಕೆಯಾಗುವ ಯೋಗ್ಯತೆ ಎಲ್ಲಿದೆ ಅದಕ್ಕೆ ? ಅದು ಕಳ್ಳಿಗೆ ಮಾಂಸಕ್ಕೆ ಕಳ್ಳರಿಗೆ ಹಿಂಸೆಗೆ ಕಾಮಕ್ಕೆ ಕ್ರೌರ್ಯಕ್ಕೆ ವೆಚ್ಚವಾಗಲು ಗಂಟುಗಂಟಾಗಿ ಸಿದ್ಧವಾಗಿರುವುದು. ಹೀಗೆ ದೆವ್ವಕ್ಕೆ ಮೀಸಲಾದುದು ದೇವರಿಗೆ ಸಂದೀತೇ ? ಶರಣರಿಗಿಲ್ಲದ ದೇವರಿಗಿಲ್ಲದ ಈ ದೆವ್ವದ ಹಣ ತನ್ನ ಮೌಲ್ಯವನ್ನು ಉಳಿಸಿಕೊಳ್ಳಲಾರದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು