•  
  •  
  •  
  •  
Index   ವಚನ - 224    Search  
 
ಭಕ್ತನ ಜ್ಞಾನಿಸ್ಥಲ - ಕೀರ್ತಿಶನಿ
ಬಲಿಯ ಭೂಮಿ, ಕರ್ಣನ ಕವಚ, ಖಚರನ ಅಸ್ಥಿ, ಶಿಬಿಯ ಮಾಂಸ ವೃಥಾ ಹೋಯಿತ್ತಲ್ಲಾ! 'ಶಿವಭಕ್ತಿಮತಿಕ್ರಮ್ಯ ಯದ್ ದಾನಂಚ ವಿಧೀಯತೇ! ನಿಷ್ಫಲಂತು ಭವೇದ್ ದಾನಂ ರೌರವಂ ನರಕಂ ವ್ರಜೇತ್' ಇಂತೆಂದುದಾಗಿ, ಕೂಡಲಸಂಗನ ಶರಣರನರಿಯದೆ ಕೀರ್ತಿವಾರ್ತೆಗೆ ಮಾಡಿದವನ ಧನವು ವೃಥಾ ಹೋಯಿತ್ತಲ್ಲಾ!
Transliteration Baliya bhūmi, karṇana kavaca, khacarana asthi, śibiya mānsa vr̥thā hōyittallā! 'Śivabhaktimatikramya yaddānaṁ ca vidhīyatē! Niṣphalaṁ tu bhavēddānaṁ rauravaṁ narakaṁ vrajēt' intendudāgi, kūḍalasaṅgana śaraṇaranariyade kīrtivārtege māḍidavana dhanavu vr̥thā hōyittallā!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Bali's land gift and Karṇas amulet, Khacara's bones and Śibi flesh, Behold! have gone in vain! "The charity made in spite Of Shivabhakti is Unprofitable charity, And he who does it shall attain Terrific hell!" Therefore, The charity made for reputation's sake By one who knoweth not Kūḍala Saṅga's Śaraṇās Behold! is gone in vain! Translated by: L M A Menezes, S M Angadi
Hindi Translation बलि की भूमि, कर्ण का कवच, खचर की अस्थि, शिबि का माँस हाय व्यर्थ हो गये! शिवभाक्ति मतिक्रम्य यद्दानं च विधीयते । निष्फलं तु भवेद्दानं रौरवं नरकं व्रजेत्। अतः कूडल संग के शरणों के बिना जाने किसने कीर्तिवार्ता हेतु धन दिया-,हाय व्यर्थ हुआ॥ Translated by: Banakara K Gowdappa
Telugu Translation బలిభూమి; కర్ణుని కవచము; ఖచరుని ఆస్తి: శిబి మాంసము వృధా చెడిపోయెరా! ‘‘శివభ క్తి మతి క్రమ్య ! యద్ దానంచ విధీయతే నిష్ఫలంతు భవేద్దానం రౌరవం నరకం వ్రజేత్’’. కాన సంగని శరణుల నెఱుగకే యశః పిశాచికై వెచ్చించు వాని ద్రవ్యము వృధా పోవురా! Translated by: Dr. Badala Ramaiah
Tamil Translation பலியின் பூமி கர்ணனின் கவசம் கசரனின் என்பு சிபியின் ஊன் வீணாயிற்றன்றோ! “சிவபக்தி மதிக்ரம்ய யத்தானம் ச விதீயதே! நிஷ்பலம் து பவேத்தானம் ரௌரவம் நரகம் வ்ரஜேத்” இதனால், கூடல சங்கமன் அடியார்க்கன்றி, புகழ்ச்சியின் மாட்டு ஈவோன் செல்வம் வீணாயிற்றன்றோ, Translated by: Smt. Kalyani Venkataraman, Chennai
Marathi Translation बळीची भूमी, कर्णाचे कवच दधीचीच्या अस्थि, शिबिचे मांस किर्ती लालसेत गेले व्यर्थ "शिवभक्तीमतिकमय यददानं च विधी यते निष्फलं तुभववेद्दानं रौखं नरकं व्रजेत् ॥" या कारणें कूडलसंगमदेवा ! तव शरण जाणल्याविण किर्ती लालसेत गेले व्यर्थ अर्थ - चक्रवर्ती बळी यांनी तीन चरण भूमी ( जमीन ) वामन अवतारी विष्णूला दान म्हणून देऊ केली. दोन चरणात त्याचे संपूर्ण राज्य संपले. तिसरा चरण ठेवण्यासाठी भूमी उरली नाही. म्हणून राजाने आपल्या डोक्यावर तो चरण ठेवण्यासाठी विनंती केली. विष्णूने त्याच्या मस्तकावर चरण ठेवताच महादानी बळी जमीनीत गाडला गेला. कर्णाने आपलीच कवच कुंडले किर्तीसाठी दान म्हणून दिल्यामुळे मरण ओढवून घेतले. चक्रवर्ती शिबी रत्नपूरनगरीत राज्यकरीत असें. एके दिवशी ब्रम्हाने कबूतर रुप धारण केले आणि तो महादानी शिबीच्या सिंहासनाखाली येऊन बसला. कबुतराचा पाठलाग करीत विष्णु शिकाऱ्याचे रुप धारण करून आला. राजाला आपली शिकार परत मागितली. राजाने त्या कबुतराच्या रक्षणास्तव आपल्या शरीराचे तेवढेच मांस देऊ केले. आपल्या शरीराचे संपूर्ण मांस देऊनही ते त्या आपल्या कबूतराच्या वजनाइतके होऊ शकले नाही म्हणून त्याला आपले प्राण द्यावे लागले. महात्मा बसवेश्वर या सर्व पुराणातल्या कथेचा आधार देवून पटवून सांगू इच्छितात की कीर्तीसाठी वा लालसेसाठी केलेले दान-धर्म-कर्म स्वतःच्याच अधोगतीला, ऱ्हासाला कारणीभूत ठरते. म्हणून शरण धर्म जाणून घ्यावा, शरणसेवेत धनसंपत्ती वेचावी हीच सद्भक्ति , हाच सदाचार आणि हेच परमेश्वरी प्रसादाचे महाद्वार होय. Translated by Rajendra Jirobe, Published by V B Patil, Hirabaug, Chembur, Mumbai, 1983 बळीची भूमी, कर्णाचे कवच, दधीचीच्या अस्थी, शिबीचे मांस दान दिल्याने व्यर्थ गेले. शिवभक्तीमतिक्रम्य यद्दानं च विधीयते। निष्फलं तु भवेद्दानं रौरवं नरकं व्रजेत्। म्हणून कूडलसंगमदेवाच्या शरणाला जाणल्याविना किर्ती प्रसिध्दीसाठी खर्च केलेले धन व्यर्थ गेले. Translated by Shalini Sreeshaila Doddamani
ಶಬ್ದಾರ್ಥಗಳು ಆಸ್ಥಿ = ಅಸ್ತಿ ; ಕವಚ = ಹೊದಿಕೆ, ಉಕ್ಕಿನ ಅಂಗಿ, ರಕ್ಷಾ ಮಂತ್ರ; ಕೌರ = ; ಖಚರ = ಆಕಾಶದಲ್ಲಿ ಓಡಾಡುವ ಯಕ್ಷ ಮೊದಲಾದ ದೇವತೆಗಳಲ್ಲಿ ಒಂದು ಭೇದ; ಭವ = ಜೀವನ; ವ್ರಜ = ಸಮೂಹ;
ಕನ್ನಡ ವ್ಯಾಖ್ಯಾನ ಶಿವಶರಣರಿಗೆ ಕೊಡುವವರು-ತಮ್ಮದೆಂಬುದೇನಿದೆಯೋ ಅದೆಲ್ಲಾ ಶಿವನದೇ ಎಂದೂ, ಆ ಶಿವನ ಸ್ವತ್ತನ್ನು ಶಿವಸ್ವರೂಪಿಗಳೇ ಆದ ಶಿವಶರಣರಿಗೆ ಒಪ್ಪಿಸುತ್ತಿರುವೆವೆಂದೂ ದಾಸೋಹಂಬುದ್ದಿಯಿಂದ ದಾನ ಮಾಡಬೇಕು. ಹಾಗಲ್ಲದೆ ತಾನು ತನ್ನದೆಂಬ ಅಹಂಕಾರ ಮಮಕಾರದಿಂದ-ವಾರ್ತೆಯಾಗಿ ಪ್ರಕಟವಾಗಲು, ಕೀರ್ತಿಯಾಗಿ ಹಬ್ಬಲು ಸ್ವತ್ತನ್ನೆಲ್ಲ ವಂಚಕರಿಗೆ ಹೊಗಳುಭಟ್ಟರಿಗೆ ಕೊಟ್ಟರೆ ಅದು ದಂಡವಾಗುವುದೆನ್ನುತ್ತ ಬಸವಣ್ಣನವರು ಬಲಿ-ಕರ್ಣ-ಖಚರ-ಶಿಬಿ ಎಂಬ ನಾಲ್ವರು ಪುರಾಣಪ್ರಸಿದ್ಧರ ನಿದರ್ಶನಗಳನ್ನು ಕೊಟ್ಟಿರುವರು, ಬಲಿಯೊಬ್ಬ ರಾಕ್ಷಸರಾಜ-ಅವನು ಇಂದ್ರೈಶ್ವರ್ಯಕಾಮಿ. ಅಂಥವನು ವಾಮನನಿಗೆ ಭೂಮಿಯನ್ನು ಕೊಟ್ಟುದು ಸೊಕ್ಕಿನಿಂದಲೇ ಹೊರತು ಭಕ್ತಿಯಿಂದಲ್ಲ. ಕರ್ಣನು ಇಂದ್ರನಿಗೆ ತನ್ನ ಸಹಜ ಕವಚವನ್ನು ಕತ್ತರಿಸಿಕೊಟ್ಟುದು-ತನ್ನಂಥ ಶೂರನಿಗೆ ಯುದ್ಧ ಕವಚ ಬೇಕಿಲ್ಲವೆಂಬಂಥ ಅಹಂಕಾರದಿಂದಲ್ಲದೆ ಭಕ್ತಿಯಿಂದಲ್ಲ. ಖಚರನೆಂಬವನು ಯಜ್ಞ ಮಾಡುತ್ತಿದ್ದಾಗ-ಬ್ರಾಹ್ಮಣ ವೇಷದಿಂದ ಬಂದು ಬೇಡಿದ ನಾರಾಯಣನಿಗೆ-ಅವನು ತನ್ನ ಮೈಯ ಮೂಳೆಯನ್ನು ಕೊಟ್ಟುದು ಕರ್ಮಕ್ಕಾಗಿಯೇ ಹೊರತು ಭಕ್ತಿಗಾಗಿಯಲ್ಲ. ಮರೆಹೊಕ್ಕವರನ್ನು ಕಾಪಾಡುವ ವ್ರತಹಿಡಿದ ಶಿಬಿಯು ಒಬ್ಬ ರಾಜ. ಅವನು ಇಂದ್ರಾಗ್ನಿ ದೇವತೆಗಳಿಗೆ ಮಾಂಸವನ್ನು ತನ್ನ ಮೈಯಿಂದ ಕತ್ತರಿಸಿಕೊಟ್ಟುದು ಕೂಡ ಕೀರ್ತಿವಾರ್ತೆಗಾಗಿಯೇ ಹೊರತು ಭಕ್ತಿಗಾಗಿಯಲ್ಲವೆಂಬಂತೆ ಈ ವಚನದ ಧಾಟಿಯಿದೆ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು