ಭಕ್ತನ ಜ್ಞಾನಿಸ್ಥಲ - ಅಹಂಕಾರ
ಹತ್ತು ಮತ್ತರದ ಭೂಮಿ, ಬತ್ತುವ ಹಯನು, ನಂದಾದೀವಿಗೆಯ
ನಡೆಸಿಹೆವೆಂಬವರ ಮುಖವ ನೋಡಲಾಗದು;
ಅವರ ನುಡಿಯ ಕೇಳಲಾಗದು.
ಅಂಡಜ, ಸ್ವೇದಜ, ಉದ್ಬಿಜ, ಜರಾಯುಜರೆಂಬ ಪ್ರಾಣಿಗಳಿಗೆ
ಭವಿತವ್ಯವ ಕೊಟ್ಟವರಾರೋ?
ಒಡೆಯರಿಗೆ ಉಂಡಲಿಗೆಯ ಮುರಿದಿಕ್ಕಿದಂತೆ
"ಎನ್ನಿಂದಲೆ ಆಯಿತ್ತು, ಎನ್ನಿಂದಲೆ ಹೋಯಿತ್ತು"
ಎಂಬವನ ಬಾಯಲ್ಲಿ ಮೆಟ್ಟಿ ಹುಡಿಯ ಹೊಯ್ಯದೆ ಮಾಣ್ಬನೆ
ಕೂಡಲಸಂಗಮದೇವ?
Transliteration Hattu mattarada bhūmi, battada hayanu, nandādīvigeya
naḍesihevembavara mukhava nōḍalāgadu;
avara nuḍiya kēḷalāgadu.
Aṇḍaja, svēdaja, udbhija, jarāyujaremba prāṇigaḷige
bhavitavyava koṭṭavarārō?
Oḍeyarige uṇḍaligeya muridikkidante
"ennindale āyittu, ennindale hōyittu"
embavana bāyalli meṭṭi huḍiya hoyyade māṇbane
kūḍalasaṅgamadēva?
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 One hates to see the face
And hear the words
Of those who say
They keep ten roods of land,
A wasting dairy fare,
An ever-burning lamp.
Say, who has given a destiny
To creatures born of egg,
Of sweet, of womb and seed?
Him who repeats
'This is come through me,
This is gone through me,'-
As if breaking a cake
To serve his lord-
Lord Kūḍala Saṅgama must sure
Cast dust in his mouth
As he stamps his foot!
Translated by: L M A Menezes, S M Angadi
Hindi Translation ‘दस बीघा भूमि, दुधारु गाय और
नित्या ज्योति का वचन निभाऊँगा
यों कहनेवालों का मुख देखना नहीं चाहिए;
उन का वचन सुनना नहीं चाहिए ।
अंडज, स्वेदज, उद्भिज, जरायुज
प्राणियों को भवितव्य-किसने दिया?
मालिक को लड्डू तोडकर देने की भाँति
मुझसे ही हुआ, ‘मुझसे ही गया’
कहनेवाले को कुचलकर
मुँह में धूल झोंकना
छोड देंगे, कूडलसंगमदेव?
Translated by: Banakara K Gowdappa
Telugu Translation పది బారల భూమి వట్టి పోయెడి ఆవు;
కల్గెనా నందాదీపము నడిపింతు నను
ఆ ముఖము చూడరాదు; ఆ పలుకు వినరాదు;
అండజ స్వేదజ ఉద్భిజ జరాయుజులను
ప్రాణికోటికి భవితవ్య మిచ్చువా డెవడో?
ఒడయుల కొకరవ యిచ్చినంత
నా చేతనే సాగె నా చేతనే తీరె నను
ఆ నోరు నొక్కి దుమ్ము కొట్టక
మానునే కూడల సంగమ దేవుడు.
Translated by: Dr. Badala Ramaiah
Tamil Translation பத்துக்கோல்நிலம், வற்றாப்பசு, நந்தாவிளக்கினை
அருள்கிறோ மென்போர் முகத்தைக் காணாதீர்,
அவர் மொழியைக் கேளாதீர்,
முட்டை, வியர்வை, தண்மை, கருப்பத்திலாகுமுயிர்க்கு
உயிர்வாழ வழியீந்தோன் யார்?
உடையனுக்கு உருண்டையை விண்டீவதனைய
என்னாலானது, என்னால் போன தென்போர் வாயிலே
துகைத்து, மண்ணையிடாதிருப்பனோ
கூடல சங்கம தேவன்?
Translated by: Smt. Kalyani Venkataraman, Chennai
Marathi Translation
दहा बिघे जमिनी दान दिल्या, दूध- दुभते वाहतो.
नंदादीप सतत तेवत
ठेवतो असे सांगणाराचे तोंड पाहू शकत नाही,
त्यांचे बोलणे ऐकू शकत नाही.
अंडज, स्वेदज, उद्दिज, जरायुज सर्व
प्राण्यांचे भवितव्य कोणी दिले आहे?
मालकाला लाडू देणारा नोकर म्हणतो `
मी बनवितो, मी बिघडवितो.`
अशाच्या तोंडात माती घातल्याशिवाय
राहिल का कूडलसंगमदेव ?
Translated by Shalini Sreeshaila Doddamani
ಶಬ್ದಾರ್ಥಗಳು ಉಂಡಲಿಗೆ = ; ನಂದಾ ದೀವಿಗೆ = ; ಭವಿತವ್ಯ = ; ಮತ್ತರ = ; ಹಯನು = ಹಾಲು ಕೊಡುವ ಹಸ;
ಕನ್ನಡ ವ್ಯಾಖ್ಯಾನ ಈ ಭೂಮಿಯೇ ಅಲ್ಲ-ಭೂಮಿ ಸುತ್ತುವ ಈ ಸೌರವ್ಯೂಹವೆಲ್ಲ ಕಸಕಡ್ಡಿಯೆಂಬಂತೆ ತೇಲುವ ಈ ವಿಶ್ವವಿಸ್ತಾರಕ್ಕೆಲ್ಲ ಒಡೆಯನಾದ ದೇವರಿಗೆ ಕೆಲವರು ಭಕ್ತರು ಹತ್ತು ಎಕರೆ ಭೂಮಿಯನ್ನು ಕೊಟ್ಟೆವೆನ್ನುವರು, ಇಂದು ಕರೆದು ನಾಳೆ ಮಾನಿಸಿಕೊಳ್ಳುವ ಒಂದು ಹಸುವನ್ನು ಬಿಟ್ಟೆವೆನ್ನುವರು. ಆಗಾಗ ಎಣ್ಣೆಯನ್ನು ಹೊಯ್ದರೆ ಮಾತ್ರ ಉರಿಯುವ ಒಂದು ನಂದಾ ದೀವಿಗೆಯನ್ನು ನಡೆಸುವೆವೆನ್ನುವರು. ಹೀಗೆನ್ನುವ ಈ ಜನ ತಮ್ಮಲ್ಲಿ ಸಾವಿರಾರು ಎಕರೆ ಜಮೀನನ್ನು ಇಟ್ಟುಕೊಂಡಿರುವರು, ಅವರ ಕೀಲಾರದಲ್ಲಿ ನೂರಾರು ಹಸುಗಳಿರುವವು, ಅವರ ಮನೆಯಲ್ಲಿ ಹತ್ತಾರು ದೀಪಗಳು ಉರಿಯುತ್ತಿರುವವು.
ಇಂಥವರು ತಮ್ಮಲ್ಲಿರುವುದೆಲ್ಲಾ ತಮ್ಮದೇ ಎಂದೂ, ತಾವೇ ಶಿವನಿಗೆ ಕೊಡಬಲ್ಲೆವೆಂದೂ, ತಮ್ಮಿಂದಲೇ ಶಿವನು ಅನ್ನ, ತುಪ್ಪ ಉಣ್ಣುತ್ತಿರುವನೆಂದೂ, ದೀಪದ ಬೆಳಕಿನಲ್ಲಿರುವನೆಂದೂ ಭಾವಿಸುವುದೊಂದು ತಲೆತಿರುಕತನ, ಇಂಥವನು ಯಾವನಾದರೂ ಹಾಲು ಅನ್ನ ಉಣ್ಣುತ್ತಿದ್ದರೆ-ಅದೆಲ್ಲಾ ಒಡೆಯನಾದ ಶಿವನದೇ ಸ್ವತ್ತು ಎಂದು ತಿಳಿಯಬೇಕು, ಆ ಶಿವನ ಹೆಸರು ಹೇಳಿಯೇ ತನ್ನ ಮನೆಯಲ್ಲಿ ದೀಪ ಹಚ್ಚಬೇಕೆಂದು ತಿಳಿಯಬೇಕು. ನಮಗೇ ಅಲ್ಲ ಅಂಡಜ-ಸ್ವೇದಜ-ಉದ್ಭಿಜ-ಜರಾಯುಜವೆಂಬ ಉಳಿದ ಅನಂತಕೋಟಿ ಜೀವರಾಶಿ ಗಳಿಗೂ ಬುತ್ತಿ ಕಟ್ಟಿಕೊಟ್ಟವನು ಆ ಶಿವನೇ ಆಗಿರುವನೆಂದು ತಿಳಿಯಬೇಕು.
ಇದೊಂದನ್ನೂ ತಿಳಿದು ನೋಡದೆ ಮನೆಯೊಡೆಯನ ರವೆಉಂಡೆಯನ್ನು ಆ ಒಡೆಯನಿಗೇ ಇಡಿಯಾಗಿ ತಟ್ಟೆಯಲ್ಲಿಟ್ಟು ಕೈಂಕರ್ಯದಿಂದ ಕೊಡಲಾರದೆ ಲೋಭಿತನದಿಂದ ಮುರಿದು ಒಂದು ಚೂರನ್ನು ಮಾತ್ರ ಒಡೆಯನಿಗೆ ಕೊಟ್ಟು-ತಾನೇ ಕೊಡುವವ ತನ್ನಿಂದಲೇ ದೇವರ ಸಂಸಾರವೆಲ್ಲಾ ನಡೆಯುತ್ತಿದೆಯೆಂಬಂತೆ ಮದಾಂಧರಾಗಿರಬಾರದು, ದಾಸೋಹಂಭಾವದಿಂದಿರಬೇಕು. ದಾಸೋಹಂಭಾವವಿಲ್ಲದವನನ್ನು ದೇವರು ಶಿಕ್ಷಿಸುವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು