•  
  •  
  •  
  •  
Index   ವಚನ - 226    Search  
 
ಭಕ್ತನ ಜ್ಞಾನಿಸ್ಥಲ - ಡಾಂಭಿಕತೆ
ಅನವರತ ಮಾಡಿಹೆನೆಂದು ಉಪ್ಪರ-ಗುಡಿಯ ಕಟ್ಟಿ ಮಾಡುವ ಭಕ್ತನ ಮನೆಯದು ಅಂದಣಗಿತ್ತಿಯ ಮನೆ. ಸರ್ವಜೀವದಯಾಪಾರಿಯೆಂದು ಭೂತದಯಕಿಕ್ಕುವವನ ಮನೆ ಸಯಿಧಾನದ ಕೇಡು! ಸೂಳೆಯ ಮಗ ಮಾಳವ ಮಾಡಿದರೆ ತಾಯ ಹೆಸರಾಯಿತ್ತಲ್ಲದೆ . ತಂದೆಯ ಹೆಸರಿಲ್ಲಾ, ಕೂಡಲಸಂಗಮದೇವಾ!
Transliteration Anavarata māḍ'̔ihenendu uppara-guḍiya kaṭṭi māḍuva bhaktana maneyadu andaṇagittiya mane. Sarvajīvadayāpāriyendu bhūtadayakikkuvavana mane sayidānada kēḍu! Sūḷeya maga māḷava māḍidare tāya hesarāyittallade. Tandeya hesarillā, kūḍalasaṅgamadēvā!
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The house of a pious man Who builds a lofty fane Proclaiming that he performs Devotions all the time, Is but a house Kept by an ostentatious dame! The house of one who gives Alms to all creatures, to show His kindness to all leaving things, Is only wasting food! When a harlot's son does obsequies, His mother's name appears, And not his father's name, O Kūḍala Saṅgama Lord! Translated by: L M A Menezes, S M Angadi
Hindi Translation निरंतर भक्ति करता हूँ-कहते ऊपर पताका पहरानेवाले भक्त का घर विलासिनी का घर है! ‘सर्वजीव दयालू हूँ’ कहते भूत दया हेतु लिए देनेवाले के घर का धन व्यर्थ है। वेश्या पुत्र श्राद्ध करे, तो माता का नाम होगा, पिता का नहीं कूडलसंगमदेव ॥ Translated by: Banakara K Gowdappa
Telugu Translation అనుదిన మర్చింతునని దివిముట్ట గుడిగట్టు భక్తుని భవనమది అందక త్తె హర్మ్యము! సకలజీవదయాపరుడ నని దయ చాట వడ్డించు వానియిల్లు శాంతికి భంగము! వేశ్యాసుతుడు పెట్టిన శ్రాద్ధము తల్లికే గాని తండ్రికి చెల్లదయ్యా! కూడల సంగమ దేవా! Translated by: Dr. Badala Ramaiah
Tamil Translation யாண்டும் செய்கிறேனென கொடி கட்டிச் செயும் பக்தனின் மனை, அது ஒரு விலைமகளின் மனை எவ்வுயிர்க்கும் அருள்கிறேனென, தனைப்பேணு வோன்மனை மிகுந்த பொருட்கேடன்றோ, விலைமகள் மகன், நீத்தார் கடன் செயின் தாயின் பெயருக்காம் தந்தையின் பெயருக்கல்ல கூடல சங்கம தேவனே. Translated by: Smt. Kalyani Venkataraman, Chennai
Marathi Translation सतत भक्तीसाधनेत राहतो असे म्हणणाऱ्या भक्ताचे घर म्हणजे, खानावळीवालीचे घर आहे. स्वतःला सर्व जीवांचे दयाघन म्हणविणाराची भूतदया व्यर्थ आहे. वेश्यापुत्र श्राध्द करु लागला तर आईचे नाव घेईल. बापाचे नाही कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಅಂದಣಗಿತ್ತಿ = ಬೋಯಿತಿ, ತನ್ನ ಶೃಂಗಾರವನ್ನೇ ಲಕ್ಷಿಸುವವಳು, ಅಂದಗಾರ್ತಿ; ಅನವರತ = ಯಾವಾಗಲು; ಉಪ್ಪರ = ಮೇಲೆ; ಸಯಿದಾನ = ;
ಕನ್ನಡ ವ್ಯಾಖ್ಯಾನ ನಿತ್ಯ (ದಾಸೋಹ) ಸಮಾರಾಧನೆ ಮಾಡುವೆನೆಂದು ಮನೆಯ ಮುಂದೆ ಎತ್ತರವಾಗಿ ಚಪ್ಪರಹಾಕಿಬಂದ ಬಂದ ಸೋಂಬೇರಿಗಳಿಗೆ ಸುಳ್ಳರಿಗೆ ಕಳ್ಳರಿಗೆ ಹಾದರಿಗರಿಗೆ ಹಣವಂತರಿಗೆ ಅವರ ಹೆಂಡಿರು ಮಕ್ಕಳಿಗೆ ಊಟ ಹಾಕಿ ಉಪಚಾರ ಮಾಡಿ ಕಳಿಸುತ್ತಿದ್ದರೆ ಆ ಮನೆ ಒಂದು ಖಾನಾವಳಿಯಂತಾಗಿ-ಎಲ್ಲ ಅವ್ಯವಹಾರದ ಕಾರಸ್ಥಾನವಾಗುವುದು. ಅಲ್ಲಿಗೆ ಸಜ್ಜನರು ಸದ್ಭಕ್ತರು ಯಾರೂ ಬರುವುದಿಲ್ಲ. ಆದರೂ-ಎಲ್ಲ ಜೀವರೂ ತಣಿಯಲೆಂಬುದೇ ಧರ್ಮವೆಂದು ಹುರುಳಿಲ್ಲದ ಮಾತುಗಳನ್ನಾಡುತ್ತ, ತನ್ನ ಅವಿವೇಕವನ್ನೇ ಸಮರ್ಥಿಸಿಕೊಂಡು ತಾನು ಮಾಡುವುದನ್ನೇ ಮುಂದುವರಿಸಿದರೆ ಫಲವೇನು ? ಅದು ಕಾಳುಕಡಿ ಅಕ್ಕಿಬೇಳೆ ಸಂಭಾರದ ಕೇಡೇ ಹೊರತು ಮತ್ತೇನಲ್ಲ. ಇಂಥ ಆರಾಧನೆಗಳನ್ನು ಸೂಳೆಯ ಮಗ ಮಾಡುವ ಮಾಳದ ಹಬ್ಬಕ್ಕೆ ಹೋಲಿಸುತ್ತಾರೆ ಬಸವಣ್ಣನವರು. ಸೂಳೆಯ ಮಗನಿಗೂ ತಂದೆ ಯಾರೆಂದು ತಿಳಿಯದು, ಚಪ್ಪರ ಹಾಕಿ ಮಾಡುವನಿಗೂ ತನ್ನ ತಂದೆ ಶಿವನೆಂದು ತಿಳಿಯದು. ಇಬ್ಬರೂ ಮಾಯೆಯನ್ನು ಮೆರೆಸಿ ಶಿವನನ್ನು ಮರೆಸುವರು. ಲಂದಣಗಿತ್ತಿ : ಅಡುಗೂಳಜ್ಜಿ. ಸಯ(ಯಿ)ದಾನ < ಸಂವಿಧಾನ ! ಲವಾಜಮೆ. ಮಹಳ < ಮಹಾಲಯ : ಪಿತೃಪಕ್ಷ, ಮಾಳ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು