ಕಾಳಾಗ್ನಿ ರುದ್ರನ ಮೇಳಾಪವನರಿಯದವರು
ʼಕಾಳು ಬೇಳೆʼಯೆನುತಿಪ್ಪರಯ್ಯಾ.
ಕಾನನದಡವಿಯಲ್ಲಿ ಕಿಚ್ಚು ಬಾಳುವೆಯಾಗಿ ಮಿಕ್ಕೊಡೆ ಒರಲುವ
ಬಳ್ಳುವಿನಂತಿಪ್ಪರಯ್ಯಾ, ಮನುಜರು ನರವಿಂಧ್ಯದೊಳಗೆ!
ತತ್ಕಾಲಪ್ರೇಮವನರಿಯದೆ ವಿಭವಕೆ ಮಾಡಿದವನ ಭಕ್ತಿ
ಇರುಳು ಸತ್ತಿಗೆಯ ಹಿಡಿಸಿಕೊಂಡಂತೆ
ಕೂಡಲಸಂಗಮದೇವಾ!
Transliteration Kālāgni rudrana mēḷāpavanariyadavaru
ʼkāḷu bēḷeʼyenutipparayyā.
Kānanadaḍaviyalli kiccubāḷuveyāgi mikkoḍe oraluva
baḷḷuvinante ipparayyā, manujaru naravindhyadoḷage!
Tatkālaprēmavanariyade vibhavakke māḍidavana bhakti
iruḷu sattigeya hiḍiyisikoṇḍante
kūḍalasaṅgamadēvā!
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Those who forget
The challenge of Rudra of the Doomsday fire,
Keep saying, 'grain' and 'split grain'.
Like a fox howling when the forest fire
Grows beyond bounds, these men
Dwell in a human waste.
The piety of one
Who does it for vainglorys sake,
Not knowing that such love
Is solely for the time,
Is like a sunshade borne at night,
O Lord Kūḍala Saṅgama!
Translated by: L M A Menezes, S M Angadi
Hindi Translation कालाग्नि रुद्र के मिलन अपरिचित
दानादाल कहते रहते- हैं
दावानल प्रज्वलित हो, तो जैसे सियार
चिल्लाता है वैसे ही नरविंध्य में मनुज
तात्कालिक प्रेम न जानकर
वैभवार्थ आचरित भक्ति
रात में छत्री धराने के समान है
कूडलसंगमदेव॥
Translated by: Banakara K Gowdappa
Telugu Translation కాలాగ్ని రుద్రుని మేళ మెఱుగనివారు
ధనదాన్యము లనుచుండిరయ్యా!
కార్చిచ్చు రేగిన కాన నాంతరమున
మొఱగు నక్కలరీతి మొఱగిరయ్య;
నర వింధ్యమునగల నరులెల్ల సమయోచితం
బెఱుగక విభవంబుకై సల్పువాని
భక్తినిశల గొడుగు పట్టినట్లైపోయె
కూడల సంగమ దేవా!
Translated by: Dr. Badala Ramaiah
Tamil Translation ஊழித்தீக் கடவுளின் பிடியினை யறியார்
அஃறிணைக் பொருட்களனைய ரையனே
அடர்ந்த அடவியிலே தீப்படரின்
பெருங் குரலிலே ஊளையிடும்
நரியனையதாமையனே, மாந்தர் நாரடவியிலே
உரிய நேரத்தில் அன்புடன் ஈயாது
பெருமைக்குச் செய்யும் பக்தி
இருளிலே குடைபிடித்த தனையது
கூடல சங்கம தேவனே.
Translated by: Smt. Kalyani Venkataraman, Chennai
Marathi Translation
कालाग्नी रुद्राचे रहस्य जाणल्याविना
घोरसंकटात सापडले.
अरण्यातील पसरलेल्या अग्निमध्ये
सापडून ओरडणाऱ्या कोल्ह्याप्रमाणे
मानव सर्व नरर्विंद्यमध्ये तळमळती
खरे प्रेम जाणल्याविना वैभव प्रदर्शनाची
भक्ती म्हणजे रात्रीच्यावेळी छत्री
धरण्यासारखे आहे कूडलसंगमदेवा
Translated by Shalini Sreeshaila Doddamani
ಶಬ್ದಾರ್ಥಗಳು ಒರಲು = ಹೇಳು; ಕಾನನ = ಕಾಡು; ಕಾಳಾಗ್ನಿ = ; ಕಿಚ್ಚು = ಬೆಂಕಿ; ನರವಿಂದ್ಯ = ಪಶುಗಳಂತಹ ಜನನರು ವಾಸಿಸುವ (ಗುಡ್ಡಗಾಡಿನಂತಹ ವಾಸಕ್ಕೆ ಕಷ್ಟಕಾರವಾದ) ಸ್ಥಾನ; ಬಳ್ಳು = ; ಮೇಳ = ಸಮೂಹ, ಸಂದಣಿ; ರುದ್ರ = ಶಿವ; ವಿಭವ = ವೈಭವ ಸಂಪತ್ತು; ಸತ್ತಿಗೆ = ಛತ್ರಿ;
ಕನ್ನಡ ವ್ಯಾಖ್ಯಾನ ವಿಂಧ್ಯವೆಂದರೆ ಕಾಡುಮೇಡು ತುಂಬಿರುವ ಪರ್ವತಪ್ರದೇಶ. ಅದು ಕಾಡುಪ್ರಾಣಿಗಳ ತವರು, ಕಳ್ಳಕಾಕರ ಬೀಡು ಕೂಡ. ನರವಿಂಧ್ಯವೆಂದರೆ ಕಾಡುಮೇಡಿಲ್ಲದೆ ಕಾಡುಪ್ರಾಣಿಗಳಿಲ್ಲದೆ ಮುಗ್ಧಜನರಿರುವ ಅವರಿಗೆ ಹತ್ತುಪಟ್ಟು ಕಳ್ಳಕಾಕರೇ ತುಂಬಿರುವ ಊರು ನಗರ ಪಟ್ಟಣಪ್ರದೇಶ. ಇಂಥ ನರವಿಂಧ್ಯದಲ್ಲಿ ಮನೆಗೆ ಶಿವಭಕ್ತರು ಬಂದರೆ ಅವರನ್ನು ಪ್ರೀತಿಯಿಂದ ಕಾಣಬೇಕು ಜನರು-ತಮ್ಮಲ್ಲಿರುವುದನ್ನು ಕಾಲೋಚಿತವಾಗಿ ನೀಡಿ ಉಪಚರಿಸಬೇಕು. ಯಾರಿಂದಲೂ ಇದಕ್ಕಿಂತ ಹೆಚ್ಚಿನದೇನನ್ನೂ ನಿರೀಕ್ಷಿಸುವುದಿಲ್ಲ ಶಿವಭಕ್ತರು. ಆದರೂ ಜನ ಸೇವಾಮಾರ್ಗದಲ್ಲಿ ಸರಳತೆಯನ್ನು ಅಳವಡಿಸಿಕೊಂಡರೆ ಘನತೆ ಬರುವುದಿಲ್ಲವೆಂದು-ಸೂಳೆಯ ಮಗ ಮಾಳದ ಮಾಡಿದಂತೆ ಬರೀ ಬಡಾಯಿಗೆ ಮಾಡುವರು, ಅಲ್ಲಿ ಕಳ್ಳಕಾಕರು ಸಂತೆ ಸೇರುವರು, ಇದು ಇರುಳಲ್ಲಿ ಕೊಡೆ ಹಿಡಿಸಿಕೊಂಡಂತೆ ಅವಿವೇಕದ ತಲೆತಿರುಕತನವಷ್ಟೆ.
ಇಂಥವರು ವ್ಯರ್ಥವಾದ ಸಡಗರದಲ್ಲಿ ಆಯುರ್ಮಾನವನ್ನು ಕಳೆಯುತ್ತ-ಸಾವು ಧುತ್ತೆಂದು ಎದುರಿಗೆ ಬಂದು ನಿಂತಾಗ-ಬೆಂಕಿ ಬಿದ್ದ ಕಾಡಿನಲ್ಲಿ ದಿಕ್ಕುಗಾಣದೆ ಊಳಿಡುವ ನರಿಯಂತೆ ಹೃದಯವಿದ್ರಾವಕವಾಗಿ ಗೊಳೋ ಎಂದು ಗೋಳಾಡುವರು. ಆಗ ಅವರ ಮೊರೆಯನ್ನು ಕೇಳಲು ದುಂದಿಂದ ಪುರಸ್ಕ್ರತರಾದವರಾರೂ ಇರುವುದಿಲ್ಲ-ತಿರಸ್ಕ್ರತನಾದ ಶಿವನು ಕೈಲಾಸದಲ್ಲಿರುವನು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು