ಹರಸಿ ಮಾಡುವುದು ಹರಕೆಯ ದಂಡ,
ನೆರಹಿ ಮಾಡುವುದು ಡಂಭಿನ ಭಕ್ತಿ.
ಹರಸಬೇಡ, ನೆರಹಬೇಡ
ಬಂದ ಭರವನರಿದರೆ ಕೂಡಿಕೊಂಡಿಪ್ಪ
ನಮ್ಮ ಕೂಡಲಸಂಗಮದೇವ.
Transliteration Harasi māḍuvudu harakeya daṇḍa,
nerahi māḍuvudu ḍambina bhakti.
Harasa bēḍa, neraha bēḍa
banda baravanaridare kūḍikoṇḍippa
nam'ma kūḍalasaṅgamadēva.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 Devotion for an end
Is but a waste of vows!
Devotion in a crowded place
Is but a vain display.
Do not be pious for an end,
Nor pray before a crowd;
Our Lord Kūḍala Saṅgama
Will clasp you if he knows
The ardour springing in you.
Translated by: L M A Menezes, S M Angadi
Hindi Translation सकाम भक्ति व्रत का भंग है
भीड में आचरित भक्ति दांभिक है;
फलापेक्षा कामना मत करो, भीड़ मत जमाओ,
आने का उत्साह जानने पर
कूडलसंगमदेव अपनाएँगे ॥
Translated by: Banakara K Gowdappa
Telugu Translation కోరి కొలుచుట ముడుపుకు ముప్పు;
కూడి భజియించుట డంబపు భక్తి;
కోరకు రా; కూడకురా;
కూడిన పుట్టు వెఱిగిన కూడుకొనురా
కూడల సంగమ దేవుడు.
Translated by: Dr. Badala Ramaiah
Tamil Translation வேண்டிக் கொண்டு செய்வது வேண்டுதலின் கேடு
கூடிக் கொண்டு செய்வது பகட்டு பக்தி,
வேண்டாதீர், கூடாதீர்,
வந்தவரவினையறிந்து செயின் கூடுவனன்றோ,
நம் கூடல சங்கம தேவன்.
Translated by: Smt. Kalyani Venkataraman, Chennai
Marathi Translation
प्रदर्शन करून केलेली भक्ती परिज्ञानाची हानी आहे.
प्रदर्शनाची भक्ती ढोंगी भक्ती आहे.
नवस नको, प्रदर्शन नको.
आलेल्या जंगमाचा आदर करता
कूडलसंगमदेव जवळ घेईल.
Translated by Shalini Sreeshaila Doddamani
ಶಬ್ದಾರ್ಥಗಳು ಡಂಬು = ; ನೆರಹಿ = ಸೇರು, ಕೂಡು; ಹರಕೆ = ಶುಭವನ್ನು ಕೋರುವುದು, ದೇವರಲ್ಲಿ ಪ್ರಾರ್ಥನೆ;
ಕನ್ನಡ ವ್ಯಾಖ್ಯಾನ ಹರಸಿ ಮಾಡುವುದು ಹರಕೆಯ ದಂಡ : ದೇವರ ಮುಂದೆ ನಿಂತು-ದೇವರೇ ನನಗೆ ಈ ಕೆಲಸ ನೆರವೇರಿದರೆ ನಿನಗೆ ಈ ಸೇವೆ ಮಾಡುತ್ತೇನೆ ಎಂದು ಹರಸಿಕೊಂಡು ಅರ್ಪಿಸಿದರೆ ಅದು ಶಿವಾರ್ಪಣೆಯಾಗದೆ ಹರಸಿಕೊಂಡ ಹರಕೆಗೆ ಕೊಟ್ಟ ದಂಡವಾಗುತ್ತದೆ.
ನೆರಹಿಮಾಡುವುದು ಡಂಬಿನ ಭಕ್ತಿ : ಶಿವರಾತ್ರಿ ಬಂತು-ತೆಂಗಿನಕಾಯಿ, ಅಡಕೆ,ಬೆಲ್ಲ,ಗೋಧಿ,ಜೇನು,ದ್ರಾಕ್ಷಿ, ಖರ್ಜೂರ, ಬೇಳೆ ಅಕ್ಕಿ ಅವಲಕ್ಕಿ ಎಂದು ಹಲವು ಹತ್ತು ಸಾಮಾಗ್ರಿಗಳನ್ನು ಕಾಲದಿಂದ ಕಾಲಕ್ಕೆ ಕೂಡಿಟ್ಟುಕೊಂಡು, ಹಬ್ಬದ ದಿನ ಅದೆಲ್ಲವನ್ನೂ ಜನರ ಮುಂದೆ ಧಾಂ ಧೂಂ ಖರ್ಚುಮಾಡಿದರೆ ಡಂಬಾಚಾರ ವಾಗುವುದೇ ಹೊರತು ಸದಾಚಾರವಾಗುವುದಿಲ್ಲ.
ಪೂಜೆಯೆಂದರೆ ಏನನ್ನಾದರೂ ನಿರೀಕ್ಷಿಸಿ ಮಾಡುವುದೂ ಅಲ್ಲ, ಕೂಡಿಟ್ಟು ಚೆಲ್ಲುವುದೂ ಅಲ್ಲ, ಶಿವಭಕ್ತರು ಬಂದಾಗ ಅವರೊಂದಿಗೆ ನಿಜಾಯತಿಯಿಂದ ಬೆರೆತರೆ ಸಾಕು.
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು