ಭಕ್ತನ ಜ್ಞಾನಿಸ್ಥಲ - ಸಿರಿ-ಸಂಪತ್ತು
ಹಡೆದೊಡವೆ-ವಸ್ತುವನು ಮೃಡಭಕ್ತರಿಗಲ್ಲದೆ
ಕಡಬಡ್ಡಿಯ ಕೊಡಲಾಗದು.
ಬಂದರೊಂದು ಲೇಸು, ಬಾರದಿದ್ದರೆರೆಡು ಲೇಸು!.
ಅಲ್ಲಿದ್ದರೆಯೂ ಲಿಂಗಕ್ಕೆ ಬೋನ;
ಇಲ್ಲಿದ್ದರೆಯೂ ಲಿಂಗಕ್ಕೆ ಬೋನ.
ಲಿಂಗದೊಡವೆ ಲಿಂಗಕ್ಕೆ ಸಾರಿತ್ತಾಗಿ
ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ.
ಇದುಕಾರಣ ಕೂಡಲಸಂಗಮದೇವಾ,
ನಿಮ್ಮ ಶರಣರಿಗಲ್ಲದೆ, ಕಡಬಡ್ಡಿಯ ಕೊಡಲಾಗದು.
Transliteration Haḍedoḍave-vastuvanu mr̥ḍabhaktarigallade
kaḍabaḍḍiya koḍalāgadu.
Bandarondu lēsu, bāradiddaḍeraḍu lēsu.
Alliddareyū liṅgakke bōna;
illiddareyū liṅgakke bōna.
Liṅgadoḍave liṅgakke sārittāgi
bandittemba pariṇāmavilla, bārademba duḥkhavilla.
Idukāraṇa kūḍalasaṅgamadēvā,
nim'ma śaraṇarigallade, kaḍabaḍḍiya koḍalāgadu.
Manuscript
Transcription of Tamil Mss in the Paris National Libray (1780 AD)
Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The goods and chattels you have got,
Do neither lend nor hire
Except to Śiva's devotees.
It's well if they return,
If not, it's twice as well!
If it is there, it's Liṅga's food;
And Liṅga's food if here.
If what is Liṅga's goes to It,
There is no joy that it is come,
No sorrow that it is not come...
Therefore, let nought be lent or hired
To any but Śiva's devotees,
O Kūḍala Saṅgama Lord!
Translated by: L M A Menezes, S M Angadi
Hindi Translation अर्जित आभरण शिवभक्तों के सिवा
औरों को उधार या सूद पर नहीं देना चाहिए,
आये तो अच्छा है, न अये तो और अच्छा है
वहाँ रहने पर भी लिंग भोग है ।
यहाँ रहने पर भी लिंग भोग है ।
लिंग की वस्तु लिंग को प्राप्त हुई
आने पर हर्ष नहीं, न आने पर दुःख नहीं
अतः कूडलसंगमदेव, तव शरणों को छोड
औरों को उधार या सूद पर नहीं देना चाहिए ॥
Translated by: Banakara K Gowdappa
Telugu Translation శివుడిచ్చు సంపద శివభ క్తులకు గాక;
వడ్డికై యిచ్చుట పాడి కాదు;
వచ్చెనా ఒకటి రాకున్న రెండు;
లింగమున కటనున్న బోనమే
లింగమున కిటనున్న బోనమే
శివుని సొమ్ము శివునకే సరిjైున
వచ్చునను పరిణామము లేదు;
రాదను దుఃఖము లేదు; సంగా
యీ కారణమున మీ శరణులకు గాక
వడ్డికై ద్రవ్యంబు నొడ్డనయ్య!
Translated by: Dr. Badala Ramaiah
Tamil Translation உழைத்தீட்டிய உடைமைதனைச் சிவபக்தருக்கன்றி
மிகுந்த வட்டிக்கு ஈயலாகாது
வரின் ஒன்றிற்கு நன்று வாராதிருப்பின் இரண்டிற்கு நன்று.
அங்கிடினும் இலிங்கத்திற்கமுது, இங்கிடினும் இலிங்கத்திற்கமுது
இலிங்கத்துடைமை இலிங்கத்தைச் சார்ந்ததால்
வந்ததென உவகையுமிலை, வரவில்லையென இன்னலுமிலை,
இதனால் கூடல சங்கம தேவனே
உம் அடியாருக்கன்றி, மிகுந்த வட்டிக்கு ஈயலாகாது.
Translated by: Smt. Kalyani Venkataraman, Chennai
Marathi Translation
आपले धन, वस्तू लिंगदेवाच्या
भक्ताविना व्याजाने, उसने देऊ नये.
परत आले तर चांगले, न आले तरीही चांगलेच.
तेथेही ते लिंगदेवाला अर्पण समजावे.
येथेही ते लिंगदेवाला अर्पण समजावे.
लिंगदेवाची वस्तू लिंगदेवाला अर्पण झाली.
आली म्हणून सुख नाही, न आल्याचे दुःख नाही. म्हणून
कूडलसंगमदेवाच्या शरणा विना व्याजाने, उसने देऊ नये.
Translated by Shalini Sreeshaila Doddamani
ಶಬ್ದಾರ್ಥಗಳು ಒಡವೆ = ಆಭರಣ; ಕಡಬಡ್ಡಿ = ; ಪರಿಣಾಮ = ತೃಪ್ತಿ ಶಾಂತಿ; ಬೋನ = ಅನ್ನ, ಆಹಾರ; ಮೃಡ = ಶಿವ; ಲೇಸು = ಒಳ್ಳಯದು;
ಕನ್ನಡ ವ್ಯಾಖ್ಯಾನ ಬಡ್ಡಿಗೆ ಸಾಲ ಕೊಡಬೇಕಾದರೆ ಶಿವಭಕ್ತರಿಗೆ ಮಾತ್ರ ಕೊಡಿ ಎಂಬ ಮಾತು ಧರ್ಮವಾಕ್ಯದಂತೆ ಕಂಡರೆ-ಅದು ಒಬ್ಬ ಜಾತಿವಾದಿಯಾದ ಲೇವಾದೇವಿಯವನ ಧರ್ಮವೇ ಹೊರತು ಬಸವಣ್ಣನವರ ಧರ್ಮವಲ್ಲ. ಶಿವಭಕ್ತರು ಸರಳವಾದ ಜೀವನ ನಡೆಸಬೇಕು, ಸರಳವಾದ ಆಚಾರವಿಚಾರವುಳ್ಳವರಾಗಿರಬೇಕು ಎಂಬುದು ಬಸವಣ್ಣನವರ ಸಂದೇಶವಾಗಿರುವಾಗ ಸಾಲ ಮಾಡಿ ಇನ್ನೊಬ್ಬರ ಹಂಗಿನಲ್ಲಿ ಬದುಕಬಹುದೆಂಬಂಥ ಪರಿಸ್ಥಿತಿಯನ್ನುಂಟುಮಾಡುವ ಈ ವಚನ ನಿಜವಚನವಲ್ಲ. (ನೋಡಿ ವಚನ 889).
- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು