•  
  •  
  •  
  •  
Index   ವಚನ - 230    Search  
 
ಭಕ್ತನ ಜ್ಞಾನಿಸ್ಥಲ - ಜಂಗಮ
ಓಡಲಾರದ ಮೃಗವು ಸೊಣಗಂಗೆ ಮಾಂಸವ ಕೊಡುವಂತೆ ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ, ಹಿರಿಯರು ನರಮಾಂಸವ ಭುಂಜಿಸುವರೆ? ತನುವುಕ್ಕಿ ಮನವುಕ್ಕಿ ಮಾಡಬೇಕು ಭಕ್ತಿಯ ಮಾಡಿಸಿಕೊಳ್ಳಬೇಕು ಜಂಗಮ, ಕೂಡಲಸಂಗಮದೇವಾ.
Transliteration Ōḍalārada mr̥gavu soṇagaṅge mānsavakoḍuvante māḍalāgadu bhaktanu, koḷalāgadu jaṅgama, hiriyaru naramānsava bhun̄jisuvare? Tanuvukki manavukki māḍabēku bhaktiya māḍisikoḷḷabēku jaṅgama, kūḍalasaṅgamadēvā.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 The pious must not give Nor Jaṅgama receive Even as the deer that cannot run Gives of its flesh to the hound... Do the Great Ones eat human flesh? Devotion must be given, Jaṅgama must receive it too With overfolwing body and mind, O Kūḍala Saṅgama Lord! Translated by: L M A Menezes, S M Angadi
Hindi Translation दौड़ने में अशक्त मृग जैसे श्वान को माँस देता है, वैसे न भक्त को देना चाहिए न जंगम को लेना चाहिए । बडे लोग नर माँस का भक्षण करते हैं? तन, मन के उत्साह से भक्ति करनी चाहिए , जंगम को करा लेनी चाहिए, कूडलसंगमदेव ॥ Translated by: Banakara K Gowdappa
Telugu Translation ఉరకలేని మృగము కుక్కలకు మాంసమగు రీతి; భక్తుడీరాదు జంగము డందరాదు; గురువులు నరమాంసమును తిందురే? మది పొంగ దేహ ముబ్బ చేయవలె భక్తుడు చేయించుకొనవలె జంగముడు సంగమదేవా! Translated by: Dr. Badala Ramaiah
Tamil Translation ஓடலாகாவிலங்கு நாய்க்கு ஊனினை ஈவது போல பக்தன் செய்யலாகாது, மெய்யடியான் கொள்ளலாகாது சான்றோர் நரஊனினை உண்பரோ? உடல் நிறைந்து, மனம் நிறைந்து பக்தன் செயல் வேண்டும். செய்வித்துக் கொளல் வேண்டும் மெய்யடியான் கூடல சங்கம தேவனே. Translated by: Smt. Kalyani Venkataraman, Chennai
Marathi Translation पळण्यात असमर्थ मृग कुत्र्याची शिकार होतो. त्याप्रमाणे भक्ताबरोबर जंगमाने वागू नये. थोरांनी नरमांस खावे का ? भक्ताने तन-मन भरुन भक्ती करावी. अशी भक्ती करवून घ्यावी जंगमानी कूडलसंगमदेवा. Translated by Shalini Sreeshaila Doddamani
ಶಬ್ದಾರ್ಥಗಳು ಜಂಗಮ = ಓಡಾಡುವ ಚಲಿಸುವ; ನರ = ಮನುಷ್ಯ; ಭುಂಜಿಸು = ಸೇವಿಸು; ಸೊಣಗ = ನಾಯಿ;
ಕನ್ನಡ ವ್ಯಾಖ್ಯಾನ ಜಂಗಮರು ಭಕ್ತರ ಹಿತಕ್ಕಾಗಿ ಸದಾಕಾಲ ಸಂಚರಿಸುತ್ತ, ಆ ಭಕ್ತರು ಕೊಟ್ಟ ಧನವನ್ನು ಅದೇ ಭಕ್ತರ ಸಾಮೂಹಿಕ ಯೋಜನೆಗಳಿಗಾಗಿ ಬಳಸುವರಾಗಿ-ಅವರಿಗೆ ಭಕ್ತರು ತನು ಉಕ್ಕಿ ಮನ ಉಕ್ಕಿ ಮಾಡಬೇಕು. ಬಲಾತ್ಕಾರಕ್ಕೆ ಒಳಗಾಗಿ ಮಾಡುವುದು ಲಕ್ಷಣವಲ್ಲ. ಜಂಗಮರಾದರೂ ಜಂಗಮದಾಸೋಹದ ಹೆಸರಿನಲ್ಲಿ ಭಕ್ತರನ್ನು ಹಿಂಸಿಸಬಾರದು. ನಾಯಿ ಮೃಗವೊಂದನ್ನು ಆಟ್ಟಿಬರುವುದು-ಓಡುವಷ್ಟೂ ಓಡಿ-ಇನ್ನು ಓಡಲಾರೆನೆಂದಾಗ ಆ ಮೃಗ ಆ ನಾಯಿ ಬಾಯಿಗೆ ಮಾಂಸವಾಗುವುದು. ಅಲ್ಲಿಗೆ ವ್ಯವಹಾರ ಮುಗಿಯಿತು. ಕಾಡಿನಲ್ಲಿ ಮೃಗ ಕೊಡುವುದೆಂಬ, ನಾಯಿ ಸ್ವೀಕರಿಸುವುದೆಂಬ ಮಾತೇ ಇಲ್ಲ. ಅಲ್ಲಿ ಬಲವೇ ಧರ್ಮ ! ಈ ಮಾನವಜೀವನದಲ್ಲೇನು ಧರ್ಮ ? ಹೃದಯವಂತಿಕೆಯಲ್ಲವೆ ? ನಾಯಿ ಮೃಗಮಾಂಸವನ್ನು ತಿಂದಂತೆ ಶಿವಸ್ವರೂಪಿಯೆನಿಸುವ ಜಂಗಮ ಭಕ್ತರನ್ನು ಹಿಂಸಿಸಿ ನರಭಕ್ಷಕನಾಗಬಾರದು.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು