•  
  •  
  •  
  •  
Index   ವಚನ - 231    Search  
 
ಭಕ್ತನ ಜ್ಞಾನಿಸ್ಥಲ - ನೇಮ
ಬಂದುದ ಕೈಕೊಳ್ಳಬಲ್ಲರೆ ನೇಮ, ಇದ್ದುದ ವಂಚನೆ ಮಾಡದಿದ್ದರೆ ಅದು ನೇಮ; ನಡೆದು ತಪ್ಪದಿದ್ದರೆ ನೇಮ, ನುಡಿದು ಹುಸಿಯದಿದ್ದರೆ ನೇಮ. ನಮ್ಮ ಕೂಡಲಸಂಗನ ಶರಣರು ಬಂದರೆ ಒಡೆಯರಿಗೊಡವೆಯನೊಪ್ಪಿಸುವದೇ ನೇಮ.
Transliteration Banduda kaikoḷḷaballare nēma, idduda van̄caneya māḍadiddare adu nēma; naḍedu tappadiddare nēma, nuḍidu husiyadiddare nēma. Nam'ma kūḍalasaṅgana śaraṇaru bandare oḍeyarigoḍaveyanoppisuvude nēma.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 To undertake whate'er is come, That is a vow Not to dissemble what one has, That is a vow. Not to fail in deed, That is a vow. Not to betray the word you said, That is a vow. And when our Kūḍala Saṅga's Śaraṇās come, To yield to the Master what you have, That is vow. Translated by: L M A Menezes, S M Angadi
Hindi Translation प्राप्त वस्तु स्वीकार करना नियम है, जो हो उससे वंचित न करना नियम है, आचरण से न चूकना नियम है, वचन से विमुख न होना नियम है, मम कूडलसंग के शरण आ जायँ, तो प्रभुओं की वस्तु उन्हें समर्पित करना नियम है ॥ Translated by: Banakara K Gowdappa
Telugu Translation వచ్చినది అంద నేర్చు టేవ్రతము ఉన్నది వంచనలేక యిచ్చు టేవ్రతము నడత తప్పకుండుటే వ్రతము; పల్కి బొంకనిదే వ్రతము సంగని శరణులు వచ్చిన ఒడయుల కొడవుల మెప్పించుటే వ్రతము. Translated by: Dr. Badala Ramaiah
Tamil Translation வந்ததைக் கைக்கொள்ளலே நன்னெறி, இருந்ததை ஏய்க்காமலிருப்பதே நன்னெறி நெறியொழுகித் தவறாதிருப்பின் அது நன்னெறி சொல்லிப் பொய்யாதிருப்பது மேலான நெறி நம் கூடல சங்கனின் மெய்யடியார் வரின் உடையருக்கு உடைமையினை ஒப்படைப்பதே நன்னெறி. Translated by: Smt. Kalyani Venkataraman, Chennai
Marathi Translation जे येते त्याला संभाळून नेणे हा नियम. जे आहे ते न लपविणे हा नियम. आचरणात न चुकणे हा नियम बोलण्यात न चूकणे हा नियम. कूडलसंगाचे शरण मालक होऊन येता. त्यांना संपत्ती अर्पण करणे हा नियम. Translated by Shalini Sreeshaila Doddamani
ಶಬ್ದಾರ್ಥಗಳು ಒಡವೆ = ಆಭರಣ; ನೇಮ = ನಿಯಮ; ವಂಚನೆ = ಮೋಸ; ಹುಸಿ = ಸುಳ್ಳು;
ಕನ್ನಡ ವ್ಯಾಖ್ಯಾನ ನೇಮವೆಂದರೆ ನಿಯಮ. ಶಿವಭಕ್ತನು ತನ್ನ ದಿವ್ಯಜೀವನದ ಸಾಧನವಾಗಿ ಕೆಲವು ನಿಯಮಗಳನ್ನು ಪಾಲಿಸುತ್ತಾನೆ. ಅಂಥ ನಿಯಮಗಳಲ್ಲಿ ಕೆಲವು ಆಹಾರನಿಯಮವೂ ಆಗಿರಬಹುದಷ್ಟೆ. ಆದರೆ ಅದನ್ನು ತಿನ್ನಬೇಕು, ಇದನ್ನು ತಿನ್ನಬಾರದೆಂಬುದಷ್ಟೇ ನೇಮವಾಗುವುದಿಲ್ಲ. ದಿವ್ಯಜೀವನ ನಡೆಸಲು ಪಾಲಿಸಬೇಕಾದ ನಿಯಮಗಳಲ್ಲಿ ಕೆಲವನ್ನು ಬಸವಣ್ಣನವರು ಈ ವಚನದಲ್ಲಿ ಕೊಟ್ಟಿರುವರು: ಬಂದುದನ್ನು ಕಷ್ಟವಾಗಲಿ ಸುಖವಾಗಲಿ ಶಿವಪ್ರಸಾದವೆಂದು ಸ್ವೀಕರಿಸಬೇಕು. ತನ್ನಲ್ಲಿರುವುದನ್ನು ವಂಚನೆಯಿಲ್ಲದೆ ಹಂಚಿ ತಿನ್ನಬೇಕು, ಹಿಡಿದ ಕೆಲಸ ನಡೆಯಬೇಕು, ಆಡಿದ ಮಾತು ನಡೆಯಬೇಕು. ತನ್ನದೆಂಬುದೇನೆಲ್ಲವಿದೆಯೋ ಅದನ್ನೆಲ್ಲ ಶಿವನ ಸ್ವತ್ತೆಂದು ಶಿವಶರಣರಿಗೆ ಸಮರ್ಪಿಸಬೇಕು. (ಶಿವಕೊಟ್ಟುದನ್ನು ಶಿವಶರಣರು ಬಂದು ಕೇಳಿದಾಗ-ಶಿವನೇ ಕೇಳುತ್ತಿರುವನೆಂದು ಒಪ್ಪಿಸಬೇಕೆಂಬುದು ಈ ಕೊನೆಯ ನಿಯಮದ ಅರ್ಥ). ಇದು ನೇಮವೇ ಹೊರತು ನಾನು ಈರುಳ್ಳಿ ತಿನ್ನುವುದಿಲ್ಲ ಸೇಬು ತಿನ್ನುತ್ತೇನೆಂಬಂಥದು ನೇಮವಲ್ಲ.

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು