•  
  •  
  •  
  •  
Index   ವಚನ - 232    Search  
 
ಭಕ್ತನ ಜ್ಞಾನಿಸ್ಥಲ - ನೇಮ
ಹಾಲ ನೇಮ, ಹಾಲ ಕೆನೆಯ ನೇಮ: ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ; ಬೆಣ್ಣೆಯ ನೇಮ, ಬೆಲ್ಲದ ನೇಮ! ಅಂಬಲಿಯ ನೇಮದವರನಾರನೂ ಕಾಣೆ; ಕೂಡಲಸಂಗನ ಶರಣರಲ್ಲಿ ಅಂಬಲಿಯ ನೇಮದಾತ ಮಾದಾರ ಚೆನ್ನಯ್ಯ.
Transliteration Hāla nēma, hāla keneya nēma: Kene tappida baḷika kiccaḍiya nēma; beṇṇeya nēma, bellada nēma! Ambaliya nēmadavaranāranū kāṇe; kūḍalasaṅgana śaraṇaralli ambaliya nēmadāta mādāra cennayya.
Manuscript
Transcription of Tamil Mss in the Paris National Libray (1780 AD) Discovered and Transcribed by Dr Shivamurthy Shivacharya Mahaswamiji, Sirigere, in the year 1985
English Translation 2 A vow of milk, a vow of cream; A vow of pudding when cream fails; A vow of butter, vow of jaggery! But nobody have I seen Who takes a gruel vow... Of Kūḍala Saṅga's Śaraṇās, Mādāra Cennayya alone Has taken a gruel vow. Translated by: L M A Menezes, S M Angadi
Hindi Translation दूध का व्रत, मलाई का व्रत, मलाई न मिले, तो खिचडी का व्रत, मक्खन का व्रत, गुड का व्रत रखते हैं । मैं ने किसी काँजी के व्रती को नहीं देखा कूडलसंगमेश के शरणों में काँजी के व्रती मातंग चन्नय्या है ॥ Translated by: Banakara K Gowdappa
Telugu Translation పాలు వ్రతము పాలమీగడ వ్రతము మీగడ లేదన్న పొంగలి వ్రతము వెన్న వ్రతము; బెల్లము వ్రతము అంబలి వ్రతమగువారి నెవరినీ కాన సంగని శరణులందు అంబలి వ్రతమగువాడు మాదార చెన్నయ్య. Translated by: Dr. Badala Ramaiah
Tamil Translation பால்படையல், பாலேடு படையல், ஏடிலையெனின் கிச்சடி படையல், வெண்ணெய்ப்படையல், வெல்லப்படையல், கூழ் படைக்கு மெவரையுங் காணேன் கூடல சங்கனின் அடியாருள்ளே கூழ் படைப்போன் மாதாரச் சென்னையன். Translated by: Smt. Kalyani Venkataraman, Chennai
Marathi Translation व्रता चाले दूध, व्रता चाले साय खिचडीचिहि सोय, पाहियेली ना ना वस्तु मात्र, एका व्रतासाठी लोणी गूळ राहटी, चालतसे अंबिलीचा नाही, कुणी व्रतधारी आगळीच थोरी, चन्नयाची अंबिल त्याचे व्रत, करी क्षुधे तृप्त प्रसन्न देव भक्त, अंबिलीने कूडलसंगमदेवा ! तुझिया भक्तात चन्नय्या शिवभक्त, अद्वितीय अर्थ - दूध, तूप, साय, लोणी, गुळ, खिचडी हे सर्व पदार्थ परमेश्वराच्या नावावर व्रताची सबब पुढे करून स्वतःच खाणारे असतात. जिव्हेचे चोचले पुरवून घेण्यासाठी हे माजविलेले व्रताचे स्तोम होय. हे महात्मा बसवेश्वरांना मुळीच मान्य नाही. अशांना ते वासनेचे दास समजतात. दूध, तूप, लोणी, साय-मलाई-साखर हे गरीबाचे नित्याचे खाद्य नाही. जे व्रत करतात त्यातून मिळालेल्या उत्पन्नातून सुखाची चटणी भाकरी खातात. प्रभुचे शरण होऊन धर्माचे पालन करतात. असेच लोक माझ्या कूडलसंगमदेवाचे! (परमेश्वराचे) खरे भक्त होत, असा एक शिवशरण मांतग चन्नया दररोज श्रमातून मिळालेल्या कमाईतून आंबली करून परमेश्वरास अर्पण करीत असे हेच त्याचे व्रत होते. त्याची ती अमृतमय आंबली खऱ्या अर्थाने अर्पण होत असे. कायकातून म्हणजे श्रमातून मिळविलेलेच अन्न मग ने आंबली असो. प्रसाद होते. कारण कामचोर व ऐतखाऊ लोकांचे मिष्ठान्न देखिल प्रभूस अर्पण होणार नाही. Translated by Rajendra Jirobe, Published by V B Patil, Hirabaug, Chembur, Mumbai, 1983 दूधाचा नियम, दूध-सायीचा नियम, दूधाची साय नसेल तर, खिचडीचा नियम लोण्याचा नियम, गुळाचा नियम ! आंबलीचा नियम करणारे कोणी नाही कूडलसंगमदेवाच्या शरणात आंबलीचा नियम करणारा मादार चन्नय्या. Translated by Shalini Sreeshaila Doddamani
Urdu Translation کبھی کوئی بَرت رکھتا ہےخالص دودھ ہی پی کر کوئی مسکہ پہ گڑ پہ ، اوربالائی پہ رہتا ہے مگرمادار چنّیّا ہی ایسا ایک انسان ہے فقط امبیل پی کرجوبَرت رکھتا ہےبرسوں سے تمھارے واسطےاےمیرےدیوا کوڈلا سنگم Translated by: Hameed Almas
ಶಬ್ದಾರ್ಥಗಳು ಅಂಬಲಿ = ; ಕಿಚ್ಚಡಿ = ಜೋಳದ ನುಚ್ಚಿನ ಸಾಮಗ್ರಿ; ನೇಮ = ನಿಯಮ, ವೃತ;
ಕನ್ನಡ ವ್ಯಾಖ್ಯಾನ ಮೇಲಣ ವಚನದಲ್ಲಿ ಹೇಳಿರುವಂತೆ-ನೇಮದ ನಿಜವಾದ ನಿಯಮವನ್ನು ತಿಳಿಯದೆ, ತಿನ್ನುವುದೇ ನೇಮ, ಶ್ರೀಮಂತವಾಗಿ ತಿನ್ನುವುದೇ ಅದರ ನಿಯಮವೆಂಬಂತೆ-ಅಪ್ಪಟ ಹಾಲನ್ನೇ ಕುಡಿಯುವುದೆಂದು ಮೊದಲಿಗೆ ನೇಮ ಮಾಡಿಕೊಂಡು, ಹೆಚ್ಚಿನ ಬಾಯಿಚಪಲದಿಂದ-ಅದನ್ನೂ ನಿಷ್ಠೆಯಿಂದ ನಡೆಸಲಾರದೆ- ಹಾಲಿನ ಕೆನೆ, ಕಿಚ್ಚಡಿ, ಬೆಣ್ಣೆ, ಬೆಲ್ಲವೆಂದು ಕಾಲಕಾಲಕ್ಕೆ ನೇಮಗಳನ್ನು ಬದಲಿಸುತ್ತ, ನಿತ್ಯವೂ ಔತಣದೂಟವನ್ನೇ ಉಂಡು ತೇಗುತ್ತ-ಆ ತೇಗಿನ ಶಬ್ದವೇ ಓಂಕಾರವೆಂದೂ, ತಾವೇ ಶಿವಭಕ್ತರೆಂದೂ ಕೊಚ್ಚಿಕೊಳ್ಳುವ ಶ್ರೀಮಂತರನ್ನು ಬಸವಣ್ಣನವರು ಖಂಡಿಸುತ್ತಿದ್ದಾರೆ. ಮತ್ತು ಅರಮನೆಯಲ್ಲಿದ್ದರೂ-ಅಂಬಲಿಯಲ್ಲದುದೇನೂ ತನಗೆ ರುಚಿಸದೆಂದು ಸರಳಾಹಾರವನ್ನೇ ನೇಮಮಾಡಿಕೊಂಡಿದ್ದ ಮಾದಾರ ಚನ್ನಯ್ಯನನ್ನು ತಮಗೆ ಆದರ್ಶವೆಂಬಂತೆಯೂ ಬಸವಣ್ಣನವರು ಬಹಳವಾಗಿ ಮೆಚ್ಚುತ್ತಿರುವರು. ಭಕ್ತರಾಗಲಿ ಶರಣರಾಗಲಿ ಶ್ರೀಮಂತವಾದ ನೇಮಗಳನ್ನು ಹಿಡಿಯುತ್ತ ಹೋದರೆ ಅವರನ್ನು ಉಪಚರಿಸುವ ನಿರ್ಧನಿಕ ಶಿವಭಕ್ತರ ಪಾಡೇನು? ಬಡವನೆನ್ನದೆ ಬಲ್ಲಿದನೆನ್ನದೆ ಜನ ಒಂದಾಗಿ ಬಾಳಲು ಇಂಥ ಆಡಂಬರದ ನೇಮಗಳು ಅಡ್ಡಿಯಾಗಬಾರದೆಂಬುದೇ ಬಸವಣ್ಣನವರ ಅಭಿಪ್ರಾಯ (ನೋಡಿ ವಚನ 287)

- ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು